For Quick Alerts
ALLOW NOTIFICATIONS  
For Daily Alerts

ರುಪೇ ಡೆಬಿಟ್ ಕಾರ್ಡ್, ಯುಪಿಐ ಉತ್ತೇಜನಕ್ಕೆ ಅಸ್ತ್ರ: 2,600 ಕೋಟಿ ರೂ ಯೋಜನೆಗೆ ಅಸ್ತು

|

ಕೇಂದ್ರ ಸರ್ಕಾರವು ಡಿಜಿಟಲೀಕರಣಕ್ಕೆ ಹೆಚ್ಚಿನ ಒತ್ತನ್ನು ನೀಡುತ್ತಿದೆ. ಈ ಹಿಂದೆಯೋ ಡಿಜಿಟಲೀಕರಣಕ್ಕೆ ಒತ್ತು ನೀಡಿ ಹಲವಾರು ಯೋಜನೆಗಳನ್ನು ಜಾರಿ ಮಾಡಿರುವ ಕೇಂದ್ರ ಸರ್ಕಾರವು ಬುಧವಾರವೂ ಯೋಜನೆಗೆ ಅಸ್ತು ಎಂದಿದೆ. ಇದು ಸುಮಾರು 2,600 ಕೋಟಿ ರೂಪಾಯಿ ಯೋಜನೆಯಾಗಿದೆ.

ಹೌದು, ಬುಧವಾರ (ಜನವರಿ 11, 2023) ಕೇಂದ್ರ ಸಂಸತ್ತು ರುಪೇ ಡೆಬಿಟ್ ಕಾರ್ಡ್ ಮತ್ತು ಕಡಿಮೆ ಮೌಲ್ಯದ ಭಿಮಾ ಹಾಗೂ ಯುಪಿಐ ವಹಿವಾಟಿನ ಉತ್ತೇಜನಕ್ಕಾಗಿ ಸುಮಾರು 2,600 ಕೋಟಿ ರೂಪಾಯಿ ಯೋಜನೆಯನ್ನು ಅನುಮೋದಿಸಿದೆ. ಈ ಮೂಲಕ ಕೇಂದ್ರ ಸರ್ಕಾರವು ದೇಶದಲ್ಲಿ ಡಿಜಿಟಲೀಕರಣ ಇನ್ನಷ್ಟು ಬೆಳೆಯಲು ಹಾದಿ ಮಾಡಿಕೊಟ್ಟಿದೆ.

UPI Transactions in Dec 2022 : ಡಿಸೆಂಬರ್‌ನಲ್ಲಿ ದಾಖಲೆಯ 7.82 ಬಿಲಿಯನ್ ಯುಪಿಐ ವಹಿವಾಟು!UPI Transactions in Dec 2022 : ಡಿಸೆಂಬರ್‌ನಲ್ಲಿ ದಾಖಲೆಯ 7.82 ಬಿಲಿಯನ್ ಯುಪಿಐ ವಹಿವಾಟು!

ಈ ಯೋಜನೆಯಡಿಯಲ್ಲಿ ಬ್ಯಾಂಕುಗಳು ಪಿಒಎಸ್, ಯುಪೇ, ಯುಪಿಐ ಬಳಸಿ ಇ-ಕಾಮರ್ಸ್ ವಹಿವಾಟಿಗೆ ಅಧಿಕ ಆಧ್ಯತೆ ನೀಡಲು ಹಣಕಾಸು ಸಹಾಯವನ್ನು ಮಾಡಲಾಗುತ್ತದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಬಂಧಿತ ಸಂಸತ್ತು ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಈ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ಪ್ರಧಾನ ಮಂತ್ರಿ ಟ್ವೀಟ್‌ನಲ್ಲಿ ಏನಿದೆ?

ಪ್ರಧಾನ ಮಂತ್ರಿ ಟ್ವೀಟ್‌ನಲ್ಲಿ ಏನಿದೆ?

ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, "ಇಂದು ನಡೆದ ಸಭೆಯಲ್ಲಿ ರುಪೇ ಡೆಬಿಟ್ ಕಾರ್ಡ್ ಮತ್ತು ಭಿಮಾ-ಯುಪಿಐ ವಹಿವಾಟಿನ ಉತ್ತೇಜನಕ್ಕೆ ಸಂಬಂಧಿಸಿದಂತೆ ಸಂಸತ್ತು ತೆಗೆದುಕೊಂಡಿರುವ ನಿರ್ಧಾರವು ಭಾರತದಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಇನ್ನಷ್ಟು ಬಲಗೊಳಿಸಲು ಸಹಕಾರಿಯಾಗಲಿದೆ," ಎಂದು ಉಲ್ಲೇಖಿಸಿದ್ದಾರೆ. ಡಿಜಿಟಲ್ ಪಾವತಿ ವ್ಯವಸ್ಥೆಯ ಉತ್ತೇಜನಕ್ಕೆ ಸಹಾಯ ಮಾಡಲು ಈ ಯೋಜನೆಯು ಸಹಾಯ ಮಾಡಲಿದೆ. ಈ ಯೋಜನೆಯು ಯುಪಿಐ ಲೈಟ್ ಹಾಗೂ UPI123PAYಗೂ ಕೂಡಾ ಸಹಾಯ ಮಾಡಲಿದೆ. ಬಳಕೆದಾರರು ಡಿಜಿಟಲ್ ಪಾವತಿ ಹೆಚ್ಚು ಮಾಡಲು ಉತ್ತೇಜನ ನೀಡುವ ಉದ್ದೇಶದಿಂದ ಜಾರಿ ಮಾಡಲಾಗಿದೆ.

