For Quick Alerts
ALLOW NOTIFICATIONS  
For Daily Alerts

ಬಜೆಟ್ 2021: ಏನಿದು ಭಾರತದ ಆರ್ಥಿಕ ಸಮೀಕ್ಷೆ? ಈ ವರದಿಗೆ ಏಕಿಷ್ಟು ಮಹತ್ವ?

|

ಈ ಹಿಂದಿನ ವರ್ಷದ ಆರ್ಥಿಕತೆ ಸ್ಥಿತಿಗತಿ ಅಥವಾ ಪ್ರದರ್ಶನ, ಭವಿಷ್ಯದ ಸವಾಲುಗಳು ಈ ಬಗೆಗಿನ ಸಂಪೂರ್ಣ ವರದಿಯನ್ನು ಭಾರತದ ಆರ್ಥಿಕ ಸಮೀಕ್ಷೆ (ಎಕನಾಮಿಕ್ ಸರ್ವೇ ಆಫ್ ಇಂಡಿಯಾ) ಎನ್ನಲಾಗುತ್ತದೆ. ಕೇಂದ್ರ ಬಜೆಟ್ ಗೆ ಒಂದು ದಿನದ ಮೊದಲು ಆರ್ಥಿಕ ಸಮೀಕ್ಷೆ ಮಂಡಿಸಲಾಗುತ್ತದೆ.

ಮುಖ್ಯ ಆರ್ಥಿಕ ಸಲಹೆಗಾರರ (ಸಿಇಎ) ಮಾರ್ಗದರ್ಶನದಲ್ಲಿ ಆರ್ಥಿಕ ವ್ಯವಹಾರಗಳ ಇಲಾಖೆ ಅರ್ಥಶಾಸ್ತ್ರ ವಿಭಾಗದಿಂದ ಈ ವರದಿಯನ್ನು ಸಿದ್ಧಪಡಿಸಲಾಗುತ್ತದೆ. ಕೃಷ್ಣಮೂರ್ತಿ ಸುಬ್ರಮಣಿಯನ್ ಅವರನ್ನು 2018ರ ಡಿಸೆಂಬರ್ ನಲ್ಲಿ ಸಿಇಎ ಆಗಿ ನೇಮಿಸಲಾಗಿದೆ. ಈ ವರ್ಷದ ಸಮೀಕ್ಷೆಯನ್ನು ಅವರೇ ಮಂಡಿಸಲಿದ್ದಾರೆ.

ಬಜೆಟ್ 2021: ಸ್ಟ್ಯಾಂಡರ್ಡ್ ಡಿಡಕ್ಷನ್ ರು. 1 ಲಕ್ಷಕ್ಕೆ ಹೆಚ್ಚಳ !ಬಜೆಟ್ 2021: ಸ್ಟ್ಯಾಂಡರ್ಡ್ ಡಿಡಕ್ಷನ್ ರು. 1 ಲಕ್ಷಕ್ಕೆ ಹೆಚ್ಚಳ !

ಸಾಮಾನ್ಯವಾಗಿ ಬಜೆಟ್ ಗೆ ಒಂದು ದಿನದ ಮೊದಲು ಆರ್ಥಿಕ ಸಮೀಕ್ಷೆ ಮಂಡಿಸಲಾಗುತ್ತದೆ. ಆದರೆ ಈ ವರ್ಷ ಸ್ವಲ್ಪ ಬದಲಾವಣೆ ಆಗಬಹುದು. ಟೈಮ್ ಆಫ್ ಇಂಡಿಯಾ ವರದಿ ಪ್ರಕಾರ, ಆರ್ಥಿಕ ಸಮೀಕ್ಷೆ 2021 ವರದಿಯು ಜನವರಿ 29ರಂದು ಮಂಡಿಸಲಾಗುತ್ತದೆ. ಕೇಂದ್ರ ಬಜೆಟ್ ಫೆಬ್ರವರಿ 1ರ ಸೋಮವಾರ ಮಂಡನೆ ಆಗಲಿದೆ.

ಬಜೆಟ್ 2021: ಏನಿದು ಭಾರತದ ಆರ್ಥಿಕ ಸಮೀಕ್ಷೆ? ಏಕಿಷ್ಟು ಮಹತ್ವ?

