For Quick Alerts
ALLOW NOTIFICATIONS  
For Daily Alerts

Demonetisationಗೆ 3 ವರ್ಷ : ಈಗಲೂ CASH ಬಾದ್ ಷಾ

|

ನರೇಂದ್ರ ಮೋದಿ ಸರ್ಕಾರ ನೋಟು ಅಮಾನ್ಯ ಘೋಷಿಸಿ ನವೆಂಬರ್ 8ಕ್ಕೆ (ಶುಕ್ರವಾರ) ಮೂರು ವರ್ಷವಾಗಿದೆ. ಇಷ್ಟಾದರೂ ನಗದು ಪಾವತಿಯೇ ರಿಯಲ್ ಎಸ್ಟೇಟ್‌ ವ್ಯವಹಾರಗಳಲ್ಲಿ ಪ್ರಾಬಲ್ಯ ಮುಂದುವರಿಸಿದೆ ಎಂದು ಸಮುದಾಯ ವೇದಿಕೆ Localcircles ತನ್ನ ಸಮೀಕ್ಷೆಯಲ್ಲಿ ತಿಳಿಸಿದೆ. ಈ ಕುರಿತು ಲೇಖನ ಇಲ್ಲಿದೆ.

ಕೇಂದ್ರ ಸರ್ಕಾರ ಅಪನಗದೀಕರಣ ಘೋಷಣೆ ಮಾಡಿ ನವೆಂಬರ್‌ 8ಕ್ಕೆ ಮೂರು ವರ್ಷ ಪೂರ್ತಿಯಾಗಿದೆ. 2016 ನವೆಂಬರ್ 8ರಂದು ದೂರದರ್ಶನದ ಮೂಲಕ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಇಂದು ಮಧ್ಯರಾತ್ರಿಯಿಂದಲೇ 500 ರು. ಮತ್ತು 1000 ರು. ಮುಖಬೆಲೆ ನೋಟುಗಳು ಅಮಾನ್ಯೀಕರಣವಾಗಲಿದೆ ಎಂದು ಘೋಷಿಸಿದ್ರು.

ಯಾವ ಉಳಿತಾಯ ಸೇಫ್ ಮತ್ತು ಬೆಸ್ಟ್? ಇಲ್ಲಿವೆ 6 ಆಯ್ಕೆಗಳುಯಾವ ಉಳಿತಾಯ ಸೇಫ್ ಮತ್ತು ಬೆಸ್ಟ್? ಇಲ್ಲಿವೆ 6 ಆಯ್ಕೆಗಳು

ಮೇರೆ ಪ್ಯಾರ್ ದೇಶ್ ವಾಸಿಯೋ.. ಎಂದು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದ ಅಂದಿನ ಆ ಘೋಷಣೆ ಭಾರತದ ಆರ್ಥಿಕತೆಯಲ್ಲಿ ಸಂಚಲವನ್ನೇ ಸೃಷ್ಟಿಸಿತು ಎಂದರೆ ತಪ್ಪಾಗಲಾರದು. ಸರ್ಕಾರದ ಈ ದಿಢೀರ್ ಕ್ರಮಕ್ಕೆ ಸಾರ್ವಜನಿಕರು ಗೊಂದಲಕ್ಕೆ ಸಿಲುಕಿದ್ದರು. ಗುಪ್ತವಾಗಿ ಹಣವನ್ನ ಕೂಡಿಟ್ಟಿದ್ದ ಕಾಳಧನಿಕರು ಚಿಂತಾಕ್ರಾಂತರಾಗಿದ್ದರು.

ಆರಂಭದಲ್ಲಿ ಜನರು ಇದನ್ನು ಸ್ವಾಗತಿಸಿದರು. ಎಟಿಎಂಗಳಲ್ಲಿ ಹಣಕ್ಕಾಗಿ ಸರತಿ ಸಾಲಿನಲ್ಲಿ ನಿಂತರು. ಬ್ಯಾಂಕ್‌ಗಳಲ್ಲಿ ಡೆಪಾಸಿಟ್ ಮಾಡಲು ಜನರು ಸಾಲುಗಟ್ಟಿದರು. ಕಪ್ಪುಹಣದ ವಿರುದ್ಧ ಇದು ನಿರ್ಣಾಯಕ ಸಮರ ಎಂಬ ಕಾರಣಕ್ಕೆ ಪ್ರಧಾನಿಗೆ ಬೆಂಬಲವಾಗಿದ್ದರು.

ಜೊತೆಗೆ 500 ರು. 1000 ರು. ಮುಖಬೆಲೆಯ ನೋಟುಗಳು ರದ್ದಿ ಪೇಪರ್ ಆಗಲಿವೆ ಎಂಬುದು ಕಾಳಧನಿಕರಿಗೆ ನಡುಕವನ್ನೇ ಸೃಷ್ಟಿಸಿತ್ತು. ಮತ್ತೊಂದೆಡೆ ಅಪನಗದೀಕರಣ ದೇಶದ ಆರ್ಥಿಕ ಕುಂಠಿತಕ್ಕೂ ಕಾರಣವಾಯಿತು ಎಂಬ ಆರೋಪ ಕೂಡ ವ್ಯಕ್ತವಾಗಿತ್ತು.

