For Quick Alerts
ALLOW NOTIFICATIONS  
For Daily Alerts

ಬಿಲ್‌ಗೇಟ್ಸ್‌ ದಾಂಪತ್ಯ ಜೀವನ ಮುರಿದು ಬೀಳಲು ಕಾರಣವೇನು? ಮೈಕ್ರೋಸಾಫ್ಟ್‌ ಮಂಡಳಿಯಿಂದ ಹೊರಬಿದ್ದಿದ್ದೇಕೆ?

|

27 ವರ್ಷಗಳ ಸುಮಧುರ ದಾಂಪತ್ಯಕ್ಕೆ ತಿಲಾಂಜಲಿಯಿಟ್ಟ ವಿಶ್ವದ ಅಗ್ರ ಶ್ರೀಮಂತರಲ್ಲಿ ಒಬ್ಬರಾದ ಬಿಲ್‌ಗೇಟ್ಸ್‌ ಇತ್ತೀಚೆಗಷ್ಟೇ ಪತ್ನಿ ಮಿಲಿಂಡಾ ಗೇಟ್ಸ್‌ಗೆ ವಿಚ್ಚೇದನ ನೀಡಿದ್ದರು. ವಿಚ್ಚೇದನ ಪಡೆದುಕೊಂಡಿದ್ದರೂ ವಿಶ್ವದ ಅತಿ ದೊಡ್ಡ ಚಾರಿಟೆಬಲ್ ಟ್ರಸ್ಟ್ ಆಗಿರುವ ಬಿಲ್ ಮತ್ತು ಮೆಲಿಂಡಾ ಪ್ರತಿಷ್ಠಾನದಲ್ಲಿ ಇಬ್ಬರೂ ಜತೆಯಾಗಿ ಕಾರ್ಯ ನಿರ್ವಹಿಸಲು ಸಮ್ಮತಿಸಿದ್ದರು.

ಇದರ ಬೆನ್ನಲ್ಲೇ ಮೈಕ್ರೋಸಾಫ್ಟ್‌ ಉದ್ಯೋಗಿಗಳೊಂದಿಗೆ ಬಿಲಿಯನೇರ್ ಬಿಲ್‌ಗೇಟ್ಸ್‌ ಹಳೆಯ ಪ್ರಣಯ ಸಂಬಂಧಗಳು ಒಂದೊಂದೇ ಹೊರಬಿದ್ದ ಬಳಿಕ, 2020 ರಲ್ಲಿ ಬಿಲ್ ಗೇಟ್ಸ್ ನಿರ್ದೇಶಕರ ಮಂಡಳಿಯಿಂದ ಕೆಳಗಿಳಿಯುವ ಅವಶ್ಯಕತೆಯಿದೆ ಎಂದು ಮಂಡಳಿಯ ಸದಸ್ಯರು ನಿರ್ಧರಿಸಿದರು. ಹೀಗಾಗಿಯೇ ಕಳೆದ ವರ್ಷ ಬಿಲ್‌ಗೇಟ್ಸ್‌ ಮೈಕ್ರೋಸಾಫ್ಟ್‌ ಆಡಳಿತ ಮಂಡಳಿಯಿಂದ ಹೊರಬಿದ್ದರು.

ಟ್ವೀಟ್‌ ಮಾಡಿ ದಾಂಪತ್ಯ ಜೀವನ ಕೊನೆಗೊಳಿಸಿದ್ದ ಗೇಟ್ಸ್‌ ದಂಪತಿ

ಟ್ವೀಟ್‌ ಮಾಡಿ ದಾಂಪತ್ಯ ಜೀವನ ಕೊನೆಗೊಳಿಸಿದ್ದ ಗೇಟ್ಸ್‌ ದಂಪತಿ

ನಮ್ಮ ಸುಮಧುರ ದಾಂಪತ್ಯ ಜೀವನದಿಂದ ನಾವಿಬ್ಬರೂ ಮುಕ್ತಿ ಪಡೆದಿದ್ದೇವೆ ಎಂದು ಬಿಲ್‌ಗೇಟ್ಸ್‌ ಮತ್ತು ಮೆಲಿಂಡಾ ಗೇಟ್ಸ್‌ ಇಬ್ಬರೂ ಟ್ವೀಟ್ ಮಾಡುವ ಮೂಲಕ ಸಂಬಂಧವನ್ನು ಕೊನೆಗೊಳಿಸಿದ್ದರು. ಮೂವರು ಮಕ್ಕಳ ಪೋಷಕರಾದ ಈ ದಂಪತಿಯು ವಿಚ್ಚೇದನದ ಬಳಿಕವೂ ಚಾರಿಟೆಬಲ್ ಟ್ರಸ್ಟ್‌ ಅನ್ನು ವಿಶ್ವದಾದ್ಯಂತ ವಿಸ್ತರಿಸಲು ನಿರ್ಧರಿಸಿದ್ದಾರೆ.

