For Quick Alerts
ALLOW NOTIFICATIONS  
For Daily Alerts

ದೇಶದಲ್ಲಿ ಅಧಿಕ ಯುಪಿಐ ವಹಿವಾಟು ನಡೆದ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಟಾಪ್!

|

ದೇಶದಲ್ಲಿ ಈಗ ಡಿಜಿಟಲ್, ಆನ್‌ಲೈನ್, ಯುಪಿಐ ವಹಿವಾಟು ನಡೆಸುವವರ ಸಂಖ್ಯೆ ಅಧಿಕವಾಗುತ್ತಿದೆ. ಜನರು ಸರಳವಾದ, ಸುಲಭವಾದ ಡಿಜಿಟಲ್ ವಹಿವಾಟಿನಂತ ಈಗಾಗಲೇ ವಾಲಿದ್ದಾರೆ. ಅದರಲ್ಲೂ ದೇಶದಲ್ಲೇ ಅಧಿಕವಾಗಿ ಯುಪಿಐ ವಹಿವಾಟು ಬೆಂಗಳೂರಿನಲ್ಲಿ ನಡೆದಿದೆ.

 

ಹೌದು, 2022ರ ಜನವರಿಯಿಂದ ಅಕ್ಟೋಬರ್‌ವರೆಗಿನ ಹತ್ತು ತಿಂಗಳಿನಲ್ಲಿ ಬೆಂಗಳೂರಿನಲ್ಲಿ ದೇಶದಲ್ಲೇ ಅಧಿಕ ಯುಪಿಐ ವಹಿವಾಟು ನಡೆದಿದೆ. ಸುಮಾರು 14.82 ಮಿಲಿಯನ್ ಡಿಜಿಟಲ್ ಪಾವತಿ ನಡೆದಿದೆ. ಜನವರಿಯಿಂದ ಅಕ್ಟೋಬರ್‌ವರೆಗೆ ಸುಮಾರು 36.2 ಬಿಲಿಯನ್ ರೂಪಾಯಿಯ ವಹಿವಾಟು ನಡೆದಿದೆ ಎಂದು ವರದಿಯಾಗಿದೆ.

ಕ್ರೆಡಿಟ್ ಕಾರ್ಡ್, ಯುಪಿಐ ಮೂಲಕ ತೆರಿಗೆ ಪಾವತಿಸುವುದು ಹೇಗೆ?ಕ್ರೆಡಿಟ್ ಕಾರ್ಡ್, ಯುಪಿಐ ಮೂಲಕ ತೆರಿಗೆ ಪಾವತಿಸುವುದು ಹೇಗೆ?

ವರ್ಲ್ಡ್‌ಲೈನ್ ಇಂಡಿಯಾ ವರದಿಯ ಪ್ರಕಾರ ಪ್ರಮುಖವಾಗಿ ಹಬ್ಬದ ಸೀಸನ್‌ನಲ್ಲಿ ಬೆಂಗಳೂರಿನಲ್ಲಿ ಅಧಿಕ ಡಿಜಿಟಲ್ ವಹಿವಾಟು ನಡೆದಿದೆ. ಈ ಹಬ್ಬದ ಸೀಸನ್‌ಗಳೇ ಬೆಂಗಳೂರನ್ನು ಟಾಪ್ ಸ್ಥಾನದಲ್ಲಿ ಇರಿಸಿದೆ. ಹಾಗಾದರೆ ಯಾವ ನಗರದಲ್ಲಿ ಎಷ್ಟು ಯುಪಿಐ ವಹಿವಾಟು ನಡೆದಿದೆ, ಟಾಪ್ 5 ನಗರಗಳು ಯಾವುದು ಎಂದು ತಿಳಿಯೋಣ ಮುಂದೆ ಓದಿ...

