For Quick Alerts
ALLOW NOTIFICATIONS  
For Daily Alerts

ಕ್ಯಾಡ್ಬರಿ ಕಂಪನಿ ವಿರುದ್ಧ ಭ್ರಷ್ಟಾಚಾರ ಆರೋಪ: ಕೇಸ್‌ ದಾಖಲಿಸಿದ ಸಿಬಿಐ

|

ಕ್ಯಾಡ್ಬರಿ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ ಕಂಪನಿ ವಿರುದ್ಧ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ಭ್ರಷ್ಟಾಚಾರ ಆರೋಪದಡಿಯಲ್ಲಿ ಕೇಸ್‌ ದಾಖಲಿಸಿದೆ.

ಪ್ರಸ್ತುತ ಮಾಂಡೆಲೆಜ್ ಫುಡ್ಸ್ ಪ್ರೈವೇಟ್ ಲಿಮಿಟೆಡ್ ಎಂದು ಕರೆಯಲ್ಪಡುವ ಕ್ಯಾಡ್ಬರಿ ಕಂಪನಿಯು ಹಿಮಾಚಲ ಪ್ರದೇಶದ ಬಡ್ಡಿ ಯಲ್ಲಿ ತೆರಿಗೆ ಪ್ರಯೋಜನಗಳನ್ನು ಪಡೆಯಲು ಸುಳ್ಳು ಮಾಹಿತಿಗಳನ್ನು ನೀಡಿರುವುದಾಗಿ ಸಿಬಿಐ ಆರೋಪಿಸಿದೆ.

ಹರಿಯಾಣ ಮತ್ತು ಹಿಮಾಚಲ ಪ್ರದೇಶದ ಐದು ಸ್ಥಳಗಳಲ್ಲಿ ಕಂಪನಿಯ ಆವರಣದಲ್ಲಿ ಏಜೆನ್ಸಿ ಇಂದು ಶೋಧ ನಡೆಸಿದ್ದು, ದೋಷಾರೋಪಣೆ ವಸ್ತುಗಳನ್ನು ವಶಪಡಿಸಿಕೊಂಡಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಕ್ಯಾಡ್ಬರಿ ಕಂಪನಿ ವಿರುದ್ಧ ಭ್ರಷ್ಟಾಚಾರ ಆರೋಪ: ಕೇಸ್‌ ದಾಖಲಿಸಿದ CBI

ಕ್ಯಾಡ್ಬರಿ ಇಂಡಿಯಾ, ಕೇಂದ್ರ ಅಬಕಾರಿ ಅಧಿಕಾರಿಗಳೊಂದಿಗೆ ಪಿತೂರಿ ನಡೆಸಿ, ಹಿಮಾಚಲ ಪ್ರದೇಶದಲ್ಲಿ 5 ಸ್ಟಾರ್ ಮತ್ತು ಜೆಮ್ಸ್ ತಯಾರಿಸುವ ಘಟಕಕ್ಕೆ 241 ಕೋಟಿ ರೂಪಾಯಿ ಮೊತ್ತದ ಅಬಕಾರಿ ಪ್ರಯೋಜನಗಳನ್ನು ಪಡೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಜೊತೆಗೆ 2019 ಮತ್ತು 2021ರ ನಡುವೆ ಈ ಅಕ್ರಮಗಳು ನಡೆದಿವೆ ಎಂಬುದು ತಿಳಿದುಬಂದಿದೆ.

ಪ್ರಾಥಮಿಕ ವಿಚಾರಣೆಯ ನಂತರ ಮೊದಲ ಮಾಹಿತಿ ವರದಿಯನ್ನು ಸಲ್ಲಿಸಲಾಗಿದ್ದು, ಹಿಮಾಚಲ ಪ್ರದೇಶದ ಬಡ್ಡಿ ಯಲ್ಲಿ ತೆರಿಗೆ ವಿನಾಯಿತಿ ಪ್ರಯೋಜನಗಳನ್ನು ಪಡೆಯಲು ಕಂಪನಿಯು ಲಂಚವನ್ನು ನೀಡಿದೆ. ಜೊತೆಗೆ ದಾಖಲೆಗಳನ್ನು ತಪ್ಪಾಗಿ ನಿರೂಪಿಸಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಸಂಸ್ಥೆ ಹೇಳಿದೆ.

ಇನ್ನು ಹೆಚ್ಚುವರಿ 10 ವರ್ಷಗಳ ಕಾಲ ಅಬಕಾರಿ ಸುಂಕ ಮತ್ತು ತೆರಿಗೆ ವಿನಾಯಿತಿ ಪ್ರಯೋಜನಗಳನ್ನು ಪಡೆಯಲು 2007 ರಲ್ಲಿ ಕಂಪನಿಯು ಬಡ್ಡಿಯಲ್ಲಿ ಒಂದು ಘಟಕವನ್ನು ರಚಿಸಲು ಪ್ರಸ್ತಾಪಿಸಿತ್ತು ಎಂದು ಸಿಬಿಐ ಹೇಳಿದೆ.

English summary

Cadbury India Accused Of Corruption And Fraud: CBI Files Case

Cadbury India Private Limited (now known as Mondelez Foods Private Limited) has been accused of corruption by the CBI, which has filed a case against the company.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X