For Quick Alerts
ALLOW NOTIFICATIONS  
For Daily Alerts

ಇಂಧನ ದರ ಇನ್ನಷ್ಟು ಕಡಿತ ಮಾಡುವುದು ಹೇಗೆ?: ನಿತಿನ್‌ ಗಡ್ಕರಿ ಉಪಾಯ

|

ತಮ್ಮ ವಿನೂತನ ಐಡಿಯಾಗಳನ್ನು ನೀಡುವ ಮೂಲಕವೇ ಹೆಚ್ಚು ಸುದ್ದಿಯಾಗುವ ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಈಗ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯನ್ನು ಇನ್ನಷ್ಟು ಇಳಿಸಲು ಹೊಸ ಉಪಾಯವನ್ನು ಮಾಡಿದ್ದಾರೆ. ಪೆಟ್ರೋಲ್‌ ಹಾಗೂ ಡೀಸೆಲ್‌ ಅನ್ನು ಜಿಎಸ್‌ಟಿ ಅಡಿಯಲ್ಲಿ ತಂದರೆ ಬೆಲೆಯನ್ನು ಇಳಿಕೆ ಮಾಡಲು ಸಾಧ್ಯ. ಇತರ ಇಂಧನಗಳಿಗಿಂತ ವಾಹನಗಳಲ್ಲಿ ಎಥೆನಾಲ್‌ ಬಳಕೆ ಮಾಡುವುದು ಉತ್ತಮ ಆಯ್ಕೆ ಎಂದು ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ.

 

ಮಹಾರಾಷ್ಟ್ರ ರಾಜ್ಯ ಸಹಕಾರ ಬ್ಯಾಂಕ್‌ನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಗಡ್ಕರಿ, ಮುಂದಿನ ದಿನಗಳಲ್ಲಿ ಫ್ಲೆಕ್ಸ್‌ ಇಂಧನ ಇಂಜಿನ್‌ಗಳನ್ನು ಕಡ್ಡಾಯ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಇಂಧನ ದರ ಇನ್ನಷ್ಟು ಏರಿಕೆ ತಡೆಯುವುದು ಹೇಗೆ ಎಂಬ ಬಗ್ಗೆ ಮಾತನಾಡುತ್ತಾ, ಪೆಟ್ರೋಲ್‌ ಹಾಗೂ ಎಥೆನಾಲ್‌ ಕ್ಯಾಲೋರಿಫೀಕ್‌ ಮೌಲ್ಯವನ್ನು ಸಮೀಕರಣ ಮಾಡುವ ರಷ್ಯಾದ ತಂತ್ರಜ್ಞಾನದ ಉಲ್ಲೇಖವನ್ನು ಮಾಡಿದ್ದಾರೆ. ಹಾಗೆಯೇ ಕೆಲವು ರಾಜ್ಯಗಳು ಪೆಟ್ರೋಲ್‌ ಹಾಗೂ ಡೀಸೆಲ್‌ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವುದಕ್ಕೆ ಆಕ್ಷೇಪ ಮಾಡುತ್ತದೆ. ಜಿಎಸ್‌ಟಿ ಅಡಿಯಲ್ಲಿ ಕೇಂದ್ರ ಹಾಗೂ ರಾಜ್ಯ ಎರಡೂ ಸರ್ಕಾರಗಳಿಗೂ ಆದಾಯ ಬರಲಿದೆ ಎಂದಿದ್ದಾರೆ.

GST ಅಡಿಯಲ್ಲಿ ಬಂದಿತೇ ಪೆಟ್ರೋಲ್ ಮತ್ತು ಡೀಸೆಲ್ ?

ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯು ನಿರಂತರವಾಗಿ ಏರಿಕೆ ಆಗುತ್ತಲೇ ಸಾಗಿತ್ತು. ಕೊರೊನಾ ಲಾಕ್‌ಡೌನ್‌ ಸಡಿಲಿಕೆ ಬಳಿಕ ಜನರು ಕೊಂಚ ಸುಧಾರಿಸುತ್ತಿರುವಾಗ ಈ ಪೆಟ್ರೋಲ್ ಹಾಗೂ ಡೀಸೆಲೆ ಬೆಲೆ ಏರಿಕೆಯು ಜನರ ಜೇಬಿಗೆ ಕತ್ತರಿಯನ್ನು ಹಾಕಿದ್ದಂತೆ ಆಗಿತ್ತು. ಈ ವಿಚಾರದಲ್ಲಿ ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿದ್ದವು. ಇತ್ತೀಚೆಗೆ ಕೇಂದ್ರ ಸರ್ಕಾರವು ಪೆಟ್ರೋಲ್‌ ಹಾಗೂ ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು ಇಳಿಕೆ ಮಾಡಿದೆ. ಈ ಬಳಿಕ ಹಲವು ರಾಜ್ಯ ಸರ್ಕಾರಗಳು ಕೂಡಾ ಸೆಸ್‌, ವ್ಯಾಟ್‌ ಇಳಿಕೆ ಮಾಡಿದೆ. ಈ ಎಲ್ಲಾ ಬೆಳವಣಿಗೆಯ ಬೆನ್ನಲ್ಲೇ ಇಂಧನ ದರ ಇನ್ನಷ್ಟು ಏರಿಕೆ ತಡೆಯುವುದು ಹೇಗೆ ಎಂಬ ಬಗ್ಗೆ ಉಪಾಯವನ್ನು ನೀಡಿದ್ದಾರೆ.