 ಯುಪಿಐ ವಹಿವಾಟು: ಟಾಪ್ 5 ನಗರಗಳು

ಯುಪಿಐ ವಹಿವಾಟು: ಟಾಪ್ 5 ನಗರಗಳು

ಯುಪಿಐ ವಹಿವಾಟು ಅಧಿಕವಾಗಿ ನಡೆದಿರುವ ದೇಶದ ಟಾಪ್ 5 ನಗರಗಳ ಪಟ್ಟಿಯಲ್ಲಿ ಬೆಂಗಳೂರು ಒಂದನೇ ಸ್ಥಾನದಲ್ಲಿದೆ. ಬೆಂಗಳೂರಿನಲ್ಲಿ 14.82 ಮಿಲಿಯನ್ ಯುಪಿಐ ವಹಿವಾಟು ನಡೆದಿದೆ. ನಂತರದ ಸ್ಥಾನದಲ್ಲಿ ಹೈದರಾಬಾದ್ ಇದೆ. ಹೈದರಾಬಾದ್‌ನಲ್ಲಿ 10.36 ಮಿಲಿಯನ್ ವಹಿವಾಟು ನಡೆದಿದೆ. 9.76 ಮಿಲಿಯನ್ ಯುಪಿಐ ವಹಿವಾಟಿನೊಂದಿಗೆ ಚೆನ್ನೈ ಮೂರನೇ ಸ್ಥಾನದಲ್ಲಿದ್ದರೆ, 9.24 ಮಿಲಿಯನ್ ಯುಪಿಐ ವಹಿವಾಟಿನೊಂದಿಗೆ ಮುಂಬೈ ನಾಲ್ಕನೇ ಸ್ಥಾನದಲ್ಲಿದೆ. 7.86 ಮಿಲಿಯನ್ ಯುಪಿಐ ವಹಿವಾಟು ದಾಖಲೆ ಮಾಡಿರುವ ಪುಣೆ ಐದನೇ ಸ್ಥಾನದಲ್ಲಿದೆ.

 ಎಷ್ಟು ಮೊತ್ತದ ವಹಿವಾಟು ನಡೆದಿದೆ?

ಎಷ್ಟು ಮೊತ್ತದ ವಹಿವಾಟು ನಡೆದಿದೆ?

ಬೆಂಗಳೂರಿನಲ್ಲಿ 36.2 ಬಿಲಿಯನ್ ರೂಪಾಯಿ ಯುಪಿಐ ವಹಿವಾಟು ನಡೆದಿದೆ. ಹೈದರಾಬಾದ್‌ನಲ್ಲಿ 3,050 ಕೋಟಿ ರೂಪಾಯಿ ಮೌಲ್ಯದ ಡಿಜಿಟಲ್ ವಹಿವಾಟು ನಡೆದಿದೆ. ಇನ್ನು ಚೆನ್ನೈನಲ್ಲಿ 2,250 ಕೋಟಿ ರೂಪಾಯಿ, ಮುಂಬೈನಲ್ಲಿ 2,740 ಕೋಟಿ ರೂಪಾಯಿ ಹಾಗೂ ಪುಣೆಯಲ್ಲಿ 1,730 ಕೋಟಿ ರೂಪಾಯಿಯ ಯುಪಿಐ ವಹಿವಾಟು ನಡೆದಿದೆ.

 ಯಾವುದಕ್ಕೆ ಅಧಿಕ ಡಿಜಿಟಲ್ ವಹಿವಾಟು ಬಳಕೆ?
 

ಯಾವುದಕ್ಕೆ ಅಧಿಕ ಡಿಜಿಟಲ್ ವಹಿವಾಟು ಬಳಕೆ?

ಜನರು ಅಧಿಕವಾಗಿ ದಿನಸಿ ಅಂಗಡಿ, ಹೋಟೆಲ್, ಬಟ್ಟೆ ಅಂಗಡಿ, ಮೆಡಿಕಲ್, ರೆಸ್ಟೋರೆಂಟ್‌ಗಳು, ಜ್ಯುವೆಲ್ಲರಿ ಮಳಿಗೆ, ಮನೆ ಬಳಕೆ ವಸ್ತುಗಳ ಅಂಗಡಿ, ಇತರೆ ವಸ್ತುಗಳ ಅಂಗಡಿಗಳಲ್ಲಿ ಅಧಿಕವಾಗಿ ಯುಪಿಐ ವಹಿವಾಟನ್ನು ನಡೆಸಿದ್ದಾರೆ. ಇನ್ನು ಇ ಕಾಮರ್ಸ್‌ಗಾಗಿಗೂ ಯುಪಿಐ ಬಳಕೆ ಮಾಡಲಾಗಿದೆ. ಗೇಮಿಂಗ್, ಹಣಕಾಸು ವಹಿವಾಟಿಗಾಗಿಯೂ ಯುಪಿಐ ವಹಿವಾಟು ನಡೆಸಲಾಗಿದೆ. ಒಟ್ಟಾರೆಯಾಗಿ ಈ ಮೇಲಿನ ಕಾರಣಗಳಿಗಾಗಿ ಶೇಕಡ 86ರಷ್ಟು ಯುಪಿಐ ವಹಿವಾಟು ನಡೆದಿದೆ.

English summary

Bengaluru records the highest digital payment transactions in 10 months in 2022

According to a report by Worldline India, festive season sales and a rise in consumption have helped Bengaluru take the top spot in digital payments transactions.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X