For Quick Alerts
ALLOW NOTIFICATIONS  
For Daily Alerts

3.30 ಕೋಟಿ ದಾಟಿದ ಅಟಲ್ ಪಿಂಚಣಿ ಯೋಜನಾ ದಾಖಲಾತಿ

|

ಅಟಲ್ ಪಿಂಚಣಿ ಯೋಜನಾ (ಎ.ಪಿ.ವೈ.)ವು ಭಾರತ ಸರಕಾರದ ಪಿಂಚಣಿ ಖಾತ್ರಿ ಯೋಜನೆಯಾಗಿದ್ದು, ಪಿ.ಎಫ್.ಆರ್.ಡಿ.ಎ.ಯು ಅನುಷ್ಠಾನ ಗೊಳಿಸುತ್ತಿದೆ. ಪ್ರಸಕ್ತ ಹಣಕಾಸು ವರ್ಷ 2021-22 ರಲ್ಲಿ 28 ಲಕ್ಷಕ್ಕೂ ಅಧಿಕ ಹೊಸ ಎ.ಪಿ.ವೈ. ಖಾತೆಗಳನ್ನು ತೆರೆಯಲಾಗಿದೆ. ಎ.ಪಿ.ವೈ. ಅಡಿಯಲ್ಲಿ ಒಟ್ಟು ದಾಖಲಾತಿ 2021ರ ಆಗಸ್ಟ್ 25 ರ ವೇಳೆಗೆ 3.30 ಕೋಟಿ ದಾಟಿದೆ.

ವಲಯವಾರು ಬ್ಯಾಂಕ್ ಗಳಲ್ಲಿ ವರ್ಷದಿಂದ ವರ್ಷಕ್ಕೆ ಆಗಿರುವ ಎ.ಪಿ.ವೈ. ದಾಖಲಾತಿ ವಿವರ ಈ ಕೆಳಗಿನಂತಿದೆ.

ವಲಯವಾರು ಬ್ಯಾಂಕ್(ಮಾರ್ಚ್ 31, 2016) ರಲ್ಲಿದ್ದಂತೆ(ಮಾರ್ಚ್ 31, 2021)ರಲ್ಲಿದ್ದಂತೆಏಪ್ರಿಲ್ 1, 2021 ರಿಂದ ಆಗಸ್ಟ್ 25, 2021ರವರೆಗೆ ಸೇರ್ಪಡೆ.(ಆಗಸ್ಟ್ 25, 2021)ರಲ್ಲಿದ್ದಂತೆ
ಸಾರ್ವಜನಿಕ ವಲಯದ ಬ್ಯಾಂಕುಗಳು1,693,1902,12,52,43520,74,4202,33,26,855
ಖಾಸಗಿ ಬ್ಯಾಂಕುಗಳು218,08619,86,46777,87520,64,342
ಹಣಕಾಸು ಬ್ಯಾಂಕ್ ಮತ್ತು ಪಾವತಿ ಬ್ಯಾಂಕ್---8539142247051078619
ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು476,37357,10,7704,21,10461,31,874
ಸಹಕಾರಿ ಬ್ಯಾಂಕ್‌ಗಳು21,90380,0734,55484,627
ಡಿ.ಒ.ಪಿ75,3433,32,1417,7743,39,915
ಒಟ್ಟು24,84,8953,02,15,80028,10,4323,30,26,232

ಪ್ರಸಕ್ತ ಹಣಕಾಸು ವರ್ಷ 2021-22ರಲ್ಲಿ 1 ಲಕ್ಷಕ್ಕೂ ಅಧಿಕ ಎ.ಪಿ.ವೈ. ದಾಖಲಾತಿಗಳನ್ನು ಹೊಂದಿರುವ ಮುಂಚೂಣಿ ಬ್ಯಾಂಕ್ ಗಳ ಪಟ್ಟಿ ಈ ಕೆಳಗಿನಂತಿದೆ:

