For Quick Alerts
ALLOW NOTIFICATIONS  
For Daily Alerts

ದ್ವಿಚಕ್ರ ವಾಹನಗಳ ಫಾಸ್ಟ್ ಚಾರ್ಜಿಂಗ್: ಏತರ್ ಎನರ್ಜಿ ಭಾರತದ ಅತಿದೊಡ್ಡ ನೆಟ್ವರ್ಕ್

|

ಏತರ್ ಎನರ್ಜಿ ಸಂಸ್ಥೆ ಭಾರತದಾದ್ಯಂತ 56 ನಗರಗಳಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಫಾಸ್ಟ್ ಚಾರ್ಜಿಂಗ್‌ಗೆ ೫೦೦ಕ್ಕೂ ಗ್ರಿಡ್‌ಗಳನ್ನು ಸ್ಥಾಪಿಸಿದೆ. ಈ ಮೂಲಕ ಏತರ್ ಎನರ್ಜಿ ಫಾಸ್ಟ್ ಚಾರ್ಜಿಂಗ್‌ನ ಅತಿ ದೊಡ್ಡ ನೆಟ್ವರ್ಕ್ ಹೊಂದಿರುವ ಸಂಸ್ಥೆ ಎನಿಸಿದೆ.

 

ಇಷ್ಟಕ್ಕೆ ಸುಮ್ಮನಾಗದ ಏತರ್ ಎನರ್ಜಿ ೨೦೨೩ರ ಹಣಕಾಸು ವರ್ಷದಲ್ಲಿ ಒಟ್ಟು ೧೪೦೦ ಫಾಸ್ಟ್ ಚಾರ್ಜಿಂಗ್ ಗ್ರಿಡ್‌ಗಳ ಜಾಲ ರೂಪಿಸುವ ಗುರಿ ಹೊಂದಿದೆ. ಸುಮಾರು ಇನ್ನೊಂದೂವರೆ ವರ್ಷದಲ್ಲಿ ಇನ್ನೂ ೮೦೦-೮೦೦ ಗ್ರಿಡ್‌ಗಳನ್ನು ಏತರ್ ಇಂಡಿಯಾ ಭಾರತದಲ್ಲಿ ಸ್ಥಾಪಿಸುವ ನಿರೀಕ್ಷೆ ಇದೆ.

 

ತಿಂಗಳಲ್ಲಿ 2ನೇ ಬಾರಿ ಎಫ್‌ಡಿ ದರ ಏರಿಸಿದ ಆಕ್ಸಿಸ್, 75 ಮೂಲಾಂಕ ಹೆಚ್ಚಳ!ತಿಂಗಳಲ್ಲಿ 2ನೇ ಬಾರಿ ಎಫ್‌ಡಿ ದರ ಏರಿಸಿದ ಆಕ್ಸಿಸ್, 75 ಮೂಲಾಂಕ ಹೆಚ್ಚಳ!

ಬಹಳ ಯೋಜಿತ ರೀತಿಯಲ್ಲಿ ಏತರ್ ಗ್ರಿಡ್‌ಗಳನ್ನು ಸ್ಥಾಪಿಸಲಾಗಿದೆ. ಅದರ ಶೇ. ೬೦ರಷ್ಟು ಗ್ರಿಡ್‌ಗಳು ಎರಡು ಮತ್ತು ಮೂರನೇ ಸ್ತರದ ನಗರಗಳಲ್ಲೇ ಸ್ಥಾಪಿತವಾಗಿವೆ. ಈ ಗ್ರಿಡ್‌ನಗಳಲ್ಲಿ ಶೇ. ೮೦ರಷ್ಟು ಚಾರ್ಜಿಂಗ್ ಮಾಡಿಕೊಳ್ಳಲು ಸಾಧ್ಯ. ನಿಮಿಷಕ್ಕೆ ೧.೫ ಕಿಮೀಯಂತೆ ಚಾರ್ಜ್ ಆಗುತ್ತದೆ. ಕೇವಲ ಟೂ ವೀಲರ್ ಮಾತ್ರವಲ್ಲ ಕಾರು ಇತ್ಯಾದಿ ಎಲೆಕ್ಟ್ರಿಕ್ ಫೋರ್ ವೀಲರ್‌ಗಳನ್ನೂ ಚಾರ್ಜಿಂಗ್ ಮಾಡಲು ಅವಕಾಶ ಇದೆ.

