For Quick Alerts
ALLOW NOTIFICATIONS  
For Daily Alerts

ಬಜೆಟ್ 2021: ಕೇಂದ್ರ ಸಚಿವೆ ನಿರ್ಮಲಾರಿಂದ ಇಂದು ಆರ್ಥಿಕ ಸಮೀಕ್ಷೆ ಮಂಡನೆ

By ಅನಿಲ್ ಆಚಾರ್
|

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ (ಜನವರಿ 29, 2021) ಸಂಸತ್ ನಲ್ಲಿ ವಾರ್ಷಿಕ ಆರ್ಥಿಕ ಸಮೀಕ್ಷೆ ಮಂಡಿಸಲಿದ್ದಾರೆ. ಸಂಶೋಧಕರು ಮತ್ತು ಭಾರತದ ಆರ್ಥಿಕತೆಯನ್ನು ಅನುಸರಿಸುವಂಥವರು 2021- 21ಕ್ಕೆ ಬೆಳವಣಿಗೆ ಅಂದಾಜು ಏನಿರಲಿದೆ ಎಂದು ಕುತೂಹಲದಿಂದ ಎದುರು ನೋಡುತ್ತಿದ್ದಾರೆ.

ಸಾಮಾನ್ಯವಾಗಿ ಕೇಂದ್ರ ಬಜೆಟ್ ಗೆ ಒಂದು ದಿನ ಮುಂಚೆ ಆರ್ಥಿಕ ಸಮೀಕ್ಷೆ (ಎಕನಾಮಿಕ್ ಸರ್ವೇ) ಮಂಡಿಸಲಾಗುತ್ತದೆ. ಆರ್ಥಿಕತೆಯ ಅಧಿಕೃತ ವರದಿಯಂತೆ ಇದು ಕಾರ್ಯ ನಿರ್ವಹಿಸುತ್ತದೆ. ಈ ವರ್ಷ ಹಣಕಾಸು ಸಚಿವೆ ಜನವರಿ 29ರಂದೇ ಸಂಸತ್ ನಲ್ಲಿ ಮಂಡನೆ ಮಾಡುತ್ತಾರೆ. ಅಂದರೆ, 2021- 22ನೇ ಸಾಲಿಗೆ ಫೆಬ್ರವರಿ 1ನೇ ತಾರೀಕಿನಂದು ಇರುವ ಬಜೆಟ್ ಗೆ ಎರಡು ದಿನ ಮೊದಲೇ ಆರ್ಥಿಕ ಸಮೀಕ್ಷೆ ತೆರೆದಿಡುತ್ತಾರೆ.

ಬಜೆಟ್ 2021: ಏನಿದು ಭಾರತದ ಆರ್ಥಿಕ ಸಮೀಕ್ಷೆ? ಈ ವರದಿಗೆ ಏಕಿಷ್ಟು ಮಹತ್ವ?ಬಜೆಟ್ 2021: ಏನಿದು ಭಾರತದ ಆರ್ಥಿಕ ಸಮೀಕ್ಷೆ? ಈ ವರದಿಗೆ ಏಕಿಷ್ಟು ಮಹತ್ವ?

ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್ ಮತ್ತು ತಂಡವು ಆರ್ಥಿಕ ಸಮೀಕ್ಷೆಯನ್ನು ಸಿದ್ಧಪಡಿಸಿದೆ. 2019ರಲ್ಲಿ ಮೊದಲ ಬಾರಿಗೆ ಆರ್ಥಿಕ ಸಮೀಕ್ಷೆ ಸಿದ್ಧಪಡಿಸಿದಾಗ ಸುಬ್ರಮಣಿಯನ್ ಅವರು 8% ಸುಸ್ಥಿರ ಗ್ರಾಸ್ ಡೊಮೆಸ್ಟಿಕ್ ಪ್ರಾಡೆಕ್ಟ್ (ಜಿಡಿಪಿ) ಬೆಳವಣಿಗೆ ಕಾರ್ಯಸೂಚಿ ಸಿದ್ಧಪಡಿಸಿದ್ದರು. ಪ್ರಧಾನಿ ಮೋದಿ ಅವರ ಆಕಾಂಕ್ಷೆಯಂತೆ 2024- 25ರ ಹೊತ್ತಿಗೆ ಭಾರತದ ಆರ್ಥಿಕತೆಯನ್ನು $ 5 ಟ್ರಿಲಿಯನ್ ಮಾಡುವ ನಿಟ್ಟಿನಲ್ಲಿ ಅದು ರೂಪಿಸಲಾಗಿತ್ತು.

