For Quick Alerts
ALLOW NOTIFICATIONS  
For Daily Alerts

ಸೀಮೆ ಎಣ್ಣೆಗೆ ಈ ಬಾರಿ ಸಬ್ಸಿಡಿ ಎತ್ತಿಟ್ಟಿಲ್ಲ, ಆದರೂ ಯಾರ ಗಮನಕ್ಕೂ ಬಂದಿಲ್ಲ

|

ಸಣ್ಣ ಪ್ರಮಾಣದಲ್ಲಿ ಪಾಕ್ಷಿಕವಾಗಿ ಬೆಲೆ ಏರಿಕೆ ಮಾಡುವ ಮೂಲಕ ಸರ್ಕಾರದಿಂದ ಸೀಮೆ ಎಣ್ಣೆ ಮೇಲಿನ ಸಬ್ಸಿಡಿಯನ್ನು ತೆಗೆಯಲಾಗಿದೆ. ಸಾರ್ವಜನಿಕ ವಿತರಣೆ ವ್ಯವಸ್ಥೆ (ಪಿಡಿಎಸ್)ಯಲ್ಲಿ ಮಾರಾಟ ಆಗುವ ದರ ಹಾಗೂ ಮಾರುಕಟ್ಟೆಯಲ್ಲಿನ ದರ ಒಂದೇ ಆಗಲಿದೆ. 2021- 22ರ ಬಜೆಟ್ ನಲ್ಲಿ ಸೀಮೆ ಎಣ್ಣೆ ಸಬ್ಸಿಡಿ ಪಾವತಿಗೆ ಹಣ ಮೀಸಲಿಟ್ಟಿಲ್ಲ. ಈ ಅಂಶವು ಸಂಸತ್ ನಲ್ಲಿ ಮಂಡಿಸಿದ ಬಜೆಟ್ ದಾಖಲೆಯಲ್ಲಿ ಬಹಿರಂಗವಾಗಿದೆ.

ಈ ವರ್ಷದ ಮಾರ್ಚ್ 31ಕ್ಕೆ ಕೊನೆಯಾದ ವರ್ಷಕ್ಕೆ ಸೀಮೆ ಎಣ್ಣೆ ಸಬ್ಸಿಡಿ ರು. 2,677.32 ಕೋಟಿ ಇತ್ತು. ಈ ಹಿಂದಿನ ಹಣಕಾಸು ವರ್ಷದಲ್ಲಿ ಸಬ್ಸಿಡಿ ರು. 4058 ಕೋಟಿ ಇತ್ತು. ಸಬ್ಸಿಡಿ ಹೊರೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಪ್ರತಿ ಹದಿನೈದು ದಿನಕ್ಕೊಮ್ಮೆ ಲೀಟರ್ ಗೆ 25 ಪೈಸೆ ಏರಿಕೆ ಮಾಡುತ್ತದೆ.

ಪೆಟ್ರೋಲ್ ದರ: ರಾಮನ ಭಾರತದಲ್ಲಿ ರು. 93, ರಾವಣನ ಲಂಕೆಯಲ್ಲಿ ರು. 51ಪೆಟ್ರೋಲ್ ದರ: ರಾಮನ ಭಾರತದಲ್ಲಿ ರು. 93, ರಾವಣನ ಲಂಕೆಯಲ್ಲಿ ರು. 51

ಕಳೆದ ವರ್ಷದ ಫೆಬ್ರವರಿಯಿಂದ ಸಬ್ಸಿಡಿ ತೆಗೆಯಲಾಗಿದೆ. ಒಟ್ಟಾರೆ ದರದಲ್ಲಿ ನಾಲ್ಕು ವರ್ಷದಲ್ಲಿ ರು. 23.8 ಏರಿಕೆ ಆಗಿದೆ. ಮುಂಬೈನಲ್ಲಿ ಲೀಟರ್ ಗೆ ರು. 15.02 ಇದ್ದದ್ದು ಈಗ ರು. 36.12 ಇದೆ. 2020ರ ಮೇ ತಿಂಗಳಲ್ಲಿ ಸೀಮೆ ಎಣ್ಣೆ ಲೀಟರ್ ಗೆ ರು. 13.96ಕ್ಕೆ ಕುಸಿದಿತ್ತು. ಆ ನಂತರ ಮೊತ್ತವು ಲೀಟರ್ ಗೆ ರು. 30.12 ಆಯಿತು. ಜನವರಿಯಲ್ಲಿ ಕೊನೆಯದಾಗಿ ಬೆಲೆ ಏರಿಕೆ ಆದ ಮೇಲೆ, ದರ ಲೀಟರ್ ಗೆ ರು. 3.87 ಹೆಚ್ಚಳ ಆಗಿದೆ.

