ಬೆಸ್ಟ್ ಫುಡ್ ಲಿ. ವಿರುದ್ಧ 1006 ಕೋಟಿ ರು. ವಂಚನೆ ಪ್ರಕರಣ ದಾಖಲಿಸಿದ ಸಿಬಿಐ

ಪ್ರೀಮಿಯಂ ಬಾಸ್ಮತಿ ಅಕ್ಕಿಯ ಅತಿ ದೊಡ್ಡ ಸಂಸ್ಕರಣಾ ಘಟಕವಾದ ಬೆಸ್ಟ್ ಫುಡ್ಸ್ ಲಿಮಿಟೆಡ್ ಮೇಲೆ ಮಂಗಳವಾರ ಸಿಬಿಐ ದಾಳಿ ನಡೆಸಿದೆ. ಇದು ದೇಶದಲ್ಲೇ ಅತಿ ದೊಡ್ಡ ಸಂಸ್ಕರಣಾ ಘಟಕಗಳ ಪೈಕಿ ಒಂದಾಗಿದೆ. ಬೆಸ್ಟ್ ಫುಡ್ಸ್ ಲಿಮಿಟೆಡ್ ನ ಅಧ್ಯಕ್ಷರು ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಮೇಲೆ ಸಾವಿರ ಕೋಟಿಗೂ ಹೆಚ್ಚಿನ ಬ್ಯಾಂಕ್ ವಂಚನೆಯ ಆರೋಪ ಇದ್ದು, ಅವರ ಮನೆಗಳ ಮೇಲೂ ದಾಳಿ ನಡೆದಿದೆ.

ಸ್ಟೇಟ್ ಬ್ಯಾಂಕ್ ಇಂಡಿಯಾ ನೇತೃತ್ವದ ಬ್ಯಾಂಕ್ ಒಕ್ಕೂಟವು ಈ ಸಾಲವನ್ನು ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಳಗ್ಗೆ ಶೋಧ ಕಾರ್ಯಾಚರಣೆ ನಾಲ್ಕು ಸ್ಥಳಗಳಲ್ಲಿ ಆರಂಭವಾಯಿತು. ಚಂಡೀಗಢ ಹಾಗೂ ದೆಹಲಿಯಲ್ಲಿನ ಕಂಪೆನಿ ಕಚೇರಿಗಳು, ಅಧ್ಯಕ್ಷ ಮೊಹಿಂದರ್ ಪಾಲ್ ಜಿಂದಾಲ್ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ದಿನೇಶ್ ಗುಪ್ತಾ ಅವರ ಕರ್ನಲ್ ನಲ್ಲಿನ ಮನೆಗಳಲ್ಲಿ ಶೋಧ ನಡೆಯಿತು.

ವಂಚನೆ, ಕ್ರಿಮಿನಲ್ ದುರುಪಯೋಗ, ಕ್ರಿಮಿನಲ್ ಪಿತೂರಿ, ಕ್ರಿಮಿನಲ್ ದುರ್ನಡತೆ, ಫೋರ್ಜರಿ ಹೀಗೆ ವಿವಿಧ ಐಪಿಸಿ ಸೆಕ್ಷನ್ ಗಳ ಅಡಿಯಲ್ಲಿ ಬೆಸ್ಟ್ ಫುಡ್ಸ್ ಲಿಮಿಟೆಡ್ ವಿರುದ್ಧ ಸಿಬಿಐ ಪ್ರಕರಣಗಳನ್ನು ದಾಖಲಿಸಿದೆ. ಇನ್ನು ಏಪ್ರಿಲ್ 1, 2015ರಿಂದ ಮಾರ್ಚ್ 31, 2018ರ ಮಧ್ಯೆ ಪಡೆದ ಸಾಲವನ್ನು ಬೇರೆ ಕಡೆಗೆ ಬಳಸಿರುವ ಆರೋಪ ಇದೆ ಎಂದು ಹೇಳಿದ್ದಾರೆ.

ಬೆಸ್ಟ್ ಫುಡ್ ವಿರುದ್ಧ ಸಿಬಿಐನಿಂದ 1006 ಕೋಟಿ ರು. ವಂಚನೆ ಪ್ರಕರಣ

ಸಿಬಿಐಗೆ ದೂರು ನೀಡಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬೆಸ್ಟ್ ಫುಡ್ಸ್ ಲಿಮಿಟೆಡ್ ನಿಂದ ಬೆಸ್ಟ್ ಒಂದೇ ಬ್ರ್ಯಾಂಡ್ ಆಗಿದ್ದು, ಬೆಸ್ಟ್ ಪ್ರೀಮಿಯಂ, ಬೆಸ್ಟ್ ಪ್ರೀಮಿಯಂ, ಬೆಸ್ಟ್ ಸೂಪರ್ ಪ್ರೀಮಿಯಂ ಹೀಗೆ ನಾನಾ ಹೆಸರಲ್ಲಿ ಭಾರತದಾದ್ಯಂತ ಮಾರಾಟ ಮಾಡಲಾಗುತ್ತಿತ್ತು ಎಂದಿದೆ.

ಕಂಪೆನಿಯಿಂದ ಸಾಲ ಹಿಂತಿರುಗಿಸದ ಕಾರಣಕ್ಕೆ ಸೆಪ್ಟೆಂಬರ್ 27, 2016ಕ್ಕೆ ನಾನ್ ಪರ್ಫಾರ್ಮಿಂಗ್ ಅಸೆಟ್ಸ್ ಆಗಿದ್ದು, 1006.46 ಕೋಟಿ ರುಪಾಯಿ ಬಾಕಿ ಉಳಿದಿದೆ. ಇನ್ನು ಫೊರೆನ್ಸಿಕ್ ಆಡಿಟ್ ವೇಳೆ ಬ್ಯಾಲೆನ್ಸ್ ಶೀಟ್ ನಲ್ಲಿ ವ್ಯತ್ಯಾಸ ಹಾಗೂ ಬ್ಯಾಂಕ್ ಹಣವನ್ನು ದುರುಪಯೋಗ ಮಾಡಿಕೊಂಡಿರುವುದು ಗೊತ್ತಾಗಿದೆ ಎಂದು ಆರೋಪಿಸಲಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+