For Quick Alerts
ALLOW NOTIFICATIONS  
For Daily Alerts

3 ತಿಂಗಳಲ್ಲಿ ಆಕ್ಸಿಸ್ ಬ್ಯಾಂಕ್ ಲಾಸ್ 1388 ಕೋಟಿ

|

ಖಾಸಗಿ ವಲಯದ ಆಕ್ಸಿಸ್ ಬ್ಯಾಂಕ್ ಗುರುವಾರ ಜನವರಿ- ಮಾರ್ಚ್ ತ್ರೈಮಾಸಿಕಕ್ಕೆ 1388 ಕೋಟಿ ರುಪಾಯಿ ನಿವ್ವಳ ನಷ್ಟ ದಾಖಲಿಸಿದೆ. ಹೆಚ್ಚಿನ ಮೊತ್ತದ ಪ್ರಾವಿಷನ್ ಮೀಸಲಿಟ್ಟಿರುವುದರಿಂದ ಇಷ್ಟು ದೊಡ್ಡ ಮೊತ್ತದ ನಷ್ಟವಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಆಕ್ಸಿಸ್ ಬ್ಯಾಂಕ್ 1505 ಕೋಟಿ ನಿವ್ವಳ ಲಾಭ ದಾಖಲಿಸಿತ್ತು.

ಬ್ಯಾಂಕ್ ನ ಒಟ್ಟಾರೆ ಪ್ರಾವಿಷನ್ 18 ಪರ್ಸೆಂಟ್ ಹೆಚ್ಚಳವಾಗಿದ್ದು, ಮಾರ್ಚ್ 2020ರ ಕೊನೆಗೆ 7,730 ಕೋಟಿ ರುಪಾಯಿಯನ್ನು ಮೀಸಲಿರಿಸಲಾಗಿದೆ. ಕಳೆದ ವರ್ಷ ಇದೇ ತ್ರೈಮಾಸಿಕಕ್ಕೆ 2711 ಕೋಟಿ ರುಪಾಯಿ ಎತ್ತಿಡಲಾಗಿತ್ತು. ಕಳೆದ ತ್ರೈಮಾಸಿಕದಲ್ಲಿ ಕೊರೊನಾ ಕಾರಣಕ್ಕೆ ಹೆಚ್ಚುವರಿಯಾಗಿ 3000 ಕೋಟಿ ರುಪಾಯಿ ಪ್ರತ್ಯೇಕವಾಗಿ ಇರಿಸಲಾಗಿದೆ.

2021ರ ಭಾರತದ ಜಿಡಿಪಿ ಅಂದಾಜು 1.9% : 29 ವರ್ಷಗಳಲ್ಲೇ ಅತ್ಯಂತ ಕಡಿಮೆ2021ರ ಭಾರತದ ಜಿಡಿಪಿ ಅಂದಾಜು 1.9% : 29 ವರ್ಷಗಳಲ್ಲೇ ಅತ್ಯಂತ ಕಡಿಮೆ

ನಿವ್ವಳ ಬಡ್ಡಿ ಆದಾಯವು ಕಳೆದ ವರ್ಷ 5706 ಕೋಟಿ ಇತ್ತು. ಈ ಬಾರಿ ಇದಕ್ಕಿಂತ 19 ಪರ್ಸೆಂಟ್ ಹೆಚ್ಚಳವಾಗಿ, 6808 ಕೋಟಿ ರುಪಾಯಿ ಆಗಿದೆ. ಮಾರ್ಚ್ 2020ರ ಕೊನೆಗೆ ಅನುತ್ಪಾದಕ ಆಸ್ತಿ (ಎನ್ ಪಿಎ) 30,233 ಕೋಟಿ ಇದೆ. ಕಳೆದ ವರ್ಷ ಇದೇ ಅವಧಿಗೆ 29,789 ಕೋಟಿ ಇತ್ತು.

3 ತಿಂಗಳಲ್ಲಿ ಆಕ್ಸಿಸ್ ಬ್ಯಾಂಕ್ ಲಾಸ್ 1388 ಕೋಟಿ

ಆಕ್ಸಿಸ್ ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕರು ಹಾಗೂ ಸಿಇಒ ಆದ ಅಮಿತಾಬ್ ಚೌಧರಿ ಮಾತನಾಡಿ, ಬ್ಯಾಂಕ್ ಠೇವಣಿ ಪ್ರಮಾಣದಲ್ಲಿ ವರ್ಷದಿಂದ ವರ್ಷಕ್ಕೆ 19% ಹಾಗೂ ಸಾಲದ ಪ್ರಮಾಣಕ್ಕೆ 15% ಏರಿಕೆ ಆಗಿದೆ ಎಂದು ಹೇಳಿದ್ದಾರೆ.

English summary

Axis Bank Net Loss For Jan- March 1388 Crore

Axis Bank net loss for Jan- March 1388 crore rupees. Here is the complete details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X