ಉದ್ಯೋಗಿಗಳೊಂದಿಗೆ ಬಿಲ್‌ಗೇಟ್ಸ್‌ ಪ್ರಣಯ ಸಂಬಂಧದ ತನಿಖೆ

ಉದ್ಯೋಗಿಗಳೊಂದಿಗೆ ಬಿಲ್‌ಗೇಟ್ಸ್‌ ಪ್ರಣಯ ಸಂಬಂಧದ ತನಿಖೆ

ಮೈಕ್ರೋಸಾಫ್ಟ್‌ನ ಮಹಿಳಾ ಉದ್ಯೋಗಿಗಳೊಂದಿಗೆ ಬಿಲಿಯನೇರ್ ನಂಟರು ಒಂದೊಂದೇ ಗೊತ್ತಾದ ಬಳಿಕ ಸೂಕ್ತವಾದ ತನಿಖೆ ಆಗಬೇಕು ಎಂದು ಪರಿಗಣಿಸಲಾಯಿತು. ಜೊತೆಗೆ ಗೇಟ್ಸ್‌ ಆಡಳಿತ ಮಂಡಳಿಯಿಂದ ಹೊರಬೀಳುವುದು ಸೂಕ್ತ ಎಂದು ನಿರ್ಧರಿಸಲಾಯಿತು ಎಂದು ಈ ವಿಷಯದ ಕುರಿತು ತಿಳಿದಿರುವ ಜನರು ಹೇಳಿದ್ದಾರೆ.

ಎಂಜಿನಿಯರ್ ಉದ್ಯೋಗಿ ಹಲವು ವರ್ಷಗಳಿಂದ ಬಿಲ್ ಗೇಟ್ಸ್ ಅವರೊಂದಿಗೆ ಲೈಂಗಿಕ ಸಂಬಂಧವನ್ನು ಬೆಳೆಸಿದ್ದರು ಎಂದು ಪತ್ರದಲ್ಲಿ ದೂರಲಾಗಿದೆ ಎಂದು ಜರ್ನಲ್ ತಿಳಿಸಿದೆ.

ಇದು ಸುಮಾರು 20 ವರ್ಷಗಳ ಹಿಂದೆ ಸೌಹಾರ್ದಯುತವಾಗಿ ಬಗೆಹರಿದ ಸಂಬಂಧವಾಗಿದೆ. ಬಿಲ್ ಗೇಟ್ಸ್ ತಮ್ಮ ಸಹಾಯಾರ್ಥ ಮತ್ತು ಮೆಲಿಂಡಾ ಫೌಂಡೇಷನ್ ಮೇಲೆ ಹೆಚ್ಚಿನ ಗಮನ ಕೇಂದ್ರಿಕರಿಸಲು ಮೈಕ್ರೋಸಾಫ್ಟ್ ತೊರೆದಿದ್ದರು ಎಂದು ಗೇಟ್ಸ್ ವಕ್ತಾರೆ ತಿಳಿಸಿದ್ದಾರೆ.

 

ಅತ್ಯಾಚಾರ ಪ್ರಕರಣ ದೋಷಿ ಜೊತೆಗೆ ಬಿಲ್‌ಗೇಟ್ಸ್‌ ನಂಟು
 

ಅತ್ಯಾಚಾರ ಪ್ರಕರಣ ದೋಷಿ ಜೊತೆಗೆ ಬಿಲ್‌ಗೇಟ್ಸ್‌ ನಂಟು

ಅತ್ಯಾಚಾರ ಪ್ರಕರಣ ದೋಷಿ, ಹೂಡಿಕೆದಾರ ಜೆಫ್ರಿ ಎಪಿಸ್ಟನ್‌ ಜೊತೆ ಬಿಲ್‌ಗೇಟ್ಸ್‌ ನಂಟು ಹೊಂದಿದ್ದೇ, ಅವರ ವಿವಾಹ ವಿಚ್ಛೇಧನಕ್ಕೆ ಕಾರಣ ಎಂಬ ವಿಷಯವು ಇತ್ತೀಚೆಗೆ ಸುದ್ದಿಯಾಗಿತ್ತು.

