For Quick Alerts
ALLOW NOTIFICATIONS  
For Daily Alerts

ಯುಎಇ-ಭಾರತ ಪ್ರಯಾಣಿಕರಿಗೆ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ನಿಂದ ಕೋವಿಡ್‌ ಮಾರ್ಗಸೂಚಿ ಬಿಡುಗಡೆ

|

ಪ್ರಸ್ತುತ ಕೊರೊನಾ ವೈರಸ್ ಸಾಂಕ್ರಾಮಿಕದ ಹೊಸ ತಳಿ BF.7 ಕಾಣಿಸಿಕೊಂಡಿದ್ದು, ಜಾಗತಿಕವಾಗಿ ಮತ್ತೆ ಆರ್ಥಿಕ ಸ್ಥಿತಿ ಬಿಗಡಾಯಿಸುವ ಸಾಧ್ಯತೆಯಿದೆ. ಈಗಾಗಲೇ ಕೋವಿಡ್ ಸಂದರ್ಭದಲ್ಲಿ ಭಾರೀ ನಷ್ಟವನ್ನು ಅನುಭವಿಸಿರುವ ಏರ್‌ಲೈನ್ ಸಂಸ್ಥೆಗಳು ಈಗ ಮತ್ತೆ ನಿರ್ಬಂಧಕ್ಕೆ ಒಳಗಾಗುವ ಆತಂಕದಲ್ಲಿದೆ. ಈ ನಡುವೆ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಯುಎಇಯಿಂದ ಭಾರತಕ್ಕೆ ಆಗಮಿಸುವ ಪ್ರಯಾಣಿಕರಿಗೆ ಕೋವಿಡ್‌ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಯುನೈಟೆಡ್ ಅರಬ್ ಎಮಿರೇಟ್ಸ್‌ನಿಂದ ಭಾರತಕ್ಕೆ ಆಗಮಿಸುವವರಿಗೆ ಏರ್‌ ಇಂಡಿಯಾ ಎಕ್ಸ್‌ಪ್ರೆಸ್ ಕೋವಿಡ್ ಮಾರ್ಗಸೂಚಿಯನ್ನು ಮಂಗಳವಾರ ಜಾರಿ ಮಾಡಿದೆ. ಈ ಮಾರ್ಗಸೂಚಿ ಪ್ರಕಾರ ಕೋವಿಡ್ ಲಸಿಕೆ ಪಡೆದಿರುವುದು ಕಡ್ಡಾಯವಾಗಿದೆ. ಮಾಸ್ಕ್ ಕೂಡಾ ಕಡ್ಡಾಯವಾಗಿದೆ.

 Covid BF.7: ಕೋವಿಡ್ BF.7 ತಳಿ ಸೋಂಕಿತರಿಗೆ ಉಚಿತ ಚಿಕಿತ್ಸೆ ಘೋಷಿಸಿದ ರಾಜ್ಯ ಸರ್ಕಾರ Covid BF.7: ಕೋವಿಡ್ BF.7 ತಳಿ ಸೋಂಕಿತರಿಗೆ ಉಚಿತ ಚಿಕಿತ್ಸೆ ಘೋಷಿಸಿದ ರಾಜ್ಯ ಸರ್ಕಾರ

ಎಲ್ಲ ಪ್ರಯಾಣಿಕರು ತಮ್ಮ ದೇಶದಲ್ಲಿ ಯಾವ ಕೋವಿಡ್ ಲಸಿಕೆಯನ್ನು ಅನುಮೋದನೆ ಮಾಡಿ ನೀಡಲಾಗುತ್ತಿದೆಯೋ ಹಾಗೂ ಎಷ್ಟು ಡೋಸ್‌ಗಳನ್ನು ಕಡ್ಡಾಯ ಮಾಡಲಾಗಿದೆಯೋ ಅಷ್ಟು ಡೋಸ್ ಅನ್ನು ಪಡೆದಿರಬೇಕು ಎಂದು ಉಲ್ಲೇಖಿಸಲಾಗಿದೆ. ಹಾಗೆಯೇ ಮಾಸ್ಕ್‌ ಧರಿಸುವಂತೆ ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆಯೂ ಸೂಚನೆ ನೀಡಲಾಗಿದೆ.

ಮಾರ್ಗಸೂಚಿಯಲ್ಲಿ ಬೇರೆ ಏನೇನಿದೆ?

ಮಾರ್ಗಸೂಚಿಯಲ್ಲಿ ಬೇರೆ ಏನೇನಿದೆ?

