For Quick Alerts
ALLOW NOTIFICATIONS  
For Daily Alerts

ಬಿಟ್ ಕಾಯಿನ್ $ 34,800ಕ್ಕೆ ತಲುಪಿದ್ದು, ಸೋಮವಾರ $ 33,176ರಲ್ಲಿ ವಹಿವಾಟು

|

ಕ್ರಿಪ್ಟೋಕರೆನ್ಸಿ ಬಿಟ್ ಕಾಯಿನ್ ಏಷ್ಯಾದಲ್ಲಿ ಸೋಮವಾರದಂದು (ಜನವರಿ 4, 2021) $ 33,176ರಲ್ಲಿ ವಹಿವಾಟು ನಡೆಸಿದೆ. ಭಾನುವಾರದಂದು ದಾಖಲೆಯ ಎತ್ತರವಾದ $ 34,800ಕ್ಕೆ ಏರಿತ್ತು. ಪ್ರಮುಖ ವಾಹಿನಿಯಲ್ಲೇ ಪಾವತಿ ಮಾನ್ಯತೆ ಪಡೆಯುವ ಸಾಧ್ಯತೆ ಇರುವುದರಿಂದ ಡಿಜಿಟಲ್ ಕರೆನ್ಸಿಯಾದ ಬಿಟ್ ಕಾಯಿನ್ ಮೇಲೆ ಹೂಡಿಕೆ ಮಾಡುವುದನ್ನು ಹೂಡಿಕೆದಾರರು ಮುಂದುವರಿಸಿದ್ದಾರೆ.

 

2020ರ ಡಿಸೆಂಬರ್ 16ನೇ ತಾರೀಕಷ್ಟೇ ಬಿಟ್ ಕಾಯಿನ್ ಮೊದಲ ಬಾರಿಗೆ $ 20,000 ಗಡಿ ದಾಟಿತ್ತು. ಕಳೆದ ವರ್ಷ ಮಾರ್ಚ್ ಮಧ್ಯದಿಂದ ಇಲ್ಲಿಯ ತನಕ 800% ಪರ್ಸೆಂಟ್ ಹೆಚ್ಚಳವಾಗಿದೆ ಬಿಟ್ ಕಾಯಿನ್ ಮೌಲ್ಯ. ಹೂಡಿಕೆದಾರರು ಹೇಳುವ ಪ್ರಕಾರ, ನಿಯಮಿತವಾದ ಬಿಟ್ ಕಾಯಿನ್ ಪೂರೈಕೆಯಿಂದಲೇ ಅದರ ಮೇಲ್ಮುಖವಾದ ಓಟಕ್ಕೆ ಕಾರಣ. ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಚಿನ್ನಕ್ಕಿಂತಲೂ ಬಿಟ್ ಕಾಯಿನ್ ಮೇಲೆ ಹೂಡಿಕೆ ಸುರಕ್ಷಿತ ಎಂಬ ಭಾವನೆ ಇದೆ.

 

ಬಿಟ್ ಕಾಯಿನ್ ಅಲ್ಪಾವಧಿಯಲ್ಲಿ 1 ಕೋಟಿ ರು. ತಲುಪಬಹುದು ಎನ್ನುತ್ತಿದ್ದಾರೆ ವಿಶ್ಲೇಷಕರುಬಿಟ್ ಕಾಯಿನ್ ಅಲ್ಪಾವಧಿಯಲ್ಲಿ 1 ಕೋಟಿ ರು. ತಲುಪಬಹುದು ಎನ್ನುತ್ತಿದ್ದಾರೆ ವಿಶ್ಲೇಷಕರು

ಯಾವಾಗ ಬಿಟ್ ಕಾಯಿನ್ ದೊಡ್ಡ ಪ್ರಮಾಣದಲ್ಲಿ ಗಳಿಕೆ ಕಾಣಲು ಶುರುವಾಯಿತೋ ಯು.ಎಸ್.ನ ದೊಡ್ಡ ಹೂಡಿಕೆದಾರರಿಂದ ಬೇಡಿಕೆ ಶುರುವಾಯಿತು. ಇದರ ಜತೆಗೆ ಯಾರು ಈಕ್ವಿಟಿ ಷೇರುಗಳ ಮೇಲೆ ಮಾತ್ರ ಹಣ ಹಾಕುತ್ತಿದ್ದರೋ ಅಂಥವರೂ ಬಿಟ್ ಕಾಯಿನ್ ಕಡೆಗೆ ಕಣ್ಣು ನೆಟ್ಟಿದ್ದಾರೆ.

ಬಿಟ್ ಕಾಯಿನ್ $ 34,800 ತಲುಪಿದ್ದು, ಸೋಮವಾರ $33,176ರಲ್ಲಿ ವಹಿವಾಟು

ಹಲವಾರು ಎಕ್ಸ್ ಚೇಂಜ್ ಗಳಲ್ಲಿ ಡಿಜಿಟಲ್ ಕರೆನ್ಸಿ ವಹಿವಾಟು ನಡೆಯುತ್ತದೆ. ಅದರಲ್ಲಿ ದೊಡ್ಡದು ಅಂದರೆ ಕಾಯಿನ್ ಬೇಸ್. ಇದು ಯು.ಎಸ್. ನ ಪ್ರಮುಖ ಕ್ರಿಪ್ಟೋಕರೆನ್ಸಿ ಎಕ್ಸ್ ಚೇಂಜ್ ಆಗಿ, ಇನ್ನೇನು ಸಾರ್ವಜನಿಕವಾಗಿ ಷೇರು ವಿತರಣೆ ಮಾಡಿ, ವಾಲ್ ಸ್ಟ್ರೀಟ್ ನಲ್ಲಿ ಲಿಸ್ಟಿಂಗ್ ಮಾಡುವ ನಿಟ್ಟಿನಲ್ಲಿ ಸಿದ್ಧತೆ ನಡೆಸಿದೆ.

English summary

Bitcoin Traded With Record High Of 34800 USD On Sunday

World's largest crypto currency bitcoin traded with record of $ 34,800 on Sunday and after that $ 33,176 on Monday in Asia.
Story first published: Monday, January 4, 2021, 9:55 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X