For Quick Alerts
ALLOW NOTIFICATIONS  
For Daily Alerts

ಬಿಎಸ್ಎನ್ಎಲ್‌ನಿಂದ ಎರಡು ಹೊಸ ಪ್ರೀಪೇಯ್ಡ್ ಯೋಜನೆ ಆಫರ್!

|

ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ನಿಯಮಿತ (BSNL) ಇತ್ತೀಚೆಗೆ ಎರಡು ಹೊಸ ಪ್ರೀಪೇಯ್ಡ್ ಯೋಜನೆಗಳನ್ನು ಪ್ರಕಟಿಸಿದೆ. ಮೊದಲ ಯೋಜನೆ 228 ರು ಹಾಗೂ ಎರಡನೇ ಯೋಜನೆ 239 ರು ಎಂದು ನಿಗದಿಪಡಿಸಲಾಗಿದೆ. ಹೊಸ ಯೋಜನೆಗಳ ವಿವರ ಮುಂದಿದೆ...

 

228 ರು ಯೋಜನೆಯಲ್ಲಿ ಅನಿಯಮಿತ ವಾಯ್ಸ್ ಕಾಲಿಂಗ್ ಹಾಗೂ 2ಜಿಬಿ ಪ್ರತಿದಿನದ ಡೇಟಾ ಹಾಗೂ ಉಳಿದ ಸೌಲಭ್ಯ ಸಿಗಲಿದೆ. 239 ಯೋಜನೆಯಲ್ಲಿ 10 ರು ಹೆಚ್ಚುವರಿ ಟಾಕ್ ಟೈಮ್ ಅನಿಯಮಿತ ವಾಯ್ಸ್ ಕಾಲಿಂಗ್ ಹಾಗೂ 2ಜಿಬಿ ಡೇಟಾ ಹಾಗೂ ಉಳಿದ ಸೌಲಭ್ಯಗಳು ಸಿಗಲಿದೆ. ಜುಲೈ 1ರಿಂದ ಈ ಸೌಲಭ್ಯಗಳು ಸಿಗಲಿದ್ದು, ಜಿಯೋ, ವಿ ಹಾಗೂ ಏರ್ ಟೆಲ್ ಈಗಾಗಲೇ ದರ ಸಮರದಲ್ಲಿದ್ದು, ಹೊಸ ಪರಿಷ್ಕೃತ ದರಗಳನ್ನು ಪ್ರಕಟಿಸಿವೆ.

ಬಿಎಸ್‌ಎನ್‌ಎಲ್‌: ಕೈಗೆಟಕುವ ದರದಲ್ಲಿ 2 ಪ್ರೀಮಿಯಂ ಬ್ರಾಡ್‌ಬ್ಯಾಂಡ್ ಪ್ಲ್ಯಾನ್, ಹಲವು ಲಾಭ

ಟೆಲಿಕಾಂಟಾಕ್ ವರದಿ ಪ್ರಕಾರ, 228 ಹಾಗೂ 239 ರು ತಿಂಗಳ ಪ್ರೀಪೇಯ್ಡ್ ಯೋಜನೆಯಲ್ಲಿ ವಾಯ್ಸ್ ಕಾಲಿಂಗ್, 2ಜಿಬಿ ಪ್ರತಿ ದಿನದ ಡೇಟಾ ಸಿಗಲಿದೆ.

ಬಿಎಸ್ಎನ್ಎಲ್‌ನಿಂದ ಎರಡು ಹೊಸ ಪ್ರೀಪೇಯ್ಡ್ ಯೋಜನೆ ಆಫರ್!