ಅಪನಗದೀಕರಣ ಮಾಡಲು ಕಾರಣ

ಅಪನಗದೀಕರಣ ಮಾಡಲು ಕಾರಣ

ದೇಶದಲ್ಲಿನ ಕಪ್ಪು ಹಣ ನಿಗ್ರಹ, ಭಯೋತ್ಪಾದನೆಗೆ ಹಣ ಪೂರೈಕೆ ಸ್ಥಗಿತ, ನಕಲಿ ನೋಟುಗಳ ಕಳ್ಳಸಾಗಣೆ ಸ್ಥಗಿತ, ಡಿಜಿಟಲ್ ವ್ಯವಹಾರಕ್ಕೆ ಉತ್ತೇಜನ ಸೇರಿದಂತೆ ಇನ್ನಿತರ ಮಹತ್ವದ ಉದ್ದೇಶವನ್ನಿಟ್ಟುಕೊಂಡು,ಕೇಂದ್ರ ಸರ್ಕಾರ 500 ರು. ಮತ್ತು 1000 ರು. ಮುಖಬೆಲೆಯ ನೋಟುಗಳನ್ನು 2016ರಲ್ಲಿ ರದ್ದು ಮಾಡಿತು.

ಡಿಜಿಟಲ್ ವ್ಯವಹಾರದಲ್ಲಿ ಕ್ರಾಂತಿ

ಡಿಜಿಟಲ್ ವ್ಯವಹಾರದಲ್ಲಿ ಕ್ರಾಂತಿ

ಅಪನಗಧೀಕರಣ ದೇಶದ ಡಿಜಿಟಲ್ ವ್ಯವಹಾರದಲ್ಲಿ ದೊಡ್ಡ ಕ್ರಾಂತಿಯೇ ಸೃಷ್ಟಿಯಾಗಲು ಕಾರಣವಾಯ್ತು ಎಂದರೆ ತಪ್ಪಾಗಲಾರದು. ಅಪನಗಧೀಕರಣ ಮೂಲ ಉದ್ದೇಶಗಳಲ್ಲಿ ಒಂದಾಗಿದ್ದ ಡಿಜಿಟಲ್ ವ್ಯವಹಾರವೂ 2016ಕ್ಕೂ ಹಿಂದಿದ್ದ ಬೆಳವಣಿಗೆಗಿಂತಲೂ ದುಪ್ಪಟ್ಟಾಗಿ ಬೆಳೆದು ನಿಂತಿದೆ. ಪೇಟಿಎಂ, ಗೂಗಲ್ ಪೇ, ಫೋನ್ ಪೇ ಸೇರಿದಂತೆ ಇಂಟರ್ನೆಟ್ ಬ್ಯಾಂಕಿಂಗ್ ಬಳಕೆದಾರರ ಪ್ರಮಾಣ ಹೆಚ್ಚಾಗಿದೆ.

3 ವರ್ಷ ಕಳೆದರೂ ಈಗಲೂ ಕ್ಯಾಶ್ ಕಿಂಗ್

3 ವರ್ಷ ಕಳೆದರೂ ಈಗಲೂ ಕ್ಯಾಶ್ ಕಿಂಗ್

ನೋಟು ಅಮಾನ್ಯ ಘೋಷಿಸಿ ಡಿಜಿಟಲ್ ವ್ಯವಹಾರಕ್ಕೆ ಹೆಚ್ಚು ಪ್ರೋತ್ಸಾಹಿಸಿದ ಪರಿಣಾಮ ವರ್ಷದಿಂದ ವರ್ಷಕ್ಕೆ ಬಳಕೆದಾರರ ಪ್ರಮಾಣ ಹೆಚ್ಚಾಗುತ್ತ ಸಾಗಿದೆ. ಆದರೆ Localcircles ವರದಿಯ ಪ್ರಕಾರ ಅಪನಗದೀಕರಣಕ್ಕೆ 3 ವರ್ಷ ಕಳೆದರೂ ಡಿಜಿಟಲ್ ವ್ಯವಹಾರಕ್ಕಿಂತಲೂ ಹೆಚ್ಚಾಗಿ ಹಣದ ಪಾವತಿಯನ್ನು ಹೆಚ್ಚು ಜನರು ಅವಲಂಭಿಸಿದ್ದಾರೆ. ಅಲ್ಲದೆ ಅಪನಗದೀಕರಣ ಹೊರತಾಗಿಯೂ ಕಪ್ಪು ಹಣವೇ ರಿಯಲ್‌ ಎಸ್ಟೇಟ್ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸುತ್ತಿದೆ ಎಂದು ಸಮೀಕ್ಷೆಯು ವರದಿ ಮಾಡಿದೆ.