ಕ್ರಮ ಸಂಖ್ಯೆಬ್ಯಾಂಕಿನ ಹೆಸರು2021ರ ಏಪ್ರಿಲ್ 1 ರಿಂದ 2021ರ ಆಗಸ್ಟ್ 24ರ ನಡುವೆ ದಾಖಲಾತಿಗೊಂಡ ಎ.ಪಿ.ವೈ. ಖಾತೆಗಳ ಸಂಖ್ಯೆ
01ಭಾರತೀಯ ಸ್ಟೇಟ್ ಬ್ಯಾಂಕ್7,99,428
02ಕೆನರಾ ಬ್ಯಾಂಕ್2,65,826
03ಏರ್ ಟೆಲ್ ಪಾವತಿ ಬ್ಯಾಂಕ್ ಲಿಮಿಟೆಡ್2,06,643
04ಬ್ಯಾಂಕ್ ಆಫ್ ಬರೋಡಾ2,01,009
05ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ1,74,291
06ಬ್ಯಾಂಕ್ ಆಫ್ ಇಂಡಿಯಾ1,30,362
07ಇಂಡಿಯನ್ ಬ್ಯಾಂಕ್1,13,739
08ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ1,04,905
09ಪಂಜಾಬ್ ನ್ಯಾಶನಲ್ ಬ್ಯಾಂಕ್1,01,459

2021ರ ಆಗಸ್ಟ್ 25 ರವರೆಗೆ ಎ.ಪಿ.ವೈ. ಅಡಿಯಲ್ಲಿ 10 ಲಕ್ಷಕ್ಕೂ ಅಧಿಕ ದಾಖಲಾತಿಗಳನ್ನು ಹೊಂದಿದ ಮುಂಚೂಣಿ ರಾಜ್ಯಗಳ ಪಟ್ಟಿ ಈ ಕೆಳಗಿನಂತಿವೆ:

ಕ್ರಮ ಸಂಖ್ಯೆರಾಜ್ಯದ ಹೆಸರುಎ.ಪಿ.ವೈ. ದಾಖಲಾತಿ ಸಂಖ್ಯೆ
01ಉತ್ತರ ಪ್ರದೇಶ49,65,922
02ಬಿಹಾರ31,31,675
03ಪಶ್ಚಿಮ ಬಂಗಾಳ26,18,656
04ಮಹಾರಾಷ್ಟ್ರ25,51,028
05ತಮಿಳುನಾಡು24,55,438
06ಆಂಧ್ರ ಪ್ರದೇಶ19,80,374
07ಕರ್ನಾಟಕ19,74,610
08ಮಧ್ಯ ಪ್ರದೇಶ19,19,795
09ರಾಜಸ್ಥಾನ16,16,050
10ಗುಜರಾತ್13,50,864
11ಒರಿಸ್ಸಾ12,45,837

2021ರ ಆಗಸ್ಟ್ 25 ರಂದು ಇರುವ ಒಟ್ಟು ದಾಖಲಾತಿ

2021ರ ಆಗಸ್ಟ್ 25 ರಂದು ಇರುವ ಒಟ್ಟು ದಾಖಲಾತಿ

ಎ.ಪಿ.ವೈ ಅಡಿಯಲ್ಲಿ 2021ರ ಆಗಸ್ಟ್ 25 ರಂದು ಇರುವ ಒಟ್ಟು ದಾಖಲಾತಿಗಳಲ್ಲಿ ಸುಮಾರು 78% ಚಂದಾದಾರರು ರೂ.1,000ದ ಪಿಂಚಣಿ ಯೋಜನೆಯನ್ನು ಆಯ್ಕೆ ಮಾಡಿಕೊಂಡಿದ್ದರೆ, ಸುಮಾರು 14% ಚಂದಾದಾರರು ರೂ.5,000 ಪಿಂಚಣಿ ಯೋಜನೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಜೊತೆಗೆ ಸುಮಾರು 44% ಮಂದಿ ಮಹಿಳಾ ಚಂದಾದಾರರಿದ್ದಾರೆ ಹಾಗು 44 % ಚಂದಾದಾರರು ಬಹಳ ಕಿರಿಯ ವಯಸ್ಸಿನಲ್ಲಿ ದಾಖಲಾತಿ ಮಾಡಿಕೊಳ್ಳುತ್ತಿದ್ದು ಅವರು 18-25 ವರ್ಷ ವಯೋಮಿತಿಗೆ ಸೇರಿದವರಾಗಿದ್ದಾರೆ.