"ಎಲ್ಲ ಪ್ರಯಾಣಿಕರು ತಮ್ಮ ದೇಶದಲ್ಲಿ ಎಷ್ಟು ಡೋಸ್ ಕಡ್ಡಾಯವಾಗಿದೆಯೋ ಅಷ್ಟು ಡೋಸ್ ಅನ್ನು ಪಡೆದಿರಬೇಕು. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಅನ್ನು ಧರಿಸಬೇಕು. ವಿಮಾನದಲ್ಲಿ/ಪ್ರಯಾಣ ಮಾಡುವಾಗ, ಎಲ್ಲ ಎಂಟ್ರಿ-ಎಕ್ಸಿಟ್‌ಗಳಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು," ಎಂದು ಏರ್‌ ಇಂಡಿಯಾ ಎಕ್ಸ್‌ಪ್ರೆಸ್ ತನ್ನ ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನ ಅಧಿಕೃತ ಖಾತೆಯಲ್ಲಿ ಟ್ವೀಟ್‌ ಮಾಡಿದೆ. ಮಾರ್ಗಸೂಚಿ ಪ್ರಕಾರ 12 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಭಾರತಕ್ಕೆ ತಲುಪಿದ ಬಳಿಕ ರ‍್ಯಾಡಮ್‌ ಟೆಸ್ಟಿಂಗ್ ಇಲ್ಲ. ಆದದರೆ ಮಕ್ಕಳಲ್ಲಿ ಕೋವಿಡ್ ಸಂಬಂಧಿತ ಯಾವುದೇ ಲಕ್ಷಣಗಳು ಕಂಡುಬಂದರೆ, ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಹಾಗೆಯೇ ಕೋವಿಡ್ ಕಂಡುಬಂದರೆ ಸರಿಯಾದ ಚಿಕಿತ್ಸೆಯನ್ನು ಪಡೆಯಬೇಕಾಗುತ್ತದೆ.

ಯಾವೆಲ್ಲ ದೇಶದವರಿಗೆ ಟೆಸ್ಟಿಂಗ್ ಕಡ್ಡಾಯ

ಯಾವೆಲ್ಲ ದೇಶದವರಿಗೆ ಟೆಸ್ಟಿಂಗ್ ಕಡ್ಡಾಯ

ವಿಮಾನದ ಮೂಲಕ ಭಾರತದ ಆಗಮಿಸುವ ಜನರ ಶೇಕಡ 2ರಷ್ಟಾದರೂ ಜನರಿಗೆ ರ‍್ಯಾಡಮ್‌ ಟೆಸ್ಟಿಂಗ್ ಮಾಡಬೇಕು. ಭಾರತದಲ್ಲಿ ಕೋವಿಡ್ ಮತ್ತಷ್ಟು ಹರಡುವ ನಿಟ್ಟಿನಲ್ಲಿ ಈ ಕ್ರಮವನ್ನು ಕೈಗೊಳ್ಳಬೇಕು ನಾಗರಿಕ ವಿಮಾನಯಾನ ಸಚಿವಾಲಯ ಕಳೆದ ಗುರುವಾರ ತಿಳಿಸಿದೆ. ಇನ್ನು ಚೀನಾ, ಜಪಾನ್, ದಕ್ಷಿಣ ಕೊರಿಯಾ, ಹಾಂಗ್ ಕಾಂಗ್, ತೈಲ್ಯಾಂಡ್‌ನಿಂದ ಭಾರತಕ್ಕೆ ಆಗಮಿಸುವವರಿಗೆ ಕೋವಿಡ್ ಟೆಸ್ಟಿಂಗ್ ಕಡ್ಡಾಯಗೊಳಿಸಲಾಗಿದೆ.

ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ಗೆ ನಷ್ಟ
 

ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ಗೆ ನಷ್ಟ

ಏರ್‌ ಇಂಡಿಯಾವು ಕಳೆದ 7 ವರ್ಷದಲ್ಲಿ ಮೊದಲ ಬಾರಿಗೆ ನಷ್ಟವನ್ನು ಕಂಡಿದೆ. ಹಣಕಾಸು ವರ್ಷ 2022ರಲ್ಲಿ 72.33 ಕೋಟಿ ರೂಪಾಯಿ ಏರ್‌ ಇಂಡಿಯಾದ ನಿವ್ವಳ ಲಾಭವಾಗಿದೆ. ಆದರೆ ಹಣಕಾಸು ವರ್ಷ 2021ರಲ್ಲಿ ನಿವ್ವಳ ಲಾಭವು 98.21 ಕೋಟಿ ರೂಪಾಯಿ ಆಗಿತ್ತು. 2022ರ ಜನವರಿಯಲ್ಲಿ ಏರ್‌ ಇಂಡಿಯಾ ಸಂಸ್ಥೆಯು ಟಾಟಾ ಗ್ರೂಪ್‌ ತೆಕ್ಕೆಗೆ ಸೇರಿದ್ದು ಖಾಸಗಿ ಸಂಸ್ಥೆಯಾಗಿ ಮಾರ್ಪಟ್ಟಿದೆ. ಆದರೆ ಏರ್‌ ಇಂಡಿಯಾ ಸಂಸ್ಥೆ ಕೋವಿಡ್‌ ಸಂದರ್ಭದಲ್ಲಿ ಭಾರೀ ನಷ್ಟವನ್ನು ಅನುಭಿಸಿದೆ

English summary

BF.7: Air India Express issues covid guidelines for passengers flying from UAE to India

Air India Express issued guidelines for maintaining Covid-appropriate behaviour by passengers flying from the United Arab Emirates to India that were released on Tuesday.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X