For Quick Alerts
ALLOW NOTIFICATIONS  
For Daily Alerts

51,000 ಡಾಲರ್ ಗಡಿದಾಟಿದ ಬಿಟ್‌ಕಾಯಿನ್: ಮತ್ತೊಂದು ದಾಖಲೆ

|

ಕ್ರಿಪ್ಟೋಕರೆನ್ಸಿ ಬಿಟ್‌ಕಾಯಿನ್ ಹೂಡಿಕೆದಾರರನ್ನು ತನ್ನತ್ತ ಇನ್ನಷ್ಟು ಸೆಳೆಯುತ್ತಿದ್ದು, ಇದೇ ಮೊದಲ ಬಾರಿಗೆ ಬಿಟ್‌ಕಾಯಿನ್‌ ನಂಬಲಾಗದ ಮಟ್ಟವನ್ನು ತಲುಪಿದ್ದು, 51,000 ಅಮೆರಿಕಾ ಡಾಲರ್ ಗಡಿದಾಟಿದೆ. 50 ಸಾವಿರ ಡಾಲರ್ ಗಡಿ ಮುಟ್ಟಿ ಒಂದೇ ದಿನದಲ್ಲಿ ಈ ಮಟ್ಟವನ್ನು ತಲುಪಿದೆ.

ಬ್ಲೂಮ್‌ಬರ್ಗ್ ಸಂಗ್ರಹಿಸಿದ ಬೆಲೆಗಳ ಸಂಯೋಜನೆಯ ಪ್ರಕಾರ, ಕಳೆದ ವರ್ಷದಲ್ಲಿ ಐದು ಪಟ್ಟು ಹೆಚ್ಚಾದ ನಂತರ ಅತಿದೊಡ್ಡ ಕ್ರಿಪ್ಟೋಕರೆನ್ಸಿ ಬುಧವಾರ ಸುಮಾರು ಶೇಕಡಾ 6ರಷ್ಟು ಏರಿಕೆಯಾಗಿ ಸುಮಾರು, 51,431 ಡಾಲರ್‌ಗೆ ತಲುಪಿ ಹೊಸ ದಾಖಲೆಯನ್ನೇ ಸೃಷ್ಟಿಸಿದೆ.

 51,000 ಡಾಲರ್ ಗಡಿದಾಟಿದ ಬಿಟ್‌ಕಾಯಿನ್: ಮತ್ತೊಂದು ದಾಖಲೆ

 

ಇತ್ತೀಚೆಗೆ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲೋನ್ ಮಸ್ಕ್ ಮಾಲೀಕತ್ವದ ಟೆಸ್ಲಾ ಜನವರಿ 2021 ರಲ್ಲಿ 1.5 ಬಿಲಿಯನ್ ಡಾಲರ್ ಮೌಲ್ಯದ ಬಿಟ್‌ಕಾಯಿನ್‌ಗಳನ್ನು ಖರೀದಿಸಿದೆ. ಇದರಿಂದ ಬಿಟ್‌ಕಾಯಿನ್ ಮತ್ತಷ್ಟು ಮೌಲ್ಯವನ್ನು ಆಕರ್ಷಿಸಿದೆ.

ಮತ್ತೊಂದು ಮೈಲುಗಲ್ಲನ್ನು ತಲುಪಿದ ಬಿಟ್‌ ಕಾಯಿನ್: ಮೊದಲ ಬಾರಿಗೆ 50 ಸಾವಿರ ಡಾಲರ್ ಗಡಿದಾಟಿದೆ

ಏಷ್ಯನ್ ಕ್ರಿಪ್ಟೋ-ಸಂಯೋಜಿತ ಕಂಪನಿಗಳ ಷೇರುಗಳು ಸಹ ಏರಿಕೆಯಾಗುತ್ತಿದ್ದು, . ಜಪಾನ್‌ನ ಮೊನೆಕ್ಸ್ ಗ್ರೂಪ್ ಇಂಕ್ ಶೇಕಡಾ 11ರಷ್ಟು ಜಿಗಿದು 13 ವರ್ಷಗಳ ಗರಿಷ್ಠ ಮಟ್ಟವನ್ನು ಮುಟ್ಟಿದೆ. ಹಾಂಗ್ ಕಾಂಗ್‌ನ ಬಿ.ಸಿ. ಟೆಕ್ನಾಲಜಿ ಗ್ರೂಪ್ ಲಿಮಿಟೆಡ್ ದಾಖಲೆಯಲ್ಲಿ ಏರಿಕೆಯಾಗಿದೆ.

ಒಂದೆಡೆ ಖಾಸಗಿ ಕ್ರಿಪ್ಟೋಕರೆನ್ಸಿಗಳನ್ನು ನಿಷೇಧಿಸಲು ಭಾರತ ಸಿದ್ಧತೆ ನಡೆಸುತ್ತಿರುವಾಗಲೂ ಬಿಟ್‌ಕಾಯಿನ್ ಇತ್ತೀಚಿನ ಏರಿಕೆಯು ಪ್ರಮುಖ ಜಾಗತಿಕ ಸಂಸ್ಥೆಗಳಿಂದ ನಿರಂತರ ಆಸಕ್ತಿಯನ್ನು ಸೂಚಿಸುತ್ತದೆ.

English summary

Bitcoin Scales Above $51,000 For First Time Amid Crypto Fever

Bitcoin’s incredible rally shows little sign of abating yet after the token jumped past $51,000 for the first time.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X