For Quick Alerts
ALLOW NOTIFICATIONS  
For Daily Alerts

ದೇಶದ ಅತಿದೊಡ್ಡ ಸಾಗಾಟ ವ್ಯವಸ್ಥೆಯ VRLನಿಂದ 15% ವಾಹನಗಳು ಸ್ಕ್ರಾಪ್

|

ಭಾರತದಲ್ಲಿ ಅತಿ ದೊಡ್ಡ ಸಂಖ್ಯೆಯ ಸಾಗಾಟ ವಾಣಿಜ್ಯ ವಾಹನಗಳನ್ನು ಹೊಂದಿರುವ ವಿಆರ್ ಎಲ್ ಲಾಜಿಸ್ಟಿಕ್ಸ್ ಲಿಮಿಟೆಡ್ ಹೊಸ ವಾಹನಗಳ ಖರೀದಿ ಮಾಡುವುದಿಲ್ಲ ಹಾಗೂ ರಿಪೇರಿ ವೆಚ್ಚದ ಕಾರಣಕ್ಕಾಗಿ ಹಳೆ ವಾಹನಗಳ ಬಳಕೆ ನಿಲ್ಲಿಸಲಿದೆ. ವಿಆರ್ ಎಲ್ ನಿಂದ ಐದು ಸಾವಿರ ವಾಹನಗಳ ನಿರ್ವಹಣೆ ಮಾಡಲಾಗುತ್ತದೆ. ಅದರಲ್ಲಿ ಟ್ಯಾಂಕರ್, ಕ್ರೇನ್ ಗಳು, ಬಸ್ ಗಳು ಒಳಗೊಂಡಿವೆ.

ಕಡಿಮೆ ಸಾಮರ್ಥ್ಯದ ಏಳುನೂರು ಟ್ರಕ್ ಗಳನ್ನು ಗುರುತಿಸಲಾಗಿದ್ದು, ಅವುಗಳನ್ನು ಸ್ಕ್ರಾಪ್ ಮಾಡಬಹುದಾಗಿದೆ ಎಂದು ಮುಖ್ಯ ಹಣಕಾಸು ಅಧಿಕಾರಿ ಸುನೀಲ್ ನಲವಡಿ ಸೋಮವಾರ ಕಾನ್ಫರೆನ್ಸ್ ಕಾಲ್ ನಲ್ಲಿ ತಿಳಿಸಿದ್ದಾರೆ. ವೆಚ್ಚಗಳು ಕಡಿಮೆ ಮಾಡಿ ಹಾಗೂ ಹೊಸ ಹೂಡಿಕೆಗಳನ್ನು ನಿಲ್ಲಿಸಿ, ಪ್ರಸಕ್ತ ಹಣಕಾಸು ವರ್ಷದಲ್ಲಿ ಲಾಭವನ್ನು ದಾಖಲಿಸುವ ಭರವಸೆ ಇದೆ ಎಂದು ಅವರು ಹೇಳಿದ್ದಾರೆ.

20ರಿಂದ 25 ಪರ್ಸೆಂಟ್ ಸಾಗಣೆ ವೆಚ್ಚ ಹೆಚ್ಚಳಕ್ಕೆ ನೀ ಕೊಡೆ- ನಾ ಬಿಡೆ20ರಿಂದ 25 ಪರ್ಸೆಂಟ್ ಸಾಗಣೆ ವೆಚ್ಚ ಹೆಚ್ಚಳಕ್ಕೆ ನೀ ಕೊಡೆ- ನಾ ಬಿಡೆ

ಕೊರೊನಾ ವೈರಾಣು ನಿಯಂತ್ರಣಕ್ಕಾಗಿ ಲಾಕ್ ಡೌನ್ ಘೋಷಿಸಿದ್ದರಿಂದ ವಿಆರ್ ಎಲ್ ಕಾರ್ಯ ನಿರ್ವಹಣೆ ನಿಲ್ಲಿಸಿತ್ತು. ಆ ಕಾರಣಕ್ಕೆ ಜೂನ್ ತ್ರೈಮಾಸಿಕದಲ್ಲಿ ಕಂಪೆನಿ ನಷ್ಟ ಅನುಭವಿಸಿದೆ. ಇನ್ನು ಟ್ರಕ್ ಮಾರಾಟ ಮತ್ತೆ ಚೇತರಿಸಿಕೊಳ್ಳಲು ಕನಿಷ್ಠ ಮೂರು ವರ್ಷಗಳು ಬೇಕಾಗುತ್ತವೆ ಎಂದು ಡೈಮ್ಲರ್ ಎಜಿ ತಿಳಿಸಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕೂಡ ಭಾರತದ ಆರ್ಥಿಕತೆ ಬಗ್ಗೆ ಇಂಥದ್ದೇ ಅಂದಾಜು ಮಾಡಿದೆ.

