For Quick Alerts
ALLOW NOTIFICATIONS  
For Daily Alerts

ಮೇಕ್ ಮೈ ಟ್ರಿಪ್, ಗೋಐಬಿಬೋ ಮತ್ತು ಓಯೋಗೆ 392 ಕೋಟಿ ರೂ ದಂಡ

|

ನವದೆಹಲಿ, ಅ. 20: ಪ್ರವಾಸೋದ್ಯಮ ಕ್ಷೇತ್ರದ ಮೇಕ್ ಮೈ ಟ್ರಿಪ್- ಗೋ ಐಬಿಬೋ ಮತ್ತು ಓಯೋ ಕಂಪನಿಗಳು ಅನೈತಿಕ ವ್ಯವಹಾರ ನೀತಿ ಅನುಸರಿಸುತ್ತಿರುವ ಆರೋಪದ ಮೇಲೆ 392 ಕೋಟಿ ರೂ ದಂಡ ವಿಧಿಸಲಾಗಿದೆ. ಮೇಕ್ ಮೈ ಟ್ರಿಪ್- ಗೋಐಬಿಬೋಗೆ 223.48 ಕೋಟಿ ರೂ ಮತ್ತು ಓಯೋಗೆ 168.88 ರೂಪಾಯಿಗಳನ್ನು ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ) ದಂಡ ವಿಧಿಸಿ ಆದೇಶ ಹೊರಡಿಸಿದೆ.

 

ಮೆಕ್ ಮೈ ಟ್ರಿಪ್ ಮತ್ತು ಗೋಐಬಿಬೋ ಆನ್‌ಲೈನ್ ಮೂಲಕ ಪ್ರವಾಸಗಳ ವ್ಯವಸ್ಥೆ ಮಾಡುವ ಕಂಪನಿ. ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಲು ಪ್ರಯಾಣದ ವ್ಯವಸ್ಥೆ, ಒಂದು ಸ್ಥಳದಲ್ಲಿ ಉಳಿದುಕೊಳ್ಳಲು ವಸತಿ ವ್ಯವಸ್ಥೆ, ಊಟದ ವ್ಯವಸ್ಥೆ ಇತ್ಯಾದಿ ಅನೇಕ ಸೌಲಭ್ಯಗಳನ್ನು ಪ್ಯಾಕೇಜ್ ರೂಪದಲ್ಲಿ ಒದಗಿಸುತ್ತದೆ. ಈ ವೇಳೆ ಹೋಟೆಲ್ ಗ್ರೂಪ್‌ಗಳ ಜೊತೆ ಹೊಂದಾಣಿಕೆಯೂ ಆಗುತ್ತದೆ.

ಹಬ್ಬದ ಸೀಸನ್‌: ಎಚ್‌ಡಿಎಫ್‌ಸಿ, ಎಸ್‌ಬಿಐಗಿಂತ ಕಡಿಮೆ ದರದಲ್ಲಿ ಸಾಲ ನೀಡುತ್ತೆ ಈ ಬ್ಯಾಂಕುಗಳು!ಹಬ್ಬದ ಸೀಸನ್‌: ಎಚ್‌ಡಿಎಫ್‌ಸಿ, ಎಸ್‌ಬಿಐಗಿಂತ ಕಡಿಮೆ ದರದಲ್ಲಿ ಸಾಲ ನೀಡುತ್ತೆ ಈ ಬ್ಯಾಂಕುಗಳು!

ಆರೋಪ ಏನು?

ಆರೋಪ ಏನು?

ಈಗ ವಿವಾದ ಆಗಿದ್ದೇನೆಂದರೆ ಮೇಕ್ ವೈ ಟ್ರಿಪ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಓಯೋಗೆ ಪ್ರಾಶಸ್ತ್ಯ ಕೊಡುತ್ತಿದೆ ಎಂಬ ಆರೋಪ ಕೇಳಿಬಂದಿದ್ದು. ಓಯೋ ಎಂಬುದು ಹೋಟೆಲ್ ರೂಮುಗಳನ್ನು ವ್ಯವಸ್ಥೆ ಮಾಡುವ ಆನ್‌ಲೈನ್ ತಾಣ. ಮೇಕ್ ಮೈ ಟ್ರಿಪ್ ಮತ್ತು ಗೋ ಐಬಿಬೋದ ಪ್ಲಾಟ್‌ಫಾರ್ಮ್‌ನಲ್ಲಿ ಓಯೋಗೆ ಪ್ರಾಶಸ್ತ್ಯ ನೀಡಲಾಗುತ್ತಿದೆ ಎಂದು ಬೇರೊಂದು ಹೋಟೆಲ್ ಗ್ರೂಪ್ ಆರೋಪ ಮಾಡಿತ್ತು. ಈ ಹಿನ್ನೆಲೆಯಲ್ಲಿ 2019ರಿಂದಲೂ ಕಾಂಪಿಟೀಶನ್ ಕಮಿಷನ್ ಆಫ್ ಇಂಡಿಯಾ ಸಂಸ್ಥೆ ಈ ಮೂರು ಕಂಪನಿಗಳ ಮೇಲೆ ಕಣ್ಣಿಟ್ಟು ತನಿಖೆ ನಡೆಸುತ್ತಾ ಬಂದಿತ್ತು.

