For Quick Alerts
ALLOW NOTIFICATIONS  
For Daily Alerts

ಬಿಪಿಸಿಎಲ್ ಉದ್ಯೋಗಿಗಳಿಗೆ ಸ್ವಯಂ ನಿವೃತ್ತಿ ಯೋಜನೆ; ಆಗಸ್ಟ್ 13 ಕೊನೆ ದಿನ

|

ಬಿಪಿಸಿಎಲ್ (ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್) ಷೇರಿನ ಪಾಲು ಮಾರಾಟಕ್ಕೆ ಬಿಡ್ ಸಲ್ಲಿಸಲು ಇನ್ನೊಂದು ವಾರ ಅವಧಿ ಇದೆ. ಈಗ ಕಂಪೆನಿಯು ಉದ್ಯೋಗಿಗಳಿಗೆ ಸ್ವಯಂ ನಿವೃತ್ತಿ ಯೋಜನೆ (ವಿಆರ್ ಎಸ್) ಮುಂದಿಟ್ಟಿದೆ. ಬಿಪಿಸಿಎಲ್ ನಲ್ಲಿ 52.98 ಪರ್ಸೆಂಟ್ ಷೇರಿನ ಪಾಲು ಮಾರಾಟಕ್ಕೆ ಜುಲೈ 31 ಕೊನೆ ದಿನವಾಗಿದೆ. ಈಗಾಗಲೇ ಅಂತಿಮ ಗಡುವು ಎರಡು ಬಾರಿ ಮುಂದಕ್ಕೆ ಹೋಗಿದೆ.

ಭಾರತ್ ಪೆಟ್ರೋಲಿಯಂ ವಾಲಂಟರಿ ರಿಟೈರ್ ಮೆಂಟ್ ಸ್ಕೀಮ್- 2020 (BPVRS- 2020) ಜುಲೈ 23ನೇ ತಾರೀಕಿನಿಂದ ಆರಂಭವಾಗಿದ್ದು, ಆಗಸ್ಟ್ 13ನೇ ತಾರೀಕಿಗೆ ಕೊನೆಯಾಗುತ್ತದೆ. ವೈಯಕ್ತಿಕ ಕಾರಣಗಳಿಗಾಗಿ ಯಾರಿಗೆ ಕಂಪೆನಿಯಲ್ಲಿ ಸೇವೆ ಮುಂದುವರಿಸಲು ಸಾಧ್ಯವಿಲ್ಲವೋ ಅಂಥವರನ್ನು ಗಮನದಲ್ಲಿಟ್ಟುಕೊಂಡು, ಯಾರಿಗೆ 45 ವರ್ಷ ಮೇಲ್ಪಟ್ಟು ವಯಸ್ಸಾಗಿದೆಯೋ ಅಂಥವರಿಗೆ ಈ ಯೋಜನೆ ತರಲಾಗಿದೆ.

ಲೆಕ್ಕಾಚಾರ ಹೇಗಿರುತ್ತದೆ?

ಲೆಕ್ಕಾಚಾರ ಹೇಗಿರುತ್ತದೆ?

ಯಾರು ವಿಆರ್ ಎಸ್ ಆಯ್ಕೆ ಮಾಡಿಕೊಳ್ಳುತ್ತಾರೋ ಅಂಥವರಿಗೆ ಈಗಾಗಲೇ ಪೂರ್ತಿ ಮಾಡಿದ ಸರ್ವೀಸ್ ಗೆ ವರ್ಷಕ್ಕೆ ಎರಡು ತಿಂಗಳ ಸಂಬಳದಂತೆ ಲೆಕ್ಕ ಹಾಕಲಾಗುತ್ತದೆ ಅಥವಾ ವಾಲಂಟರಿ ರಿಟೈರ್ ಮೆಂಟ್ ಪಡೆಯುವಾಗ ತೆಗೆದುಕೊಳ್ಳುತ್ತಿರುವ ವೇತನವನ್ನು ಬಾಕಿ ಇರುವ ಸೇವೆಗೆ ತಿಂಗಳುಗಳಿಗೆ ಗುಣಿಸಿ- ಇವೆರಡರಲ್ಲಿ ಯಾವುದು ಕಡಿಮೆಯೋ ಆ ಮೊತ್ತವನ್ನು ನೀಡಲಾಗುತ್ತದೆ.

ನೂರರಷ್ಟು ವಿಚಾರಣೆ ಬಂದಿವೆ

ನೂರರಷ್ಟು ವಿಚಾರಣೆ ಬಂದಿವೆ

ಬಿಪಿಸಿಎಲ್ ನಿಂದ ಸರ್ಕಾರದ ಬಂಡವಾಳ ಹಿಂತೆಗೆತಕ್ಕೆ ಜಾಗತಿಕ ಮಟ್ಟದ ತೈಲ ಹಾಗೂ ನೈಸರ್ಗಿಕ ಸಂಸ್ಥೆಗಳು ಆಸಕ್ತಿ ವ್ಯಕ್ತಪಡಿಸಿವೆ. ಜತೆಗೆ ಭಾರತದ ಸಂಸ್ಥೆಗಳು ಆಸಕ್ತಿ ತೋರಿವೆ. ಈ ಪ್ರಕ್ರಿಯೆಯಲ್ಲಿ ನೂರರಷ್ಟು ವಿಚಾರಣೆಗಳು ಬಂದಿವೆ. ಈ ಕಂಪೆನಿ ಖರೀದಿಗೆ ಹೂಡಿಕೆದಾರರು ಆಸಕ್ತಿ ತೋರಿದರೂ ಕೊರೊನಾದ ಕಾರಣಕ್ಕೆ ಸ್ವಲ್ಪ ಮಟ್ಟಿಗೆ ಹಿನ್ನಡೆ ಆಗಿತ್ತು.

ರಿಲಯನ್ಸ್ ಕೂಡ ಆಸಕ್ತಿ

ರಿಲಯನ್ಸ್ ಕೂಡ ಆಸಕ್ತಿ

ಸೌದಿ ಅರಾಮ್ಕೋ, ಅಬು ಧಾಬಿ ನ್ಯಾಷನಲ್ ಆಯಿಲ್ ಕಂಪೆನಿ, ರಾಸ್ ನೆಫ್ಟ್ ಆಫ್ ರಷ್ಯಾ ಮತ್ತು ಎಕ್ಸಾನ್ ಮೊಬಿಲ್ ಈ ಬಿಡ್ಡಿಂಗ್ ನಲ್ಲಿ ಪಾಲ್ಗೊಳ್ಳುವ ಯೋಜನೆಯಲ್ಲಿವೆ. ಇನ್ನು ಭಾರತದ ಕಂಪೆನಿಗಳು ಸಹ ಸ್ಪರ್ಧೆಯಿಂದ ಹೊರಬಿದ್ದಿಲ್ಲ. ಮುಖ್ಯವಾಗಿ ರಿಲಯನ್ಸ್ ಹೆಸರು ಕೇಳಿಬರುತ್ತಿದೆ.

English summary

BPCL Introduces Voluntary Retirement Scheme To Employees

State owned oil company BPCL introduces voluntary retirement scheme (VRS) for employees. Here is the details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X