 ಏನಿದು ಫ್ಲೆಕ್ಸ್‌ ಇಂಧನ?

ಏನಿದು ಫ್ಲೆಕ್ಸ್‌ ಇಂಧನ?

ಗ್ಯಾಸೋಲಿನ್, ಮೆಥನಾಲ್ ಅಥವಾ ಎಥೆನಾಲ್ ಸಂಯೋಜನೆಯಿಂದ ಮಾಡಿದ ಪರ್ಯಾಯ ಇಂಧನವೇ ಫ್ಲೆಕ್ಸ್‌ ಇಂಧನ ಆಗಿದೆ. ಇದು ನಡೆದರೆ ಎಲ್ಲಾ ಪೆಟ್ರೋಲ್‌ ಪಂಪ್‌ಗಳನ್ನು ಎಥೆನಾಲ್‌ ಪಂಪ್‌ಗಳಾಗಿ ಬದಲಾವಣೆ ಮಾಡಬಹುದು ಎಂದು ಕೂಡಾ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ಶೇಕಡ ನೂರರಷ್ಟು ಎಥೆನಾಲ್‌ ಮೂಲಕವೇ ಚಲಿಸುವ ಆಟೋ ರಿಕ್ಷಾಗಳ ಬಳಕೆಗೆ ಅನುಮತಿ ನೀಡಿ ಎಂದು ಮಹಾರಾಷ್ಟ್ರ ಸರ್ಕಾರದ ಬಳಿಕ ವಿನಂತಿಸಿದ್ದಾರೆ.

 ಪೆಟ್ರೋಲ್‌ ಬಳಕೆ ಮಾಡುವುದು ಬೇಡ!

ಪೆಟ್ರೋಲ್‌ ಬಳಕೆ ಮಾಡುವುದು ಬೇಡ!

ಇನ್ನು ಈ ವೇಳೆಯೇ ಕೇಂದ್ರ ಸಚಿವರು ಪೆಟ್ರೋಲ್‌ ಬಳಕೆ ಮಾಡಬೇಡಿ ಎಂದು ಹೇಳಿದ್ದಾರೆ. "ನೀವು ಪೆಟ್ರೋಲ್‌ ಬಳಕೆಯನ್ನು ಮಾಡಬೇಡಿ. ಇದು ಅಧಿಕ ಮಾಲಿನ್ಯ ಉಂಟು ಮಾಡುತ್ತದೆ. ನೀವು ಇಂಧನ ಬೆಲೆ ಏರುತ್ತಿದೆ ಎಂದು ಪ್ರತಿಭಟನೆ ಮಾಡಬೇಕಾಗಿಲ್ಲ. ಎಥೆನಾಲ್‌ ಬೆಲೆಯು 62 ರೂಪಾಯಿ ಆಗಿದೆ. ಇದು ಕಡಿಮೆ ವೆಚ್ಚವಾಗಿದೆ. ಹಾಗೆಯೇ ಇದರಿಂದ ಮಾಲಿನ್ಯ ಉಂಟಾಗುವುದಿಲ್ಲ," ಎಂದು ಕೂಡಾ ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ. ಈ ಸಂದರ್ಭದಲ್ಲೇ, ಹಸಿರು ತಂತ್ರಜ್ಞಾನದ ಅವಶ್ಯಕತೆಯನ್ನು ತಿಳಿಸಿದ ಸಚಿವರು ದೆಹಲಿಯಲ್ಲಿ ಹೈಡ್ರೋಜನ್‌ ಕಾಡು ಬಳಕೆ ಮಾಡಲಾಗುತ್ತಿದೆ ಎಂದರು.

