For Quick Alerts
ALLOW NOTIFICATIONS  
For Daily Alerts

$ 40 ಸಾವಿರ ಗಡಿ ದಾಟಿದ ಬಿಟ್ ಕಾಯಿನ್; ಭಾರತದಲ್ಲಿನ ಮೌಲ್ಯ ರು. 30 ಲಕ್ಷ

|

ವಿಶ್ವದ ಅತಿ ದೊಡ್ಡ ಮತ್ತು ಖ್ಯಾತ ಕ್ರಿಪ್ಟೋಕರೆನ್ಸಿ ಬಿಟ್ ಕಾಯಿನ್ ಮೌಲ್ಯ ಒಂದು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಜಬರ್ದಸ್ತ್ ಗಳಿಕೆ ಕಂಡಿದೆ. ಡಿಸೆಂಬರ್ ನಲ್ಲಿ 20,000 USD ಇದ್ದದ್ದು, ಗುರುವಾರ (ಜನವರಿ 7, 2021) ರಾತ್ರಿ $ 40,000 ದಾಟಿದೆ. ಕೇವಲ ಐದೇ ದಿನಗಳಲ್ಲಿ 10,000 ಅಮೆರಿಕನ್ ಡಾಲರ್ ಜಾಸ್ತಿ ಆಗಿದೆ. ಅಂದರೆ ರುಪಾಯಿ ಲೆಕ್ಕದಲ್ಲಿ 7,30,000ಕ್ಕೂ ಹೆಚ್ಚು.

ದಿನದ ವಹಿವಾಟಿನಲ್ಲಿ ಬಿಟ್ ಕಾಯಿನ್ ದರ 10.4% ಏರಿಕೆ ಕಂಡು, $ 40,380 ತಲುಪಿದೆ. ಆದರೆ ಏರಿಳಿತ ಮುಂದುವರಿದಿದ್ದು, ಈ ವರದಿ ಸುದ್ದಿ ಆಗುವ ಹೊತ್ತಿಗೆ ಬಿಟ್ ಕಾಯಿನ್ $ 38,585.10ರಲ್ಲಿ ವಹಿವಾಟು ನಡೆಸುತ್ತಿತ್ತು. ಭಾರತದ ರುಪಾಯಿ ಲೆಕ್ಕದಲ್ಲಿ ಗುರುವಾರದಂದು 29.63 ಲಕ್ಷ ಇದ್ದದ್ದು ಶುಕ್ರವಾರ 28.31 ಲಕ್ಷ ರು. ತಲುಪಿದೆ.

ಬಿಟ್ ಕಾಯಿನ್ ಅಲ್ಪಾವಧಿಯಲ್ಲಿ 1 ಕೋಟಿ ರು. ತಲುಪಬಹುದು ಎನ್ನುತ್ತಿದ್ದಾರೆ ವಿಶ್ಲೇಷಕರುಬಿಟ್ ಕಾಯಿನ್ ಅಲ್ಪಾವಧಿಯಲ್ಲಿ 1 ಕೋಟಿ ರು. ತಲುಪಬಹುದು ಎನ್ನುತ್ತಿದ್ದಾರೆ ವಿಶ್ಲೇಷಕರು

ಮೌಲ್ಯದಲ್ಲಿ ವಿಪರೀತ ಏರಿಳಿತ ಕಾಣುವ ಮೂಲಕ ಈ ಕ್ರಿಪ್ಟೋಕರೆನ್ಸಿ ಕುಖ್ಯಾತಿ ಪಡೆದಿದೆ. ಇನ್ನು 2020ರಲ್ಲಿ ಹೂಡಿಕೆಗೆ ಅತ್ಯಂತ ಸುರಕ್ಷಿತ ಎಂಬ ಭಾವ ಮೂಡಿಸಿತು. ಆದರೆ ಈ ಹೂಡಿಕೆಯಲ್ಲಿನ ಅಪಾಯದ ಬಗ್ಗೆ ತಜ್ಞರು ಎಚ್ಚರಿಕೆಯನ್ನು ನೀಡಿದ್ದಾರೆ. ಇನ್ನೊಂದು ಸಂಗತಿ ಏನೆಂದರೆ, ನಿತ್ಯವೂ ಬಿಟ್ ಕಾಯಿನ್ ಖರೀದಿ ಸಾಧ್ಯವಿಲ್ಲ. ಆ ಕಾರಣಕ್ಕೆ ದೊಡ್ಡ ಮಟ್ಟದಲ್ಲಿ ಹೂಡಿಕೆಯಾಗಿಯೇ ನೋಡಲಾಗುತ್ತದೆ.

$40 ಸಾವಿರ ಗಡಿ ದಾಟಿದ ಬಿಟ್ ಕಾಯಿನ್; ಭಾರತದಲ್ಲಿ ಮೌಲ್ಯ ರು. 30 ಲಕ್ಷ

ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲದವರು, ಅಕ್ರಮ ಹಣ ವರ್ಗಾವಣೆ ಮಾಡುವ ಅಪರಾಧಿಗಳು ಈ ಬಿಟ್ ಕಾಯಿನ್ ಅನ್ನು ಹೆಚ್ಚು ಬಳಸುತ್ತಿದ್ದಾರೆ ಎನ್ನುತ್ತಾರೆ ವಿಶ್ಲೇಷಕರು. 2020ರ ಮಾರ್ಚ್ ತಿಂಗಳಲ್ಲಿ ಬಿಟ್ ಕಾಯಿನ್ 5000 ಯುಎಸ್ ಡಿ ಇತ್ತು. ಆಗಲೇ ಬೆಲೆ ಇಳಿಕೆ ಆಗುವ ಬಗ್ಗೆ ಎಚ್ಚರಿಸಲಾಗಿತ್ತು.

English summary

Bitcoin Crossed 40000 USD Mark And In India Worth Nearly Rs 30 Lakh

World's largest cryptocurrency bitcoin crossed $ 40,000 mark and in India worth nearly Rs 30 lakh.
Story first published: Friday, January 8, 2021, 12:07 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X