ಇದೀಗ ಈ ಕಂಪನಿಗಳು ಸ್ಪರ್ಧಾತ್ಮಕತೆಗೆ ವಿರುದ್ಧವಾದ ನೀತಿಯನ್ನು ಅನುಸರಿಸುತ್ತಿರುವುದು ನಿಜ ಎಂದು ಸಿಸಿಐಗೆ ದೃಢಪಟ್ಟಿದೆ. ಮೇಕ್ ಮೈ ಟ್ರಿಪ್, ಗೋ ಐಬಿಬೋ ಮತ್ತು ಓಯೋಗೆ ಕೋಟಿಗಟ್ಟಲೆ ಹಣದ ದಂಡ ವಿಧಿಸಿದ್ದಲ್ಲೇ ತಮ್ಮ ಧೋರಣೆಯನ್ನು ಬದಲಿಸಿಕೊಳ್ಳುವಂತೆ ತಾಕೀತು ಮಾಡಿದೆ. ಎಲ್ಲಾ ಹೋಟೆಲ್‌ಗಳಿಗೂ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಮುಕ್ತಾವಕಾಶ ಕೊಡಬೇಕು, ಎಲ್ಲರಿಗೂ ಏಕರೀತಿಯ ಮಾನದಂಡಗಳಿರಬೇಕು ಎಂದು ಸೂಚಿಸಿದೆ.

 

ಆದೇಶದಿಂದ ಕಂಪನಿಗಳಿಗೆ ಅಸಮಾಧಾನ
 

ಆದೇಶದಿಂದ ಕಂಪನಿಗಳಿಗೆ ಅಸಮಾಧಾನ

ಭಾರತೀಯ ಸ್ಪರ್ಧಾ ಆಯೋಗದ ಈ ಆದೇಶಕ್ಕೆ ಮೇಕ್ ಮೈ ಟ್ರಿಪ್ ಗೋ ಐಬಿಬೋ ಮತ್ತು ಓಯೋ ಕಂಪನಿಗಳು ಅಸಮಾಧಾನ ವ್ಯಕ್ತಪಡಿಸಿವೆ.

"ನಮ್ಮ ವ್ಯವಹಾರ ಕ್ರಮಗಳು ಮತ್ತು ನೀತಿಗಳು ಕಾನೂನಿಗೆ ಬದ್ಧವಾಗಿಯೇ ಇವೆ. ಸೂಕ್ತ ವೇದಿಕೆಗಳಲ್ಲಿ ನಮ್ಮ ಅಭಿಪ್ರಾಯ ಮಂಡಿಸುತ್ತೇವೆ" ಎಂದು ಓಯೋ ಹೇಳಿದೆ

"ಗ್ರಾಹಕರು ನಮ್ಮ ಆ್ಯಪ್, ವೆಬ್‌ಸೈಟ್ ಮತ್ತಿತರ ಓಯೋ ಚಾನಲ್‌ಗಳ ಮೂಲಕ ನೇರವಾಗಿ ಹೋಟೆಲ್ ರೂಮುಗಳನ್ನು ಬುಕ್ ಮಾಡುತ್ತಾರೆ. ಎಲ್ಲಾ ಓಟಿಎಗಳೊಂದಿಗೆ ಡಿಸ್ಟ್ರಿಬ್ಯೂಷನ್ ಪಾರ್ಟ್ನರ್‌ಗಳಾಗಿ ನಮ್ಮ ಕೆಲಸ ಮುಂದುವರಿಸುತ್ತೇವೆ" ಎಂದೂ ಓಯೋ ಸ್ಪಷ್ಟಪಡಿಸಿದೆ.