 ಕೆಲವು ಸಂಸ್ಥೆಗಳು ಈಗಾಗಲೇ ಸಜ್ಜಾಗಿದೆ ಎಂದ ಸಚಿವರು
 

ಕೆಲವು ಸಂಸ್ಥೆಗಳು ಈಗಾಗಲೇ ಸಜ್ಜಾಗಿದೆ ಎಂದ ಸಚಿವರು

ಇನ್ನು ಇತ್ತೀಚೆಗೆ ಕೇಂದ್ರ ಸಚಿವ ನಿತಿನ್‌ ಗಡ್ಕರಿ ವಾಹನ ತಯಾರಕ ಕಿರ್ಲೋಸ್ಕರ್ ಮತ್ತು ಟೊಯೊಟಾದ ಪ್ರತಿನಿಧಿಗಳೊಂದಿಗೆ ಸಭೆಯನ್ನು ನಡೆಸಿದ್ದಾರೆ. ಈ ಬಗ್ಗೆ ಉಲ್ಲೇಖವನ್ನು ಮಾಡಿದ ಸಚಿವರು, "ಈ ಸಂಸ್ಥೆಗಳು ಫ್ಲೆಕ್ಸ್ ಇಂಜಿನ್‌ಗಳೊಂದಿಗೆ ಕಾರುಗಳನ್ನು ವಿನ್ಯಾಸ ಮಾಡಿದ್ದಾರೆ. ಶೇಕಡ 100 ರಷ್ಟು ಪೆಟ್ರೋಲ್‌ ಅಥವಾ ಎಥೆನಾಲ್‌ ಬಳಸಬಹುದಾದ ಇಂಜಿನ್‌ಗಳನ್ನು ಫ್ಲೆಕ್ಸ್‌ ಇಂಜಿನ್‌ ಎನ್ನಲಾಗುತ್ತದೆ. ಫ್ಲೆಕ್ಸ್‌ ಇಂಜಿನ್‌ ಅನ್ನು ನಾವು ಕಡ್ಡಾಯ ಮಾಡಿದರೆ, ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ ಏರಿಕೆಯ ನಡುವೆ ಜನರಿಗೆ ಮುಕ್ತಿ ದೊರೆತಂತೆ ಆಗುತ್ತದೆ," ಎಂದು ಅಭಿಪ್ರಾಯಿಸಿದರು.

 ದೇಶದ ಪ್ರಮುಖ ನಗರಗಳಲ್ಲಿ ಹೀಗಿದೆ ಪೆಟ್ರೋಲ್‌, ಡೀಸೆಲ್‌ ಬೆಲೆ

ದೇಶದ ಪ್ರಮುಖ ನಗರಗಳಲ್ಲಿ ಹೀಗಿದೆ ಪೆಟ್ರೋಲ್‌, ಡೀಸೆಲ್‌ ಬೆಲೆ

ಕೇಂದ್ರ ಸರ್ಕಾರ ಹಾಗೂ ಕೆಲವು ರಾಜ್ಯ ಸರ್ಕಾರಗಳು ಪೆಟ್ರೋಲ್‌ ಹಾಗೂ ಡೀಸೆಲ್‌ ಮೇಲಿನ ಅಬಕಾರಿ ಸುಂಕ, ಸೆಸ್‌, ವ್ಯಾಟ್‌ ಅನ್ನು ಇಳಿಕೆ ಮಾಡಿದ ಬಳಿಕ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯು ಇಳಿಕೆ ಕಂಡಿದೆ. ನವದೆಹಲಿಯಲ್ಲಿ ಪೆಟ್ರೋಲ್‌ಗೆ 103.97 ರೂಪಾಯಿ ಆಗಿದ್ದು, ಮುಂಬೈನಲ್ಲಿ 109.98 ರೂಪಾಯಿ ಆಗಿದೆ. ಬೆಂಗಳೂರಿನಲ್ಲಿ100.58 ರೂಪಾಯಿ ಆಗಿದ್ದು, ಲಕ್ನೋದಲ್ಲಿ 95.28 ರೂಪಾಯಿ ಆಗಿದೆ. ಇನ್ನು ನವದೆಹಲಿಯಲ್ಲಿ ಡೀಸೆಲ್‌ಗೆ 86.67 ರೂಪಾಯಿ ಆಗಿದ್ದು, ಮುಂಬೈನಲ್ಲಿ 94.14 ರೂಪಾಯಿ ಆಗಿದೆ. ಬೆಂಗಳೂರಿನಲ್ಲಿ 85.01 ರೂಪಾಯಿ ಆಗಿದ್ದು, ಲಕ್ನೋದಲ್ಲಿ 86.80 ರೂಪಾಯಿ ಆಗಿದೆ. ನಿಮ್ಮ ನಗರದ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯನ್ನು ತಿಳಿಯಲು ಇಲ್ಲಿ ಕ್ಲಿಕ್‌ ಮಾಡಿ.

English summary

Can petrol, diesel prices fall further soon?, Nitin Gadkari Suggests This Idea

Can petrol, diesel prices fall further soon?, Nitin Gadkari Suggests This Idea.
Story first published: Friday, November 12, 2021, 11:51 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X