For Quick Alerts
ALLOW NOTIFICATIONS  
For Daily Alerts

ಮಾರ್ಚ್‌ 2021ರ ಬ್ಯಾಂಕ್ ರಜಾ ದಿನಗಳು: 11 ದಿನಗಳು ಮುಚ್ಚಲ್ಪಡಲಿದೆ!

|

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮುಂಬರುವ ತಿಂಗಳು ಮಾರ್ಚ್‌ನ ಕ್ಯಾಲೆಂಡರ್‌ ಅನ್ನು ಪ್ರಕಟಿಸಿದ್ದು, ಯಾವ ದಿನಗಳು ಬ್ಯಾಂಕ್‌ಗಳು ಮುಚ್ಚಲ್ಪಡಲಿದೆ ಎಂದು ಸ್ಪಷ್ಟಪಡಿಸಿದೆ.

ಮಾರ್ಚ್‌ 2021ರಲ್ಲಿ ಐದು ಹಬ್ಬದ ರಜಾದಿನಗಳ ಜೊತೆಗೆ ನಾಲ್ಕು ಭಾನುವಾರ ಮತ್ತು ಎರಡು ಶನಿವಾರದಂದು ಬ್ಯಾಂಕುಗಳು ಮುಚ್ಚಲ್ಪಡುತ್ತವೆ . ಈ ಮೂಲಕ ಬ್ಯಾಂಕ್‌ಗಳ ಒಟ್ಟು ರಜಾದಿನಗಳು ಮಾರ್ಚ್‌ನಲ್ಲಿ 11 ದಿನಗಳು.

ಬೇರೆ ವ್ಯವಹಾರದ ರೀತಿಯಲ್ಲಿ ಬ್ಯಾಂಕ್‌ನ ರಜಾದಿನಗಳು ಆಯಾ ರಾಜ್ಯಗಳ ಪ್ರಕಾರ ಭಿನ್ನವಾಗಿರುತ್ತದೆ. ಕೆಲವೊಂದು ಬ್ಯಾಂಕ್‌ಗಳು ಕೆಲವೊಂದು ಹಬ್ಬದ ದಿನದಂದು ರಜೆ ಇರುವುದಿಲ್ಲ. ಇದೆಲ್ಲವು ನಿರ್ದಿಷ್ಟ ರಾಜ್ಯದಲ್ಲಿ ಆಚರಿಸುವ ಹಬ್ಬಗಳ ಮೇಲೆ ಅವಲಂಬಿತವಾಗಿರುತ್ತದೆ.

ಮಾರ್ಚ್‌ 2021ರ ಬ್ಯಾಂಕ್ ರಜಾ ದಿನಗಳ ಪಟ್ಟಿ ಇಲ್ಲಿದೆ

 

ಮಾರ್ಚ್ 2021ರಲ್ಲಿ ಬ್ಯಾಂಕ್ ರಜಾ ದಿನಗಳು:

ಮಾರ್ಚ್ 5: ಮಿಜೋರಾಂನಲ್ಲಿ ಚಾಪ್ಚಾರ್ ಕುಟ್ ಆಚರಣೆ

ಮಾರ್ಚ್ 11: ಮಹಾಶಿವರಾತ್ರಿ

ಮಾರ್ಚ್‌ 13: ಎರಡನೇ ಶನಿವಾರ

ಮಾರ್ಚ್ 22: ಬಿಹಾರ ದಿನಾಚರಣೆ ಹಿನ್ನೆಲೆ ಬಿಹಾರದ ಬ್ಯಾಂಕ್‌ಗಳು ಮುಚ್ಚಲ್ಪಡಲಿವೆ

ಮಾರ್ಚ್ 27: ನಾಲ್ಕನೇ ಶನಿವಾರ

ಮಾರ್ಚ್ 29, 30: ಹೋಳಿ ಸಂಭ್ರಮಾಚರಣೆ

ಇದರ ಜೊತೆಗೆ ಎರಡು ಸಾರ್ವಜನಿಕ ವಲಯದ ಬ್ಯಾಂಕುಗಳ ಖಾಸಗೀಕರಣವನ್ನು ವಿರೋಧಿಸಿ ಮಾರ್ಚ್ 15 ರಿಂದ ಒಂಬತ್ತು ಬ್ಯಾಂಕ್ ನೌಕರರ ಸಂಘಗಳ (ಯುಎಫ್‌ಬಿಯು) ಎರಡು ದಿನಗಳ ಮುಷ್ಕರವನ್ನು ಘೋಷಿಸಿದೆ. ಆದಾಗ್ಯೂ, ಈ ಎರಡು ದಿನಗಳಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಯಾವುದೇ ಸ್ಪಷ್ಟವಾದ ಉತ್ತರವಿಲ್ಲ.

English summary

Bank Holidays in March 2021: Banks to remain closed for 11 days this month

RBI has published a calendar in which it has specified the dates on which the banks will remain closed for business in March
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X