ದೇಶದ ಅತಿದೊಡ್ಡ ಸಾಗಾಟ ವ್ಯವಸ್ಥೆಯ VRLನಿಂದ 15% ವಾಹನಗಳು ಸ್ಕ್ರಾಪ್

ಒಟ್ಟು ಸಾಮರ್ಥ್ಯದ ಶೇಕಡಾ 75ರಷ್ಟು ಪ್ರಮಾಣದಲ್ಲಿ ವಿಆರ್ ಎಲ್ ಕಾರ್ಯ ನಿರ್ವಹಿಸುತ್ತಿದೆ. ವ್ಯವಹಾರದ ಶೇಕಡಾ ಎಪ್ಪತ್ತೈದಕ್ಕಿಂತ ಹೆಚ್ಚು ಸಣ್ಣ ಮತ್ತು ಮಧ್ಯಮ ಗಾತ್ರದ ಸಂಸ್ಥೆಗಳಿಂದ ಬರುತ್ತದೆ. ಆರ್ಥಿಕ ಹೊಡೆತದಲ್ಲಿ ಅವುಗಳಿಗೆ ದೊಡ್ಡ ಪೆಟ್ಟು ಬಿದ್ದಿದೆ. ಹೆಚ್ಚಿನ ಬೇಡಿಕೆ ಇಲ್ಲದ ಮಾರ್ಗಗಳು (ರೂಟ್) ತೆಗೆಯಲು ಯೋಜನೆ ಮಾಡಿದ್ದೇವೆ. ಫಾರ್ಮಾಸ್ಯುಟಿಕಲ್ಸ್, ಕೃಷಿ ವಲಯ ಚೇತರಿಸಿಕೊಳ್ಳುತ್ತಿದೆ. ಟೆಕ್ಸ್ ಟೈಲ್ಸ್ ಹಾಗೂ ಆಟೋಮೊಬೈಲ್ ದುರ್ಬಲವಾಗಿದೆ ಎಂದು ನಲವಡಿ ಹೇಳಿದ್ದಾರೆ.

ಕರ್ನಾಟಕ ಮೂಲದ ವಿಆರ್ ಎಲ್ ಆರಂಭವಾದದ್ದು 1976ರಲ್ಲಿ. ಕೇವಲ ಒಂದು ಟ್ರಕ್ ನೊಂದಿಗೆ ಕಾರ್ಯಾರಂಭ ಮಾಡಿತು. 2015ರಲ್ಲಿ ಷೇರು ಮಾರುಕಟ್ಟೆಗೆ ಪ್ರವೇಶಿಸಿದಾಗ 40% ಷೇರಿನ ಬೆಲೆ ಹೆಚ್ಚಳ ಕಂಡಿತು. ಈ ವರ್ಷ ಷೇರು ಮೌಲ್ಯವು 45% ಕಡಿಮೆ ಆಗಿದೆ. ಸತತ ಮೂರನೇ ವರ್ಷ ಇಳಿಕೆ ಆಗಿದೆ.

"ಬೆಳವಣಿಗೆ ಸಾಧಿಸಲು 2020ರ ವರ್ಷವನ್ನು ನಾವು ಕಳೆದುಕೊಂಡಿದ್ದೇವೆ ಎಂದುಕೊಳ್ಳುತ್ತೇವೆ" ಎಂದಿರುವ ವಿಆರ್ ಎಲ್ ಲಾಜಿಸ್ಟಿಕ್ಸ್ ಅಧ್ಯಕ್ಷ ವಿಜಯ್ ಸಂಕೇಶ್ವರ, ಕಂಪೆನಿ ಸಿಬ್ಬಂದಿಯನ್ನು ಈಗಿನ ಸಮಸ್ಯೆಯಿಂದ ಹೊರತರುವುದು ನಮ್ಮ ಆದ್ಯತೆ ಎಂದು ಹೇಳಿದ್ದಾರೆ.

English summary

Biggest Trucker In India VRL Logistics To Scrap 15 Percent Of Fleet

Karnataka based VRL Logistics Ltd., decided to not buy new trucks and will get rid of old ones to rein in repair costs amid demand slump due to corona.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X