2ಜಿಬಿ ಡೇಟಾ ಮಿತಿ ಮುಗಿದ ಬಳಿಕ 80ಕೆಬಿಪಿಎಸ್ ವೇಗದಲ್ಲಿ ಇಂಟರ್ನೆಟ್ ಪಡೆದುಕೊಳ್ಳಬಹುದು. 100 ಎಸ್ಎಂಎಸ್ ಪ್ರತಿದಿನ ಸಿಗಲಿದೆ. 228ರು ಯೋಜನೆಯಲ್ಲಿ ಪ್ರೊಗೆಸಿವ್ ವೆಬ್ ಆಪ್ ಬಳಸುವ ಬಿಎಸ್ಎನ್ಎಲ್ ಗ್ರಾಹಕರಿಗೆ ಅರೆನಾ ಮೊಬೈಲ್ ಗೇಮಿಂಗ್ ಸರ್ವಿಸ್ ಕೂಡಾ ಲಭ್ಯವಾಗಲಿದೆ.

239 ಯೋಜನೆ ಆಯ್ಕೆ ಮಾಡಲಿರುವ ಗ್ರಾಹಕರಿಗೆ ಹೆಚ್ಚುವರಿ 10 ರು ಗಳ ಟಾಕ್ ಟೈಮ್ ಸಿಗಲಿದೆ. ಇನ್ನು 229 ರು ಯೋಜನೆಯಲ್ಲಿ 228 ಯೋಜನೆಯ ಎಲ್ಲಾ ಸೌಲಭ್ಯಗಳು ಲಭ್ಯವಾಗಲಿದೆ.

ವೋಡಾಫೋನ್ -ಐಡಿಯಾ ಆಫರ್‌ಗಳನ್ನು ಗಮನಿಸಿದರೆ 239 ರು ಮತ್ತು 249 ರು ರೀಚಾರ್ಜ್ ಯೋಜನೆಗಳಲ್ಲಿ ಅನಿಯಮಿತ ಟಾಕ್‌ಟೈಮ್ ಜೊತೆಗೆ ದಿನಕ್ಕೆ 1GB ಮತ್ತು 1.5GB ಡೇಟಾ ಸಿಗಲಿದೆ. 239 ರು ಯೋಜನೆಯ ಮಾನ್ಯತೆಯು 24 ದಿನಗಳವರೆಗೆ ಮತ್ತು 249 ರು ಯೋಜನೆಯ ಮಾನ್ಯತೆ 21 ದಿನಗಳ ತನಕ ಇರಲಿದೆ.

 

ಭಾರ್ತಿ ಏರ್‌ಟೆಲ್ 239 ರು ಪ್ರಿಪೇಯ್ಡ್ ಯೋಜನೆಯು ಅನಿಯಮಿತ ಟಾಕ್‌ಟೈಮ್, 24 ದಿನಗಳವರೆಗೆ ವ್ಯಾಲಿಡಿಟಿ ಹೊಂದಿದ್ದು, ದಿನಕ್ಕೆ 1GB ಡೇಟಾವನ್ನು ನೀಡುತ್ತದೆ.

ಜಿಯೋ ಈ ಬೆಲೆ ಶ್ರೇಣಿಯಲ್ಲಿ ಹೆಚ್ಚಿನ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳನ್ನು ನೀಡುತ್ತದೆ. 222 ರು ಪ್ಲಾನ್ ಜೊತೆಗೆ ದಿನಕ್ಕೆ 2GB ಡೇಟಾ ಮತ್ತು 28 ದಿನಗಳವರೆಗೆ ಅನಿಯಮಿತ ಕರೆ, ರೂ. 239 ಯೋಜನೆಯು ದಿನಕ್ಕೆ 1.5GB ಡೇಟಾವನ್ನು 28 ದಿನಗಳವರೆಗೆ ನೀಡುತ್ತದೆ ಮತ್ತು ರೂ. 249 ಪ್ರಿಪೇಯ್ಡ್ ಯೋಜನೆಯು ದಿನಕ್ಕೆ 2GB ಡೇಟಾವನ್ನು 23 ದಿನಗಳವರೆಗೆ ನೀಡುತ್ತದೆ.

English summary

BSNL Rs. 228, Rs. 239 Prepaid Monthly Recharge Plans details

Bharat Sanchar Nigam Limited (BSNL) has reportedly launched two new monthly recharge plans. The first plan costs Rs. 228 and will offer unlimited voice calling and 2GB of daily data among other benefits.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X