2013ರಿಂದಲೂ ಜೆಫ್ರಿ ಜೊತೆ ಬಿಲ್‌ ನಂಟು ಹೊಂದಿದ್ದರು. ಇದಕ್ಕೆ ಹಲವು ಬಾರಿ ಮೆಲಿಂಡಾ ಆಕ್ಷೇಪ ಕೂಡ ವ್ಯಕ್ತಪಡಿಸಿದ್ದರು. ಇದರ ಹೊರತಾಗಿಯೂ ಜೆಫ್ರಿ ಜೊತೆಗಿನ ಸಂಬಂಧವನ್ನು ಬಿಲ್‌ ಕಡಿದುಕೊಂಡಿರಲಿಲ್ಲ. ಜೊತೆಗೆ 2019ರಲ್ಲಿ ಹಲವು ಬಾರಿ ಬಿಲ್‌-ಜೆಫ್ರಿ ಭೇಟಿ ನಡೆದಿತ್ತು. ಒಮ್ಮೆ ಹೋಟೆಲ್‌ನಲ್ಲಿ ಇಬ್ಬರು ಒಟ್ಟಿಗೆ ಉಳಿದುಕೊಂಡಿದ್ದರು. ಇದರಿಂದ ಬೇಸತ್ತ ಮೆಲಿಂಡಾ 2019ರಲ್ಲೇ ಡೈವೋರ್ಸ್‌ಗೆ ನಿರ್ಧರಿಸಿದ್ದರು ಎನ್ನಲಾಗಿದೆ.

 

ಬಿಲ್‌ಗೇಟ್ಸ್-ಮೆಲಿಂಡಾ ಡಿವೋರ್ಸ್ ಬಳಿಕ ಆಸ್ತಿ ಹಂಚಿಕೆ ಹೇಗೆ?

ಬಿಲ್‌ಗೇಟ್ಸ್-ಮೆಲಿಂಡಾ ಡಿವೋರ್ಸ್ ಬಳಿಕ ಆಸ್ತಿ ಹಂಚಿಕೆ ಹೇಗೆ?

ಬಿಲ್‌ ಗೇಟ್ಸ್‌ ಅವರು ಫೋರ್ಬ್ಸ್ ನಿಯತಕಾಲಿಕೆ ಪ್ರಕಟಿಸುವ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದಿದ್ದಾರೆ. ಅವರ ಆಸ್ತಿ 124 ಶತಕೋಟಿ ಡಾಲರ್‌ ಆಗಿದೆ. ಇನ್ನು ಗೇಟ್ಸ್‌ ಫೌಂಡೇಶನ್‌ ಸುಮಾರು 50 ಶತಕೋಟಿ ಡಾಲರ್‌ ಮೌಲ್ಯದ್ದಾಗಿದೆ. ಇವರ ವಿಚ್ಛೇದನವು ಗೇಟ್ಸ್‌ ಆಸ್ತಿ ಹಾಗೂ ಪ್ರತಿಷ್ಠಾನದ ಆಸ್ತಿಪಾಸ್ತಿಗಳ ಮೇಲೆ ಪರಿಣಾಮ ಬೀರಲಿದೆ.

ಈಗಾಗಲೇ ಆಸ್ತಿಯನ್ನು ಸಮನಾಗಿ ಹಂಚಿಕೆ ಮಾಡಬೇಕು ಎಂದು ಕೋರಿ ದಂಪತಿಯು ಕಿಂಗ್‌ ಕೌಂಟಿ ಸುಪೀರಿಯರ್‌ ಕೋರ್ಟ್‌ ಮೊರೆ ಹೋಗಿದೆ. ಅಮೆರಿಕದ ಕಾನೂನು ಪ್ರಕಾರ ಮದುವೆಗಿಂತ ಮೊದಲು ಸಂಪಾದಿಸಿದ್ದ ಆಸ್ತಿ ವೈಯಕ್ತಿಕವಾಗಿ ಅವರವರ ಪಾಲಾಗುತ್ತದೆ. ನಂತರ ಸಂಪಾದಿಸಿದ ಆಸ್ತಿ ಸಮಾನವಾಗಿ ಹಂಚಿಕೆಯಾಗುತ್ತದೆ.

 

English summary

Bill Gates-Melinda Divorce: Shocking Reason behind The Split Of Billionaire Couple

Here the reason behind the bill gates and melinda Gates divorce
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X