ಎ.ಪಿ.ವೈ ಮೊಬೈಲ್ ಆಪ್‌

ಎ.ಪಿ.ವೈ ಮೊಬೈಲ್ ಆಪ್‌

ಇತ್ತೀಚೆಗೆ ಪಿ.ಎಫ್.ಆರ್.ಡಿ.ಎ.ಯು ಹೊಸ ಉಪಕ್ರಮಗಳನ್ನು ಕೈಗೆತ್ತಿಕೊಂಡಿದೆ. ಎ.ಪಿ.ವೈ ಮೊಬೈಲ್ ಆಪ್‌ನಲ್ಲಿ ಹೊಸ ಅಂಶಗಳ ಸೇರ್ಪಡೆ ಮತ್ತು ಉಮಾಂಗ್ ವೇದಿಕೆಯಲ್ಲಿ ಅದರ ಲಭ್ಯತೆ, ಎ.ಪಿ.ವೈ. ಪದೇ ಪದೇ ಕೇಳಲ್ಪಡುವ ಪ್ರಶ್ನೆಗಳನ್ನು ಸಕಾಲಿಕಗೊಳಿಸುವುದು, ಮತ್ತು ಎ.ಪಿ.ವೈ ಯೋಜನೆಯ ವ್ಯಾಪ್ತಿಯನ್ನು ಹೆಚ್ಚಿಸಲು ಹಾಗು ಈಗಿರುವ ಚಂದಾದಾರರ ಪ್ರಯೋಜನಕ್ಕಾಗಿ ಮತ್ತು ನಿರೀಕ್ಷಿತ ಎ.ಪಿ.ಐ. ಚಂದಾದಾರರ ಮತ್ತು ಎ.ಪಿ.ವೈ. ಸೇವಾ ಒದಗಣೆದಾರರ ಅನುಕೂಲಕ್ಕಾಗಿ 13 ಪ್ರಾದೇಶಿಕ ಭಾಷೆಗಳಲ್ಲಿ ನಾಗರಿಕ ಸನ್ನದುಗಳಂತಹ ಹೊಸ ಉಪಕ್ರಮಗಳನ್ನು ಅದು ಕೈಗೆತ್ತಿಕೊಂಡಿದೆ.

ದಾಖಲಾತಿ ಸಂಖ್ಯೆಯಲ್ಲಿ ಹೆಚ್ಚಳ
 

ದಾಖಲಾತಿ ಸಂಖ್ಯೆಯಲ್ಲಿ ಹೆಚ್ಚಳ

ಯೋಜನೆಯ ಆರಂಭವಾದಂದಿನಿಂದ ದಾಖಲಾತಿ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದರಿಂದ ಉತ್ತೇಜಿತಗೊಂಡಿರುವ ಪಿ.ಎಫ್.ಆರ್.ಡಿ.ಎ. ಯು ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ವಿವಿಧ ಎ.ಪಿ.ಐ. ಪ್ರಚಾರಾಂದೋಲನಗಳನ್ನು ಹಮ್ಮಿಕೊಳ್ಳುವ ಮೂಲಕ, ರಾಜ್ಯ ಮಟ್ಟದ ಬ್ಯಾಂಕರುಗಳ ಸಮಿತಿ (ಎಸ್.ಎಲ್.ಬಿ.ಸಿ.ಗಳು) ಮತ್ತು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (ಎನ್.ಆರ್.ಎಲ್.ಎಂ.) ಗಳೊಂದಿಗೆ ಸಮನ್ವಯ ಸಾಧಿಸುವ ಮೂಲಕ, ಮುದ್ರಣ, ಸಾಮಾಜಿಕ ಮತ್ತು ಇಲೆಕ್ಟ್ರಾನಿಕ್ ಮಾಧ್ಯಮಗಳು ಮತ್ತು ಇತರ ಮಾಧ್ಯಮಗಳಲ್ಲಿ ಜಾಹೀರಾತುಗಳನ್ನು ಮಾಡುವ ಮೂಲಕ ಹಣಕಾಸು ವರ್ಷ 2021-22 ರಲ್ಲಿ ಎ.ಪಿ.ವೈ. ಅಡಿಯಲ್ಲಿ ಒಟ್ಟು ದಾಖಲಾತಿಯನ್ನು ಇನ್ನಷ್ಟು ಹೆಚ್ಚಿಸಲು ಮತ್ತು ಭಾರತವನ್ನು ಪಿಂಚಣಿಯುಕ್ತ ಸಮಾಜವನ್ನಾಗಿ ರೂಪಿಸುವ ನಿಟ್ಟಿನಲ್ಲಿ ತನ್ನ ಕೊಡುಗೆಯನ್ನು ನೀಡಲಿದೆ.

