For Quick Alerts
ALLOW NOTIFICATIONS  
For Daily Alerts

ಬಜೆಟ್ 2021: ಮೊಬೈಲ್ ಫೋನ್‌ಗಳು ದುಬಾರಿಯಾಗಲಿವೆ!

|

ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ 2021-22ರ ಹಣಕಾಸು ವರ್ಷದ ಐತಿಹಾಸಿಕ ಬಜೆಟ್ ಮಂಡಿಸಿದರು. ಕೋವಿಡ್ -19 ಬಿಕ್ಕಟ್ಟಿನ ನಂತರ ನಿರೀಕ್ಷೆಗಳು ಸಾಕಷ್ಟು ಹೆಚ್ಚಿದ್ದು, ಹಣಕಾಸು ಸಚಿವರು ತಮ್ಮ ಮೂರನೇ ಬಜೆಟ್ ಅನ್ನು ಟ್ಯಾಬ್ ಮೂಲಕ ಮಂಡಿಸಿದರು.

 

ಈ ಬಜೆಟ್‌ನಲ್ಲಿ, ಮೊಬೈಲ್ ಬಿಡಿ ಭಾಗಗಳು ಮತ್ತು ಎಲೆಕ್ಟ್ರಾನಿಕ್ ವಸ್ತುಗಳ ಮೇಲಿನ ಕಸ್ಟಮ್ ಸುಂಕವನ್ನು ಶೇಕಡಾ 2.5 ರಷ್ಟು ಹೆಚ್ಚಿಸಲು ಸರ್ಕಾರ ಘೋಷಿಸಿದೆ. ಈ ಕಾರಣದಿಂದಾಗಿ, ಮೊಬೈಲ್ ಫೋನ್ ಮತ್ತು ಚಾರ್ಜರ್‌ಗಳು ದುಬಾರಿಯಾಗಬಹುದು. ಅಲ್ಲದೆ, ಟಿವಿ ಸೇರಿದಂತೆ ಇತರ ಎಲೆಕ್ಟ್ರಾನಿಕ್ ವಸ್ತುಗಳ ಬೆಲೆಯೂ ಹೆಚ್ಚಾಗುವ ನಿರೀಕ್ಷೆಯಿದೆ. ಇದರೊಂದಿಗೆ ಚಿನ್ನ ಮತ್ತು ಬೆಳ್ಳಿಯ ಮೇಲಿನ ಕಸ್ಟಮ್ ಸುಂಕವನ್ನು ಕಡಿಮೆ ಮಾಡಲಾಗಿದೆ. ಉಕ್ಕಿನ ಮೇಲಿನ ಕಸ್ಟಮ್ ಸುಂಕವನ್ನು ಶೇಕಡಾ 7.5ಕ್ಕೆ ಇಳಿಸಲಾಗಿದೆ ಎಂದು ವರದಿ ಮಾಡಿದೆ.

ವಾಸ್ತವವಾಗಿ, 2021-22ರ ಹಣಕಾಸು ವರ್ಷದಲ್ಲಿ ಮೊಬೈಲ್ ಫೋನ್ ಮತ್ತು ಬ್ಯಾಟರಿ ಚಾರ್ಜರ್‌ಗಳ ಸಾಧನಗಳಲ್ಲಿನ ಮೂಲ ಕಸ್ಟಮ್ ಸುಂಕವನ್ನು ಶೇಕಡಾ 2.5 ರಷ್ಟು ಹೆಚ್ಚಿಸಲು ಸರ್ಕಾರ ಬಜೆಟ್‌ನಲ್ಲಿ ಘೋಷಿಸಿದೆ. ಈ ಹೆಚ್ಚಳದಿಂದಾಗಿ ಸಾಧನಗಳು ಮತ್ತು ಎಲೆಕ್ಟ್ರಾನಿಕ್ ವಸ್ತುಗಳು ದುಬಾರಿಯಾಗಬಹುದು.

 ಬಜೆಟ್ 2021: ಮೊಬೈಲ್ ಫೋನ್‌ಗಳು ದುಬಾರಿಯಾಗಲಿವೆ!

ಉತ್ತಮ ಮೌಲ್ಯವರ್ಧನೆಗಾಗಿ, ನಾವು ಚಾರ್ಜರ್ ಮತ್ತು ಮೊಬೈಲ್‌ನ ಕೆಲವು ಬಿಡಿ ಭಾಗಗಳನ್ನು ವಿನಾಯಿತಿಗಳನ್ನು ತೆಗೆದುಹಾಕುತ್ತಿದ್ದೇವೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದರು. ಇದಲ್ಲದೆ, ಕೆಲವು ಮೊಬೈಲ್ ಭಾಗಗಳನ್ನು ನಿಲ್(Nil) ದರದಿಂದ ಮಧ್ಯಮಕ್ಕೆ (2.5%) ಇಳಿಸಲಾಗಿದೆ.

ಪ್ರಸ್ತುತ ಬ್ಯಾಟರಿ ಚಾರ್ಜರ್ ಮೇಲೆ 15 ರಿಂದ 20 ಪ್ರತಿಶತದಷ್ಟು ಕಸ್ಟಮ್ ಸುಂಕವನ್ನು ವಿಧಿಸುತ್ತದೆ . ಜೊತೆಗೆ ಹ್ಯಾಂಡ್‌ಸೆಟ್ ಕಸ್ಟಮ್ ಸುಂಕ 22.5 ಪ್ರತಿಶತದಷ್ಟು ಹೊಂದಿದೆ. ಅದೇ ಸಮಯದಲ್ಲಿ, ಪ್ರದರ್ಶನ ಫಲಕ, ಪಿಸಿಬಿ, ಮೆಕ್ಯಾನಿಕ್ಸ್ ಮತ್ತು ಡೈ ಕಟ್ ಭಾಗದಲ್ಲಿ ಶೇಕಡಾ 10 ರಷ್ಟು ಹೊಂದಿದೆ.

English summary

Union Budget 2021: Mobile phones to get expensive

Smartphones may get expensive in the coming months as the government has decided to remove exemptions on parts of chargers and mobiles in a bid to promote local manufacturing.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X