ಸೀಮೆ ಎಣ್ಣೆಗೆ ಸಬ್ಸಿಡಿ ಎತ್ತಿಟ್ಟಿಲ್ಲ, ಆದರೂ ಯಾರ ಗಮನಕ್ಕೂ ಬಂದಿಲ್ಲ

ಈ ದರ ಹೆಚ್ಚಳವು ಗಮನಕ್ಕೆ ಬಾರದೆ ಹೋಗಿದೆ. ವಿಪಕ್ಷಗಳಿಂದ ಯಾವುದೇ ಟೀಕೆ ವ್ಯಕ್ತವಾಗಿಲ್ಲ. ಪೆಟ್ರೋಲ್ ಮತ್ತು ಡೀಸೆಲ್ ದರದ ಏರಿಕೆ ಬಗ್ಗೆ ಧ್ವನಿ ಎತ್ತಿದ್ದಾರೆ. ಸೀಮೆ ಎಣ್ಣೆಯನ್ನು ಪಡಿತರ ಚೀಟಿದಾರರು ಅಡುಗೆಗಾಗಿ ಹಾಗೂ ವಿದ್ಯುತ್ ಗೆ ಪರ್ಯಾಯವಾಗಿ ಬಳಸಲಾಗುತ್ತಿದೆ. ಎಂಟು ಕೋಟಿ ಉಚಿತ ಎಲ್ ಪಿಜಿ ಸಂಪರ್ಕ ನೀಡಿದ ಮೇಲೆ ಸೀಮೆ ಎಣ್ಣೆ ಬಳಕೆ ಕಡಿಮೆ ಆಗಿದೆ.

2020ರ ಏಪ್ರಿಲ್ ನಿಂದ ಡಿಸೆಂಬರ್ ಮಧ್ಯೆ ಸೀಮೆ ಎಣ್ಣೆ ಬಳಕೆ 28.4% ಕಡಿಮೆ ಆಗಿದೆ ಎಂಬ ಅಂಶವು ತೈಲ ಸಚಿವಾಲಯದ ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣೆ ವಿಭಾಗದಿಂದ ಬಯಲಾಗಿದೆ.

ಆಂಧ್ರಪ್ರದೇಶ, ದೆಹಲಿ, ಹರಿಯಾಣ ಮತ್ತು ಪಂಜಾಬ್ ನಿಂದ ಉಚಿತ ಸೀಮೆ ಎಣ್ಣೆ ಘೋಷಣೆ ಮಾಡಲಾಗಿದೆ. ಗುಜರಾತ್, ಬಿಹಾರ, ಉತ್ತರಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಸ್ವಯಂಪ್ರೇರಿತವಾಗಿ ಸಾರ್ವಜನಿಕ ವಿತರಣೆ ವ್ಯವಸ್ಥೆ ಅಡಿ ಸೀಮೆ ಎಣ್ಣೆ ಹಂಚಿಕೆ ಪ್ರಮಾಣ ಬಿಟ್ಟುಕೊಡುವ ಆಯ್ಕೆಯನ್ನು ನೀಡಲಾಗಿದೆ.

2010ರ ಜೂನ್ ನಲ್ಲಿ ಪೆಟ್ರೋಲ್ ದರ ನಿಯಂತ್ರಣದಿಂದ ಹೊರ ತರಲಾಯಿತು. ಡೀಸೆಲ್ ದರ 2014ರ ಅಕ್ಟೋಬರ್ ನಲ್ಲಿ ಮುಕ್ತಗೊಳಿಸಲಾಯಿತು. ಇದರರ್ಥ ಎರಡರ ಸಬ್ಸಿಡಿ ಕೊನೆಗೊಳಿಸಲಾಯಿತು. ಅಡುಗೆ ಅನಿಲ (ಎಲ್ ಪಿಜಿ) ಮತ್ತು ಸೀಮೆ ಎಣ್ಣೆ ಸಬ್ಸಿಡಿ ಮುಂದುವರಿದಿತ್ತು.

2021- 22ರಲ್ಲಿ ಎಲ್ ಪಿಜಿಗೆ ಬಜೆಟ್ ನಲ್ಲಿ ರು. 12,480 ಕೋಟಿ ಸಬ್ಸಿಡಿಗೆ ಮೀಸಲಿಡಲಾಗಿದೆ. ಇದಕ್ಕೂ ಮುನ್ನ 2021- 22ಕ್ಕೆ ರು. 25,520.79 ಕೋಟಿಯನ್ನು ಎತ್ತಿಟ್ಟಿದ್ದು, ಹಿಂದಿನ ವರ್ಷ ರು. 35,605 ಕೋಟಿ ಇತ್ತು.

English summary

Budget 2021: Union Government Eliminates Subsidy On Kerosene

Budget 2021: Central government eliminates subsidy on Kerosene by increasing price fortnightly.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X