ಕನಿಷ್ಠ ಪಿಂಚಣಿಯನ್ನು ಖಾತ್ರಿ

ಕನಿಷ್ಠ ಪಿಂಚಣಿಯನ್ನು ಖಾತ್ರಿ

ಎ.ಪಿ.ಐ.ಯು 18-40 ವರ್ಷಗಳ ವಯೋಮಿತಿಯ ಯಾವುದೇ ನಾಗರಿಕರು ಭಾರತೀಯ ಬ್ಯಾಂಕ್ ಅಥವಾ ಅಂಚೆ ಕಚೇರಿ ಶಾಖೆಗಳಲ್ಲಿ ಹೊಂದಿರುವ ಉಳಿತಾಯ ಖಾತೆಯ ಮೂಲಕ ಸೇರ್ಪಡೆಗೊಳ್ಳಲು ಅವಕಾಶ ಕಲ್ಪಿಸುತ್ತದೆ. ಈ ಯೋಜನೆ ಅಡಿಯಲ್ಲಿ ಚಂದಾದಾರರು ತಿಂಗಳೊಂದಕ್ಕೆ ಕನಿಷ್ಠ ಪಿಂಚಣಿಯನ್ನು ಖಾತ್ರಿಯಾಗಿ ಪಡೆಯುತ್ತಾರೆ. ಅವರಿಗೆ 60 ವರ್ಷವಾದಂದಿನಿಂದ ಅವರು ಕಟ್ಟಿದ ಚಂದಾ ಹಣವನ್ನು ಅವಲಂಬಿಸಿ ಮಾಸಿಕ 1,000 ರೂ ಗಳಿಂದ 5,000 ರೂಗಳವರೆಗೆ ಪಿಂಚಣಿಯನ್ನು ಪಡೆಯುತ್ತಾರೆ. ಅದೇ ಪಿಂಚಣಿಯನ್ನು ಚಂದಾದಾರರ ಸಂಗಾತಿಗೂ ನೀಡಲಾಗುತ್ತದೆ ಮತ್ತು ಇವರಿಬ್ಬರೂ ಮೃತರಾದರೆ ಚಂದಾದಾರರ 60 ನೇ ವಯಸ್ಸಿನವರೆಗೆ ಒಟ್ಟುಗೂಡಿದ ಪಿಂಚಣಿ ಸಂಪತ್ತನ್ನು ನಾಮಿನಿಗೆ (ಉತ್ತರಾಧಿಕಾರಿಗೆ) ಮರಳಿಸಲಾಗುವುದು.

ಉಳಿತಾಯ ಖಾತೆ ಹೊಂದಿರುವ ಅರ್ಜಿದಾರ

ಉಳಿತಾಯ ಖಾತೆ ಹೊಂದಿರುವ ಅರ್ಜಿದಾರ

ಯೋಜನೆಯನ್ನು ವಿವಿಧ ವರ್ಗಗಳ ಬ್ಯಾಂಕುಗಳು ಮತ್ತು ಅಂಚೆ ಇಲಾಖೆಯ 266 ನೊಂದಾಯಿತ ಎ.ಪಿ.ವೈ. ಸೇವಾ ಪೂರೈಕೆದಾರರ ಮೂಲಕ ವಿತರಿಸಲಾಗುತ್ತದೆ. ಈ ಯೋಜನೆ ಉಳಿತಾಯ ಖಾತೆ ಹೊಂದಿರುವ ಅರ್ಜಿದಾರರಿಗೆ ಮಾತ್ರವೇ ಲಭ್ಯವಿರುವುದರಿಂದ, ಪಿ.ಎಫ್.ಆರ್.ಡಿ.ಎ. ಯು ಈ ಯೋಜನೆಯ ವ್ಯಾಪ್ತಿಯನ್ನು ವಿಸ್ತರಿಸಲು ಎಲ್ಲಾ ಬ್ಯಾಂಕುಗಳಿಗೆ ಅವರ ಈಗಿರುವ ಮತ್ತು ನಿರೀಕ್ಷಿತ ಗ್ರಾಹಕರಿಗೆ ಯೋಜನೆಯ ಬಗ್ಗೆ ಮಾಹಿತಿ ಒದಗಿಸುವಂತೆ ಸಲಹೆ ಮಾಡುತ್ತಿರುತ್ತದೆ.

English summary

Atal Pension Yojana total enrolments crossed Rs 3.30 crore

Atal Pension Yojana total enrolments crossed 3.30 crore. More than 28 lakh subscribers enrolled in first five months of current FY 2021-22.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X