ರಿಯಲ್‌ ಎಸ್ಟೇಟ್‌ ವ್ಯವಹಾರದಲ್ಲಿ ಶೇ. 66ರಷ್ಟು ಬಳಕೆ

ರಿಯಲ್‌ ಎಸ್ಟೇಟ್‌ ವ್ಯವಹಾರದಲ್ಲಿ ಶೇ. 66ರಷ್ಟು ಬಳಕೆ

ಕಳೆದ ಒಂದು ವರ್ಷದಲ್ಲಿ ಆಸ್ತಿ ಖರೀದಿಸಿದವರಲ್ಲಿ ಶೇಕಡಾ 33ರಷ್ಟು ಜನರು ಹಣದ ಬದಲು ಚೆಕ್ ಅಥವಾ ಎಲೆಕ್ಟ್ರಾನಿಕ್ ಪಾವತಿ ಮೂಲಕ ವ್ಯವಹಾರ ಮಾಡಿದ್ದಾರೆ. ಆದರೆ ಉಳಿದ ಎಲ್ಲಾ ಶೇಕಡಾ 66ರಷ್ಟು ಜನರು ಕಳೆದ ಒಂದು ವರ್ಷದಲ್ಲಿ ಆಸ್ತಿಯನ್ನು ಖರೀದಿಸುವಾಗ ಸ್ವಲ್ಪ ಪ್ರಮಾಣದ ಹಣವನ್ನು ಬಳಸಿದ್ದಾರೆಂದು Localcircles ಸಮೀಕ್ಷೆಯಲ್ಲಿ ತಿಳಿಸಿದೆ. ಜೊತೆಗೆ ಮೂರನೇ ಎರಡು ಭಾಗದಷ್ಟು ರಿಯಲ್ ಎಸ್ಟೇಟ್‌ ವ್ಯವಹಾರಗಳಲ್ಲಿ ಶೇಕಡಾ 10 ರಿಂದ 50ರವರೆಗೆ ಹಣದ ವಹಿವಾಟು ನಡೆದಿದೆ ಎಂದು ಹೇಳಿದೆ.

ಬಹುಪಾಲು ಜನರು ನಗದು ರೂಪದಲ್ಲೇ ಖರೀದಿ

ಬಹುಪಾಲು ಜನರು ನಗದು ರೂಪದಲ್ಲೇ ಖರೀದಿ

ಭಾರತದಲ್ಲಿ ಬಹುಪಾಲು ಜನರು ಈಗಲೂ ತಮ್ಮ ವಾರ್ಷಿಕ ಖರೀದಿಯಲ್ಲಿ ಗಣನೀಯವಾಗಿ ನಗದು ರೂಪದಲ್ಲೇ ಮುಂದುವರಿಸಿದ್ದಾರೆ ಎಂದು ಸಮೀಕ್ಷೆ ಹೇಳಿದೆ. ಸುಮಾರು ಶೇ. 40ರಷ್ಟು ಜನರು ತಮ್ಮ ಒಟ್ಟು ಖರೀದಿಯಲ್ಲಿ ಶೇಕಡಾ 5ರಿಂದ 25ರಷ್ಟು ನಗದು ವ್ಯವಹಾರ ಎಂದು ಹೇಳಿದ್ದಾರೆ. ಶೇಕಡಾ 29ರಷ್ಟು ಜನರು ತಮ್ಮ ಖರೀದಿಯಲ್ಲಿ ಶೇಕಡಾ 25 ರಿಂದ 50ರಷ್ಟು ನಗದು ಎಂದು ಹೇಳಿದ್ದಾರೆ. ಮತ್ತು ಶೇಕಡಾ 27ರಷ್ಟು ಜನರು ಪ್ರತಿ ವಸ್ತುವನ್ನು ಖರೀದಿಸಿದಾಗ ಹಣವನ್ನು ಪಾವತಿಸಿದ್ದಾರೆ ಎಂದು ವರದಿಯಾಗಿದೆ. ಕಳೆದೊಂದು ವರ್ಷದಲ್ಲಿ ಇದರ ಪ್ರಮಾಣ ಮತ್ತಷ್ಟು ಹೆಚ್ಚಾಗಿದ್ದು ಜನರು ನಗದು ವ್ಯವಹಾರಕ್ಕೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ ಎಂದು Localcircles ಸಮೀಕ್ಷೆಯಲ್ಲಿ ತಿಳಿಸಿದೆ.

English summary

Cash Is Still King In Real Estate Transactions After 3 Years Of Demonetisation

After 3 years of Demonetisation Cash is king in 66 percent of real estate transactions :Localcircles survey
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X