For Quick Alerts
ALLOW NOTIFICATIONS  
For Daily Alerts

ವಾಹನ ಸವಾರರಿಗೆ ಸಿಗಲಿದೆ ದೀಪಾವಳಿ ವೇಳೆಗೆ ಶುಭ ಸುದ್ದಿ

|

ಪೆಟ್ರೋಲ್, ಡೀಸೆಲ್ ಮೇಲೆ ಸುಂಕ ಹೇರಿಕೆ ಬಗ್ಗೆ ಸುದ್ದಿ ಬಂದಿರುವ ಬೆನ್ನಲ್ಲೇ ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿ(ಒಎಂಸಿ)ಗಳು ವಾಹನ ಸವಾರರಿಗೆ ಶುಭ ಸುದ್ದಿ ನೀಡಿವೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಇಂಧನ ಬೆಲೆ ಏರಿಕೆ ಬದಲು ಇಳಿಕೆಯಾಗಲಿವೆ ಎಂಬ ಸುಳಿವು ಸಿಕ್ಕಿದೆ.

ಕೊವಿಡ್ 19 ಎರಡನೇ ಅಲೆಯು ಪಾಶ್ಚಿಮಾತ್ಯ ದೇಶಗಳಲ್ಲಿ ಅಬ್ಬರ ಮಾಡುತ್ತಿದೆ, ಅಮೆರಿಕದಲ್ಲಿ ಚುನಾವಣೆ ಪ್ರಕ್ರಿಯೆ ನಡೆದಿದೆ, ಭಾರತ ಹಾಗೂ ಅಮೆರಿಕ ನಡುವೆ ಒಪ್ಪಂದಗಳು ಆಗುತ್ತಿವೆ ಈ ವಿದ್ಯಮಾನಗಳ ನಡುವೆ ಕಚ್ಚಾತೈಲ ಬೆಲೆ ಇಳಿಕೆಯ ಸೂಚನೆ ಸಿಕ್ಕಿದೆ. ಹೀಗಾಗಿ, ಪೆಟ್ರೋಲ್, ಡೀಸೆಲ್ ರೀಟೈಲ್ ದರದಲ್ಲಿ ಇಳಿಕೆ ಸಾಧ್ಯತೆ ಕಂಡು ಬಂದಿದೆ.

ಕಳೆದ ಒಂದು ವಾರದಲ್ಲಿ ಕಚ್ಚಾತೈಲ ಬೆಲೆ ಶೇ 5ರಷ್ಟು ಕುಸಿದಿದ್ದು, 40 ಯುಎಸ್ ಡಾಲರ್ ಪ್ರತಿ ಬ್ಯಾಟೆಲ್ ನಂತೆ ವಹಿವಾಟು ನಡೆಸಿದೆ.

ವಾಹನ ಸವಾರರಿಗೆ ಸಿಗಲಿದೆ ದೀಪಾವಳಿ ವೇಳೆಗೆ ಶುಭ ಸುದ್ದಿ

ಭಾರತದಲ್ಲಿ ಕಳೆದ ಒಂದು ತಿಂಗಳಲ್ಲಿ ತೈಲ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸ ಕಂಡು ಬಂದಿಲ್ಲ. ಡೀಸೆಲ್ ಬೆಲೆಯಂತೂ ಸತತ 25 ದಿನಗಳಿಂದ ಬದಲಾಗಿಲ್ಲ. ತೈಲ ಬೆಲೆ ಇಳಿಕೆ ಬಗ್ಗೆ ಮೂರು ಪ್ರಮುಖ ತೈಲ ಕಂಪನಿಗಳು ಚಿಂತಿಸಿದ್ದು, ವಾಹನ ಸವಾರರು ನೆಮ್ಮದಿಯ ನಿಟ್ಟುಸಿರು ಬಿಡಬಹುದಾಗಿದೆ.

ಬುಧವಾರ(ಅ.28) ದೆಹಲಿಯಲ್ಲಿ ಪೆಟ್ರೋಲ್ 81.06ರು ಪ್ರತಿ ಲೀಟರ್, ಮುಂಬೈ 87.74 ರು, ಚೆನ್ನೈ 84.14 ರು ಹಾಗೂ ಕೋಲ್ಕತ್ತಾದಲ್ಲಿ 82.59 ರು ನಷ್ಟಿದೆ. ಡೀಸೆಲ್ ದರ ಬಹುತೇಕ ಎಲ್ಲಾ ಮೆಟ್ರೋ ನಗರಗಳಲ್ಲಿ 78.86 ರು ನಷ್ಟಿದೆ.

ಪ್ರಮುಖ ನಗರಗಳಲ್ಲಿನ ತೈಲ ಬೆಲೆಯನ್ನು ನೋಡಿ

English summary

Big Relief! Petrol, Diesel Prices May go Down Ahead of Deepavali

Consumers can cheer as oil marketing companies (OMC) may actually bring down the retail prices of petrol and diesel in the coming week ahead of Deepavali.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X