 ದುಬೈನಲ್ಲಿ ಬೃಹತ್ ಮ್ಯಾನ್ಷನ್ ಖರೀದಿಸಿದ ಮುಕೇಶ್ ಅಂಬಾನಿ; ಅದರ ಬೆಲೆ ಎಷ್ಟು? ದುಬೈನಲ್ಲಿ ಬೃಹತ್ ಮ್ಯಾನ್ಷನ್ ಖರೀದಿಸಿದ ಮುಕೇಶ್ ಅಂಬಾನಿ; ಅದರ ಬೆಲೆ ಎಷ್ಟು?

ಇ-ಕಾಮರ್ಸ್ ಮಾರುಕಟ್ಟೆಗೆ ಸಂಚಕಾರ

ಇ-ಕಾಮರ್ಸ್ ಮಾರುಕಟ್ಟೆಗೆ ಸಂಚಕಾರ

ಇನ್ನು, ಮೇಕ್ ಮೈ ಟ್ರಿಪ್ ಕಂಪನಿ ಸಿಸಿಐನ ಈ ಆದೇಶದ ಬಗ್ಗೆ ಬಹಳ ಅಸಮಾಧಾನ ಪಟ್ಟಿದೆ. "ಮೇಕ್ ಮೈ ಟ್ರಿಪ್ ಯಾವುದರಲ್ಲೂ ತಾರತಮ್ಯ ಮಾಡುವುದಿಲ್ಲ. ಈ ಆದೇಶದಿಂದ ಸ್ಪರ್ಧಾತ್ಮಕತೆಯ ಮಟ್ಟದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು, ಭಾರತದಲ್ಲಿ ಇ-ಕಾಮರ್ಸ್ ಮಾರುಕಟ್ಟೆಯ ಬೆಳವಣಿಗೆಗೂ ಹಿನ್ನಡೆಯಾಗಬಹುದು ಎಂಬುದು ನಮ್ಮ ಭಯ" ಎಂದು ಈ ಕಂಪನಿಯ ವಕ್ತಾರರು ಹೇಳಿದ್ದಾರೆ.

ಅಂದಹಾಗೆ, ಮೈಕ್ ಮೈ ಟ್ರಿಪ್ ಮತ್ತು ಓಯೋ ಮಧ್ಯೆ ನಡೆದಿರುವ ಒಪ್ಪಂದಗಳಿಂದ ಅನ್ಯಾಯವಾಗಿದೆ. ಮೇಕ್ ಮೈ ಟ್ರಿಪ್‌ನ ಪ್ಲಾಟ್‌ಫಾರ್ಮ್‌ನಲ್ಲಿ ಫ್ಯಾಬ್ ಹೋಟೆಲ್ಸ್, ಟ್ರೀಬೋ ಮೊದಲಾದ ಸ್ಪರ್ಧಿಗಳಿಗೆ ಹೆಚ್ಚು ಅವಕಾಶ ಕೊಡದೇ ಓಯೋಗೆ ಆದ್ಯತೆ ಕೊಡಲಾಗುತ್ತಿದೆ ಎಂದು ಭಾರತೀಯ ಹೋಟೆಲ್ ಮತ್ತು ರೆಸ್ಟೋರೆಂಟ್ ಸಂಘಟನೆಗಳ ಒಕ್ಕೂಟ (ಎಫ್‌ಎಚ್‌ಆರ್‌ಎಐ) ಆರೋಪ ಮಾಡಿತ್ತು.

ಜೊತೆಗೆ, ಓಯೋ ಮತ್ತು ಮೇಕ್ ಮೈ ಟ್ರಿಪ್ ಕಂಪನಿಗಳು ಹೋಟೆಲ್‌ಗಳಿಂದ ಭಾರೀ ಮೊತ್ತದ ಶುಲ್ಕ ವಿಧಿಸುತ್ತಿರುವುದಲ್ಲದೇ, ಭಾರೀ ಡಿಸ್ಕೌಂಟ್‌ಗಳನ್ನು ಮುಂದಿಟ್ಟು ಸ್ಪರ್ಧೆಯನ್ನೇ ಸಾಯಿಸುವ ಕೆಲಸ ಮಾಡುತ್ತಿವೆ ಎಂದೂ ಎಫ್‌ಎಚ್‌ಆರ್‌ಎಐ ಗಂಭೀರ ಆಪಾದನೆ ಮಾಡಿತ್ತು.

 

English summary

CCI Imposes Rs 392 Crore Fine Against MakeMyTrip and Oyo

Competition Commission of India has imposed Rs 392 crore against Make My Trip Goibibo and Oyo for unfair business practices killing the competition.
Story first published: Thursday, October 20, 2022, 13:52 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X