ಇ-ವಾಹನಗಳ ಚಾರ್ಜಿಂಗ್: ಭಾರತದ ಅತಿದೊಡ್ಡ ಕಂಪನಿ ಏತರ್ ಎನರ್ಜಿ

ಉಚಿತ ಚಾರ್ಜಿಂಗ್ ಆಫರ್
ಏತರ್ ಗ್ರಿಡ್ ಆ್ಯಪ್ ತಯಾರಿಸಲಾಗಿದ್ದು ಅದನ್ನು ಡೌನ್‌ಲೋಡ್ ಮಾಡಿಕೊಂಡರೆ ಏತರ್‌ನ ಚಾರ್ಜಿಂಗ್ ಗ್ರಿಡ್‌ಗಳು ಎಲ್ಲೆಲ್ಲಿವೆ ಎಂಬುದನ್ನು ನೋಡಬಹುದು. ನಿಮಗೆ ಅತಿ ಸಮೀಪದ ಚಾರ್ಜಿಂಗ್ ಸ್ಟೇಷನ್‌ಗಳು ಎಲ್ಲೆಲ್ಲಿವೆ ಎಂಬುದನ್ನು ಈ ಮೊಬೈಲ್ ಆ್ಯಪ್ ತೋರಿಸುತ್ತದೆ.

ಅಂದಹಾಗೆ, ಎತರ್ ಎನರ್ಜಿ ಸಂಸ್ಥೆ ತನ್ನ ಚಾರ್ಜಿಂಗ್ ಸ್ಟೇಷನ್‌ಗಳಲ್ಲಿ ಡಿಸೆಂಬರ್‌ವರೆಗೂ ಉಚಿತವಾಗಿ ಸೇವೆ ಒದಗಿಸುತ್ತಿದೆ.

Diwali Muhurat Trading 2022: ದಿನಾಂಕ, ಅವಧಿ, ಮಹತ್ವ, ವಿಶೇಷದ ಬಗ್ಗೆ ಮಾಹಿತಿDiwali Muhurat Trading 2022: ದಿನಾಂಕ, ಅವಧಿ, ಮಹತ್ವ, ವಿಶೇಷದ ಬಗ್ಗೆ ಮಾಹಿತಿ

ಏತರ್ ಎಲೆಕ್ಟ್ರಿಕ್ ಸ್ಕೂಟರ್
ಏತರ್ ಎನರ್ಜಿ ಸಂಸ್ಥೆ ದೇಶದ ೪೬ ನಗರಗಳಲ್ಲಿ ಸುಮಾರು ಸಾವಿರ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಿದೆ. ಬೆಂಗಳೂರು, ಮೈಸೂರು, ಹುಬ್ಬಳ್ಳಿ ನಗರಗಳಲ್ಲೂ ಏತರ್ ಸ್ಕೂಟರ್ ಮಾರಲಾಗುತ್ತಿದೆ. ೨೫೦೦ ರೂ ಕೊಟ್ಟು ಏತರ್‌ನ ಇ-ಸ್ಕೂಟರ್ ಬುಕ್ ಮಾಡಬಹುದು.

ಕರ್ನಾಟಕ ಸರಕಾರದೊಂದಿಗೆ ಒಪ್ಪಂದ ಮಾಡಿಕೊಂಡಿರುವ ಏತರ್ ಎನರ್ಜಿ ನಮ್ಮ ರಾಜ್ಯದ ಹಲವು ನಗರಗಳಲ್ಲಿ ಇವಿ ಚಾರ್ಜಿಂಗ್ ಸ್ಟೇಷನ್ ಸ್ಥಾಪಿಸಿದೆ. ಪಾರ್ಕ್ ಪ್ಲಸ್, ಮಜೆಂಟಾ ಪವರ್ ಮೊದಲಾದ ಸಂಸ್ಥೆಗಳ ಸಹಯೋಗವನ್ನೂ ಏತರ್ ಎನರ್ಜಿ ಪಡೆದುಕೊಂಡಿದೆ. ಹಾಗೆಯೇ, ಏತರ್ ಎನರ್ಜಿ ಇ-ವಾಹನಗಳ ಮಾಲೀಕರು ತಮ್ಮ ನಿವಾಸದ ಕಟ್ಟಡಗಳಲ್ಲೇ ಚಾರ್ಜಿಂಗ್ ವ್ಯವಸ್ಥೆ ಕಲ್ಪಿಸುವ ಪ್ರಯತ್ನದಲ್ಲೂ ಸಂಸ್ಥೆ ಇದೆ.

English summary

Ather Energy Becomes Largest Fast-Charging Network For E-Scooters in India

Bengaluru based Ather Energy has installed 500 fast charging grids across India. And has plans to instal upto 1400 grids by 2023 FY. It is now largest fast charging network for electric 2-wheelers.
Story first published: Friday, October 14, 2022, 18:45 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X