For Quick Alerts
ALLOW NOTIFICATIONS  
For Daily Alerts

ಟೋಕಿಯೋದಲ್ಲಿ 12 ಕೋಟಿ ರುಪಾಯಿಗೆ ಹರಾಜಾದ ಈ ಒಂದು ಮೀನು

|

ಜಪಾನಿನ ಟೋಕಿಯೋದ ಟೊಯಾಸು ಮೀನು ಮಾರುಕಟ್ಟೆಯಲ್ಲಿ ಈ ವರ್ಷದ ಆರಂಭದಲ್ಲೇ ಭಾರೀ ಹರಾಜು ನಡೆದಿದ್ದು, ಬ್ಲೂಫಿನ್ ಟ್ಯೂನ ಮೀನು 193 ಮಿಲಿಯನ್ ಯೆನ್‌ಗೆ (ಭಾರತದ ರುಪಾಯಿಗಳಲ್ಲಿ 12 ಕೋಟಿ, 85 ಲಕ್ಷದ 32,763 ರುಪಾಯಿ) ಹರಾಜಾಗಿದೆ.

ದ್ವೀಪ ಸಮೂಹದ ಈಶಾನ್ಯದಲ್ಲಿರುವ ಬಂದರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ದೋಣಿಯಲ್ಲಿ 276 ಕೆಜಿ ತೂಕದ ಈ ಬ್ಲೂಫಿನ್ ಟ್ಯೂನ ಮೀನನ್ನು ಸೆರೆಹಿಡಿದಿದ್ದು, ಪ್ರತಿ ಕೆಜಿಗೆ 7 ಲಕ್ಷ ಯೆನ್‌( ಭಾರತದ ರುಪಾಯಿಗಳಲ್ಲಿ 4 ಲಕ್ಷ 67 ಸಾವಿರದ 184 ರುಪಾಯಿ) ಬೆಲೆಯಿದೆ ಎಂದು ಇಫೆ ಸುದ್ದಿ ವರದಿ ಮಾಡಿದೆ.

ಟೋಕಿಯೋದಲ್ಲಿ 12 ಕೋಟಿ ರುಪಾಯಿಗೆ ಹರಾಜಾದ ಈ ಒಂದು ಮೀನು

ಜಪಾನಿನ ಜನಪ್ರಿಯ ರೆಸ್ಟೋರೆಂಟ್‌ಗಳಲ್ಲಿ ಒಂದಾದ 'ಸುಶಿ ಜನ್ಮೈ' ಮಾಲೀಕ ಕಿಯೋಶಿ ಕಿಯೋಮುರಾ ಅವರು ಭಾನುವಾರ ಈ ಮೀನು ಖರೀದಿಸಿದ್ದಾರೆ. '' ಈ ವ‍ರ್ಷ ನಡೆದ ಮೊದಲ ಹರಾಜಿನಲ್ಲಿ ನಾನು ಬಿಡ್ ಗೆದ್ದಿದ್ದರಿಂದ ತುಂಬಾ ಸಂತೋಷವಾಗಿದೆ'' ಎಂದು ಕಿಯೋಮುರಾ ಹೇಳಿದ್ದಾರೆ.

ಕಿಂಗ್ ಆಫ್ ಟ್ಯುನಾ ಎಂದೇ ಖ್ಯಾತಿಯ ಕಿಯೋಮುರಾ 2011ರಿಂದ ನಡೆದಿರುವ ಒಂಭತ್ತು ಹರಾಜಿನಲ್ಲಿ ಎಂಟರಲ್ಲಿ ಅತಿ ಹೆಚ್ಚು ಬಿಡ್ ಮಾಡಿದ್ದಾರೆ. ಇದುವರೆಗೂ ಮೀನಿನ ಮೇಲೆ ಅತಿ ಹೆಚ್ಚು ಬಿಡ್ ಮಾಡಿದ ದಾಖಲೆ ಇವರ ಹೆಸರಿನಲ್ಲಿದ್ದು 2019ರಲ್ಲಿ 333.6 ಮಿಲಿಯನ್ ಯೆನ್ ಹರಾಜು ಕೂಗಿದ್ರು. ಅದಾದ ಬಳಿಕ ಇದು 2ನೇ ಸಾರ್ವಕಾಲಿಕ ಅತಿದೊಡ್ಡ ಹರಾಜಾಗಿದೆ.

English summary

Bluefin Tuna Sells For 12 Crore Rupees In Tokyo

A bluefin tuna has sold for 193 million yen ($1.8 million) at the first auction of the year at Tokyo's Toyosu fish market
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X