ಬಜೆಟ್ 2021: ಸಚಿವೆ ನಿರ್ಮಲಾರಿಂದ ಇಂದು ಆರ್ಥಿಕ ಸಮೀಕ್ಷೆ ಮಂಡನೆ

ಆದರೆ, 2020ರಲ್ಲಿ ಭಾರತದ ಆರ್ಥಿಕತೆ ಮೇಲೆ ಕೊರೊನಾ ಬಿಕ್ಕಟ್ಟು ಭಾರೀ ಪರಿಣಾಮ ಬೀರಿತು. ಏಪ್ರಿಲ್ ನಿಂದ ಜೂನ್ ತ್ರೈಮಾಸಿಕದಲ್ಲಿ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದಲ್ಲಿ 23.9% ಜಿಡಿಪಿ ಕುಸಿತ ಕಂಡಿತು. ನಲವತ್ತು ವರ್ಷಕ್ಕೂ ಹೆಚ್ಚು ಅವಧಿಯಲ್ಲಿ ಇದೇ ಮೊದಲ ಬಾರಿಗೆ ಜಿಡಿಪಿ ಇಂಥ ನಕಾರಾತ್ಮಕ ಬೆಳವಣಿಗೆ ದಾಖಲಿಸಿತು.

ಇನ್ನು ಜುಲೈನಿಂದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಕಳೆದ ವರ್ಷಕ್ಕೆ ಹೋಲಿಸಿದಲ್ಲಿ 7.5% ಕುಸಿತ ದಾಖಲಿಸಿತು. ಅಂದ ಹಾಗೆ ಆರ್ಥಿಕ ಸಮೀಕ್ಷೆ ಎಂಬುದು ಆರ್ಥಿಕತೆಯ ಸ್ಥಿತಿಗತಿ, ನೀತಿ ನಿರೂಪಣೆಯ ಸವಾಲುಗಳು ಹಾಗೂ ಸಾಧ್ಯತೆಗಳನ್ನು ತೆರೆದಿಡುವ ವರದಿ. ವಲಯಾಧಾರಿತ ನೋಟವನ್ನು ಅದು ತೆರೆದಿಡುತ್ತದೆ ಮತ್ತು ಸುಧಾರಣೆ ಕ್ರಮಗಳ ಬಗ್ಗೆ ಅಭಿಪ್ರಾಯವನ್ನು ತಿಳಿಸುತ್ತದೆ.

ಭವಿಷ್ಯದ ನೀತಿ ನಡೆಗಳ ನೋಟವನ್ನೂ ಇದು ಒಳಗೊಂಡಿರುತ್ತದೆ. ಈ ಸಮೀಕ್ಷೆಯು ಆರ್ಥಿಕ ಬೆಳವಣಿಗೆ ಅಂದಾಜು, ಆರ್ಥಿಕತೆ ಏಕೆ ವೇಗವಾಗಿ ವಿಸ್ತರಣೆ ಆಗುತ್ತದೆ ಅಥವಾ ಕುಗ್ಗುತ್ತದೆ ಎಂಬುದಕ್ಕೆ ಕಾರಣಗಳು, ಕೆಲವು ಸಲ ಬಲವಂತವಾಗಿ ಕೆಲವು ನಿರ್ದಿಷ್ಟ ಸುಧಾರಣೆ ಕ್ರಮಗಳ ಬಗ್ಗೆ ತಿಳಿಸುತ್ತದೆ.

English summary

Budget 2021: FM Nirmala Sitharaman Presents Economic Survey Today

Union finance minister Nirmala Sitharaman presents economic survey today, before presentation union budget 2021, that is on February 1st.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X