ದೇಶದಲ್ಲಿ ಯುಪಿಐ ಬಳಕೆ ಏರಿಕೆ

ದೇಶದಲ್ಲಿ ಯುಪಿಐ ಬಳಕೆ ಏರಿಕೆ

ದೇಶದಲ್ಲಿ ಯುಪಿಐ ವಹಿವಾಟು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಲೇ ಇದೆ. ಪ್ರತಿ ತಿಂಗಳು ಕೂಡಾ ಯುಪಿಐ ವಹಿವಾಟು ಹೆಚ್ಚಳವಾಗುತ್ತಿದೆ. ಇನ್ನು ವಹಿವಾಟಿನ ಮೊತ್ತವು ಕೂಡಾ ಅಧಿಕವಾಗುತ್ತಿದೆ. 2022ರ ಡಿಸೆಂಬರ್‌ನಲ್ಲಿ ಭಾರತದಲ್ಲಿ ದಾಖಲೆಯ 7.82 ಬಿಲಿಯನ್ ವಹಿವಾಟು ನಡೆದಿದೆ. ಅಂದರೆ ಸುಮಾರು 12.82 ಟ್ರಿಲಿಯನ್ ರೂಪಾಯಿ ವಹಿವಾಟು ನಡೆದಿದೆ. ನ್ಯಾಷನಲ್ ಪೇಮೆಂಟ್ಸ್ ಕಾಪೋರೇಟಿವ್ ಆಫ್ ಇಂಡಿಯಾ (ಎನ್‌ಪಿಸಿಐ) ಡೇಟಾವನ್ನು ಬಿಡುಗಡೆ ಮಾಡಿದೆ. ವಹಿವಾಟಿನ ಮೌಲ್ಯವು ಶೇಕಡ 7.73ರಷ್ಟು ಏರಿಕೆಯಾಗಿದೆ.

ಈ ಹಿಂದೆಯೋ ಯೋಜನೆಗಳ ಘೋಷಣೆ

ಈ ಹಿಂದೆಯೋ ಯೋಜನೆಗಳ ಘೋಷಣೆ

2021-22ರ ಬಜೆಟ್‌ನಲ್ಲಿ ಸರ್ಕಾರವು ಡಿಜಿಟಲ್ ವಹಿವಾಟು ಉತ್ತೇಜನಕ್ಕೆ ಯೋಜನೆಯನ್ನು ಜಾರಿ ಮಾಡಿದೆ. ಹಾಗೆಯೇ 2022-23ರಲ್ಲಿಯೂ ಡಿಜಿಟಲ್ ವಹಿವಾಟು ಉತ್ತೇಜನಕ್ಕೆ ಹಣಕಾಸು ಸಹಾಯವನ್ನು ಘೋಷಿಸಲಾಗಿದೆ. ವರ್ಷದಿಂದ ವರ್ಷಕ್ಕೆ ಡಿಜಿಟಲ್ ವಹಿವಾಟು ರಿಜಿಸ್ಟ್ರೇಷನ್ ಸುಮಾರು ಶೇಕಡ 59ರಷ್ಟು ಹೆಚ್ಚಳವಾಗಿದೆ. 2020-21ರ ಹಣಕಾಸು ವರ್ಷದಲ್ಲಿ 5,554 ಕೋಟಿ ಆಗಿದ್ದ ಡಿಜಿಟಲ್ ವಹಿವಾಟು ಹಣಕಾಸು ವರ್ಷ 2021-22ಕ್ಕೆ ಸುಮಾರು 8,840 ಕೋಟಿಗೆ ಏರಿಕೆಯಾಗಿದೆ. ಇನ್ನು ವರ್ಷದಿಂದ ವರ್ಷಕ್ಕೆ ಭಿಮಾ-ಯುಪಿಐ ವಹಿವಾಟು ಸುಮಾರು ಶೇಕಡ 106ರಷ್ಟು ಹೆಚ್ಚಳವಾಗಿದೆ. ಹಣಕಾಸು ವರ್ಷ 2020-21ರಲ್ಲಿ 2,233 ಕೋಟಿಯಷ್ಟಿದ್ದ ವಹಿವಾಟು ಹಣಕಾಸು ವರ್ಷ 2021-22ರ ವೇಳೆಗೆ 4,597 ಕೋಟಿಗೆ ಏರಿಕೆಯಾಗಿದೆ.

English summary

Cabinet Clears Rs. 2,600 Crore Scheme To Promote RuPay Debit Card, BHIM-UPI

The Cabinet on January 11, 2023 approved a ₹ 2,600 crore scheme for promoting RuPay debit cards and low-value BHIM-UPI transactions.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X