For Quick Alerts
ALLOW NOTIFICATIONS  
For Daily Alerts

ಬ್ಯಾಂಕ್ ಗಳಿಗೆ 43 ದಿನದಲ್ಲಿ ಬಂದ ಠೇವಣಿ 2.87 ಲಕ್ಷ ಕೋಟಿ

|

ಬ್ಯಾಂಕ್ ಗಳಲ್ಲಿನ ಠೇವಣಿ 2,87,495 ಕೋಟಿ ರುಪಾಯಿ ಜಾಸ್ತಿ ಆಗಿದೆ. ಅಂದರೆ 2.87 ಲಕ್ಷ ಕೋಟಿ ರುಪಾಯಿಯಷ್ಟು ಡೆಪಾಸಿಟ್ ಮಾರ್ಚ್ 27ರಿಂದ ಮೇ 8ನೇ ತಾರೀಕಿನ ಮಧ್ಯೆ ಬಂದಿದೆ. ಕೇಂದ್ರ ಸರ್ಕಾರ ಘೋಷಣೆ ಮಾಡಿದ ಆರ್ಥಿಕ ಪ್ಯಾಕೇಜ್ ಮೊತ್ತಕ್ಕೆ ಹೋಲಿಸಿದರೆ, ಅದರ ಒಟ್ಟು ಮೊತ್ತದ 13% ಪರ್ಸೆಂಟ್ ಗೂ ಹೆಚ್ಚು ಹಣವನ್ನು ಜನರು ಬ್ಯಾಂಕ್ ಗಳಲ್ಲಿ ಡೆಪಾಸಿಟ್ ಮಾಡಿದ್ದಾರೆ.

 

ಷೇರು ಮಾರ್ಕೆಟ್ ನಲ್ಲಿ ಅನಿಶ್ಚಿತತೆ, ಡೆಟ್ ಮಾರ್ಕೆಟ್ ನಲ್ಲಿನ ಅಪಾಯ, ಮಹಿಳಾ ಜನ್ ಧನ್ ಖಾತೆಗಳಿಗೆ ಹಣ ಬಂದಿದ್ದು ಹಾಗೂ ರೈತರಿಗೆ ಬಂದ ನೇರ ಹಣ ವರ್ಗಾವಣೆ ಇವೆಲ್ಲವೂ ಸೇರಿಕೊಂಡು, ಇಷ್ಟು ದೊಡ್ಡ ಮೊತ್ತದ ಡೆಪಾಸಿಟ್ ಬ್ಯಾಂಕ್ ಗಳಿಗೆ ಬರುವಂತಾಗಿದೆ.

 

ಭಾರತದಿಂದ 1.20 ಲಕ್ಷ ಕೋಟಿ ಬಂಡವಾಳ ಹಿಂಪಡೆದ ವಿದೇಶಿ ಹೂಡಿಕೆದಾರರುಭಾರತದಿಂದ 1.20 ಲಕ್ಷ ಕೋಟಿ ಬಂಡವಾಳ ಹಿಂಪಡೆದ ವಿದೇಶಿ ಹೂಡಿಕೆದಾರರು

ಇದೇ ಸಂದರ್ಭದಲ್ಲಿ, ಮೇಲ್ಕಂಡ ಅವಧಿಯಲ್ಲೇ ಎಲ್ಲ ಷೆಡ್ಯೂಲ್ ಬ್ಯಾಂಕ್ ಗಳು ಒಟ್ಟಾಗಿ ಸೇರಿ ಕ್ರೆಡಿಟ್ ಪೋರ್ಟ್ ಫೋಲಿಯೋ 1,24,073 ಕೋಟಿ ಇಳಿಕೆಯಾಗಿದೆ. ಜಾಗತಿಕವಾಗಿ ಕೊರೊನಾದಿಂದ ಆಗಿರುವ ಪರಿಣಾಮ ಹಾಗೂ ದೇಶದಾದ್ಯಂತ ಲಾಕ್ ಡೌನ್ ಪ್ರಭಾವ ಇದು.

ಬ್ಯಾಂಕ್ ಗಳಿಗೆ 43 ದಿನದಲ್ಲಿ ಬಂದ ಠೇವಣಿ 2.87 ಲಕ್ಷ ಕೋಟಿ

ಹೊಸದಾಗಿ ಬ್ಯಾಂಕ್ ಗಳಿಂದ ಸಾಲ ವಿತರಣೆ ಆಗುತ್ತಿಲ್ಲ ಅನ್ನೋದು ಇದಕ್ಕೆ ಒಂದು ಕಾರಣವಾದರೆ, ಮರುಪಾವತಿ ಮಾಡುವುದರಿಂದಲೂ ಜನರಿಗೆ ಸಿಕ್ಕಿರುವ ವಿನಾಯಿತಿಯಿಂದಲೂ ಪರಿಣಾಮ ಆಗಿದೆ. ಮಾರ್ಚ್ 1ರ ತನಕ ಬಾಕಿ ಇರುವ ಸಾಲಗಳ ಮೇಲಿನ ಮೂರು ತಿಂಗಳ ಬಡ್ಡಿಯನ್ನು ಸಹ ಮುಂದಕ್ಕೆ ಹಾಕಿ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆದೇಶ ನೀಡಿತು.

ಬ್ಯಾಂಕ್ ಗಳಲ್ಲಿ ಸಾಲಕ್ಕೆ ಬೇಡಿಕೆ ಇಲ್ಲ. ಇನ್ನು ಹೂಡಿಕೆ ಮಾಡಬಹುದಾದ ಹೆಚ್ಚುವರಿ ಮೊತ್ತವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸೆಕ್ಯೂರಿಟೀಸ್ ಗಳ ಮೇಲೆ ಬ್ಯಾಂಕ್ ಗಳು ಹಾಕಿವೆ. ಮಾರ್ಚ್ 27ರಿಂದ ಮೇ 8ರ ಮಧ್ಯೆ ಈ ಮೊತ್ತವೇ 3,48,754 ಕೋಟಿ ರುಪಾಯಿಗಳಾಗುತ್ತದೆ.

English summary

Banks Received 2.87 Lakh Crore Deposit In 43 Days

Banks received 2.87 lakh crore deposits between March 27 to May 8th. Here is the reason behind this.
Story first published: Thursday, May 21, 2020, 9:12 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X