ಬೆಂಗಳೂರಿನ ಹನುಮಂತನಗರದಲ್ಲಿರುವ ಇಂಡಿಯನ್ ಬ್ಯಾಂಕ್ ಶಾಖೆಯ ಮ್ಯಾನೇಜರ್ ಇತ್ತೀಚೆಗೆ ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾದ ಯುವತಿಯೊಬ್ಬಳಿಗೆ 5.7 ಕೋಟಿ ರೂಪಾಯಿ ಜಮೆ ಮಾಡಿ ಪೇಚಿಗೆ ಸಿಲುಕಿಕೊಂಡಿದ್ದಾರೆ. ಸದ್ಯ ಬಂಧನಕ್ಕೆ ಒಳಗಾಗಿದ್ದಾರೆ.
ಇಂಡಿಯನ್ ಬ್ಯಾಂಕ್‌ನ ವ್ಯವಸ್ಥಾಪಕರು ಆರೋಪಿ ಹರಿಶಂಕರ್ ವಿರುದ್ಧ ದೂರು ದಾಖಲು ಮಾಡಿದ್ದು, ನ್ಯಾಯಾಲಯ ಆರೋಪಿಗೆ ಹತ್ತು ದಿನಗಳ ಪೊಲೀಸ್ ಕಸ್ಟಡಿ ವಿಧಿಸಿದೆ. ಇನ್ನು ಶಂಕರ್ ಅವರ ಸಹೋದ್ಯೋಗಿಗಳಾದ ಅಸಿಸ್ಟೆಂಟ್ ಬ್ರಾಂಚ್ ಮ್ಯಾನೇಜರ್ ಕೌಸಲ್ಯ ಜೆರಾಯಿ ಮತ್ತು ಕ್ಲರ್ಕ್ ಮುನಿರಾಜು ಅವರನ್ನೂ ಪೊಲೀಸರು ಎಫ್‌ಐಆರ್‌ನಲ್ಲಿ ಶಂಕಿತರು ಎಂದು ಹೆಸರಿಸಿದ್ದಾರೆ.
ಈ ವಂಚನೆಯು ಮೇ 13 ಮತ್ತು 19 ರ ನಡುವೆ ನಡೆದಿದೆ. ಡೇಟಿಂಗ್ ಆಪ್‌ನಲ್ಲಿ ಗರ್ಲ್ ಫ್ರೆಂಡ್‌ನಿಂದ ವಂಚನೆಗೆ ಒಳಗಾಗಿ ಅಷ್ಟೂ ಹಣವನ್ನು ಕಳೆದುಕೊಂಡಿದ್ದೇನೆ ಎಂದು ಬ್ಯಾಂಕ್ ಮ್ಯಾನೇಜರ್ ಹೇಳಿಕೊಂಡಿದ್ದಾರೆ. ಪೊಲೀಸರು ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

ಡೇಟಿಂಗ್ ಆಪ್‌ನಲ್ಲಿ ಪರಿಚಯವಾದ ಯುವತಿಯಿಂದ ವಂಚನೆ
ಡೇಟಿಂಗ್ ಆಪ್‌ನಲ್ಲಿ ಬ್ಯಾಂಕ್ ಮ್ಯಾನೇಜರ್ನನ್ನು ಪರಿಚಯಿಸಿಕೊಂಡ ಯುವತಿಯೊಬ್ಬಳು ಸಲುಗೆ ಬೆಳೆಸಿಕೊಂಡು ಈ ಭಾರೀ ಮೊತ್ತವನ್ನು ಎಗರಿಸಿಕೊಂಡಿದ್ದಾಳೆ. ಹನುಮಂತ ನಗರದ ಇಂಡಿಯನ್ ಬ್ಯಾಂಕ್‍ನಲ್ಲಿ ಕೆಲಸ ಮಾಡುತ್ತಿದ್ದ ಮ್ಯಾನೇಜರ್ ಹರಿಶಂಕರ್ ಹಣ ಕಳೆದುಕೊಂಡಿರುವ ವ್ಯಕ್ತಿಯಾಗಿದ್ದಾರೆ.
ಪೊಲೀಸರ ಪ್ರಕಾರ ಮಹಿಳಾ ಗ್ರಾಹಕರು ತಮ್ಮ ಹೆಸರಿನಲ್ಲಿ 1.3 ಕೋಟಿ ರೂಪಾಯಿಗಳನ್ನು ಸ್ಥಿರ ಠೇವಣಿ ಮಾಡಿದ್ದಾರೆ. ಅದರ ಆಧಾರ ಮೇಲೆ 75 ಲಕ್ಷ ರೂಪಾಯಿ ಸಾಲವನ್ನು ಪಡೆದರು. ಗ್ರಾಹಕರು ಸಂಬಂಧಿತ ದಾಖಲೆಗಳನ್ನು ಸಲ್ಲಿಸಿದರು. ಆದರೆ ಆರೋಪಿ ದಾಖಲೆಯನ್ನು ತಿದ್ದಿ, ಹಲವು ಕಂತುಗಳಲ್ಲಿ 5.7 ರೂಪಾಯಿ ಪಡೆದಿದ್ದಾರೆ.
ಆಂತರಿಕ ತನಿಖೆ ನಡೆಸಿದ ಬ್ಯಾಂಕ್, ಪಶ್ಚಿಮ ಬಂಗಾಳದ ಹಲವು ಬ್ಯಾಂಕ್‌ಗಳ 28 ಬ್ಯಾಂಕ್ ಖಾತೆಗಳಿಗೆ ಮತ್ತು ಕರ್ನಾಟಕದ ಎರಡು ಖಾತೆಗಳಿಗೆ 136 ವಹಿವಾಟುಗಳಲ್ಲಿ ಹಣವನ್ನು ವರ್ಗಾವಣೆ ಮಾಡಲಾಗಿದೆ ಎಂದು ಬಹಿರಂಗಪಡಿಸಿದೆ. ಹರಿಶಂಕರ್ 12.5 ಲಕ್ಷ ರೂಪಾಯಿ ವೈಯಕ್ತಿಕ ಹಣವನ್ನು ಖಾತೆಗೆಳಿಗೆ ವರ್ಗಾವಣೆ ಮಾಡಲಾಗಿದೆ. ನಂತರ ಈ ಅವ್ಯವಹಾರ ನಡೆದಿದೆ ಎಂದು ತನಿಖೆಯಿಂದ ತಿಳಿದು ಬಂದಿದೆ.


Click it and Unblock the Notifications