ಆರ್ಥಿಕ ಸಮೀಕ್ಷೆ ಎಂದರೇನು?
ಕಳೆದ ಒಂದು ವರ್ಷದಲ್ಲಿ ದೇಶದ ಸ್ಥಿತಿ ಹೇಗಿದೆ ಎಂದು ತಿಳಿಸುವ ದಾಖಲೆಯಿದು. ಭವಿಷ್ಯದಲ್ಲಿನ ಸವಾಲುಗಳ ಬಗ್ಗೆ ಕೂಡ ಅದರಲ್ಲಿ ಪ್ರಸ್ತಾವ ಮಾಡಲಾಗುತ್ತದೆ. ಬಜೆಟ್ ಮಂಡನೆ ಆಗುವ ಮುನ್ನ ಈ ವರದಿಯು ಅಡಿಪಾಯದಂತೆ. ಆರ್ಥಿಕ ಸಮೀಕ್ಷೆಯು ಆರ್ಥಿಕ ಬೆಳವಣಿಗೆ ಅಂದಾಜು ಹಾಗೂ ಅದಕ್ಕೆ ಕಾರಣ ಮತ್ತು ವಿಸ್ತರಣೆ ಅಥವಾ ಕುಗ್ಗುವಂತಿದ್ದರೆ ಕಾರಣ ಏನು ಎಂಬುದನ್ನು ತಿಳಿಸುತ್ತದೆ.

ಆರ್ಥಿಕ ಸಮೀಕ್ಷೆ ಬಹಳ ಹಿಂದಿನಿಂದಲೂ ಮಂಡಿಸಲಾಗುತ್ತಿದೆ. ಮೊದಲಿಗೆ ಮಂಡನೆ ಆಗಿರುವುದು 1950- 51ರಲ್ಲಿ. ಕಳೆದ ಕೆಲ ವರ್ಷಗಳಿಂದ ಎರಡು ಸಂಪುಟದಲ್ಲಿ ಬಿಡುಗಡೆ ಆಗುತ್ತಿದೆ. ಮೊದಲ ಸಂಪುಟದಲ್ಲಿ ಭಾರತದ ಆರ್ಥಿಕತೆ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಇರುತ್ತದೆ. ಎರಡರಲ್ಲಿ ಹಿಂದಿನ ವರ್ಷದ ವಿಮರ್ಶೆ ಇರುತ್ತದೆ. ಜತೆಗೆ ಸರ್ಕಾರದ ಪ್ರಮುಖ ಯೋಜನೆಗಳು, ನೀತಿಗಳು ಮತ್ತು ಅದರ ಫಲಿತಾಂಶಗಳನ್ನು ಒಳಗೊಂಡಿರುತ್ತದೆ.

ಆರ್ಥಿಕ ಸಮೀಕ್ಷೆ ಮಹತ್ವ ಏನು?
ಈ ದಾಖಲೆಯು ದೇಶದ ಆರ್ಥಿಕ ಸ್ಥಿತಿಯನ್ನು ಮಾತ್ರವಲ್ಲ, ಜತೆಗೆ ಹಣದ ಪೂರೈಕೆ, ಕೃಷಿ ಮತ್ತು ಕೈಗಾರಿಕೆ ಉತ್ಪಾದನೆ, ಮೂಲಸೌಕರ್ಯ, ಬೆಲೆಗಳು, ಉದ್ಯೋಗ, ರಫ್ತು, ಆಮದು, ವಿದೇಶಿ ವಿನಿಮಯ ನಿಧಿ ಮತ್ತು ಇತರ ಸಂಬಂಧಪಟ್ಟ ಆರ್ಥಿಕ ವಿಚಾರಗಳು, ಬಜೆಟ್ ಗೆ ಸಂಬಂಧಿಸಿದಂತೆ ಒಳಗೊಂಡಿರುತ್ತದೆ.

ಆರ್ಥಿಕ ಸಮೀಕ್ಷೆ 2021 ಬಹಳ ಮಹತ್ತರವಾದದ್ದು ಏಕೆಂದರೆ, ಕೊರೊನಾ ಬಿಕ್ಕಟ್ಟಿನ ಹೊಡೆತಕ್ಕೆ ಸಿಲುಕಿ, ಈಗಷ್ಟೇ ದೇಶ ಆಚೆ ಬಂದಿದೆ. ಸರ್ಕಾರವು ಮೊದಲ ಬಾರಿಗೆ ಮಂಡಿಸಿದ ಮುಂಗಡ ಅಂದಾಜಿನ ಪ್ರಕಾರ, ಆರ್ಥಿಕತೆಯು 7.7 ಪರ್ಸೆಂಟ್ ಕುಗ್ಗಬಹುದು. ಇನ್ನು ಸರ್ಕಾರವು 2019ರಲ್ಲಿ $ 5 ಟ್ರಿಲಿಯನ್ ಆರ್ಥಿಕತೆ ಆಗುವ ಬಗ್ಗೆ ಪ್ರಸ್ತಾವ ಮಾಡಿತ್ತು. ಅದನ್ನು ಸಾಧಿಸಲು ಯೋಜನೆಗಳನ್ನು ಮುಂದಿಡಬಹುದು.

English summary

Budget 2021: What Is Economic Survey And What Significance This Report Have?

What is economic survey and how important it is? Here is an explainer.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X