For Quick Alerts
ALLOW NOTIFICATIONS  
For Daily Alerts

ಕೇಂದ್ರ ಸರ್ಕಾರದಿಂದ ಜನವರಿ 1, 2021ರಿಂದ ಈರುಳ್ಳಿ ರಫ್ತಿನ ನಿರ್ಬಂಧ ತೆರವು

|

ಕೇಂದ್ರ ಸರ್ಕಾರವು ಎಲ್ಲ ಬಗೆಯ ಈರುಳ್ಳಿ ರಫ್ತಿನ ಮೇಲಿನ ನಿರ್ಬಂಧವನ್ನು ಜನವರಿ 1, 2021ರಿಂದ ತೆರವು ಮಾಡುತ್ತದೆ. ಈ ಬಗ್ಗೆ ಡೈರೆಕ್ಟೊರೇಟ್ ಜನರಲ್ ಆಫ್ ಫಾರಿನ್ ಟ್ರೇಡ್ ಸೋಮವಾರ ಅಧಿಸೂಚನೆ ಹೊರಡಿಸಿದೆ. ಉತ್ತಮ ಚಳಿಗಾಲದೊಂದಿಗೆ ಪೂರೈಕೆ ಕೊರತೆಯು ನಿವಾರಣೆ ಆಗುತ್ತಿದ್ದಂತೆ ಹಾಗೂ ಆಮದು ಪ್ರಮಾಣದಲ್ಲಿ ಏರಿಕೆ ಕಂಡುಬರುತ್ತಿದ್ದಂತೆ ಈ ನಿರ್ಧಾರಕ್ಕೆ ಬರಲಾಗಿದೆ.

"ಮೇಲ್ಕಂಡ ರೀತಿ ವಿವರಿಸಿದಂತೆ, ಎಲ್ಲ ಬಗೆಯ ಈರುಳ್ಳಿ ರಫ್ತನ್ನು 1.1.2021ರಿಂದ ಮುಕ್ತಗೊಳಿಸಲಾಗಿದೆ," ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಈ ವರ್ಷದ ಸೆಪ್ಟೆಂಬರ್ 15ನೇ ತಾರೀಕು ಸರ್ಕಾರವು ಎಲ್ಲ ಬಗೆಯ ಈರುಳ್ಳಿ ರಫ್ತನ್ನು ನಿಷೇಧಿಸಿತ್ತು. ದೇಶೀಯವಾಗಿ ಈರುಳ್ಳಿ ಪೂರೈಕೆಯಲ್ಲಿ ವ್ಯತ್ಯಯ ಆಗಿದ್ದರಿಂದ ಮುಂಜಾಗ್ರತೆ ಕ್ರಮವಾಗಿ ಸರ್ಕಾರದಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗಿತ್ತು.

ಎಲ್ಲ ಬಗೆಯ ಈರುಳ್ಳಿ ರಫ್ತು ತಕ್ಷಣ ನಿಷೇಧ; ಆದರೆ ಹೀಗೆ ಮಾಡಿದ್ದಲ್ಲಿ ತಡೆಯಿಲ್ಲಎಲ್ಲ ಬಗೆಯ ಈರುಳ್ಳಿ ರಫ್ತು ತಕ್ಷಣ ನಿಷೇಧ; ಆದರೆ ಹೀಗೆ ಮಾಡಿದ್ದಲ್ಲಿ ತಡೆಯಿಲ್ಲ

ಈ ವರ್ಷದ ಏಪ್ರಿಲ್ ನಿಂದ ಜುಲೈ ಮಧ್ಯೆ ಈರುಳ್ಳಿ ರಫ್ತಿನಲ್ಲಿ ಅಸ್ವಾಭಾವಿಕವಾದ 30% ಏರಿಕೆ ಕಂಡುಬಂದಿತ್ತು. ಇದರಿಂದಾಗಿ ಈರುಳ್ಳಿ ಬೆಲೆಯಲ್ಲಿ ಏರಿಕೆ ಕಂಡುಬಂದಿತ್ತು. ಅದೇ ಅವಧಿಯಲ್ಲಿ ಸಗಟು ಮಾರುಕಟ್ಟೆ ಈರುಳ್ಳಿ ದರ 30% ಹೆಚ್ಚಳವಾಯಿತು. ದೇಶದ ಹಲವು ನಗರಗಳಲ್ಲಿ ಕೇಜಿಗೆ 80ರಿಂದ 100 ರುಪಾಯಿ ತಲುಪಿತು.

ಕೇಂದ್ರ ಸರ್ಕಾರದಿಂದ ಜ. 1, 2021ರಿಂದ ಈರುಳ್ಳಿ ರಫ್ತು ನಿರ್ಬಂಧ ತೆರವು

ಅಧಿಕೃತ ಮಾಹಿತಿ ಪ್ರಕಾರ, 2019- 20ರಲ್ಲಿ ಭಾರತವು 328 ಮಿಲಿಯನ್ ಯುಎಸ್ ಡಿ ಮೌಲ್ಯದ ತಾಜಾ ಈರುಳ್ಳಿ, 112 ಮಿಲಿಯನ್ ಯುಎಸ್ ಡಿ ಒಣ ಈರುಳ್ಳಿ ರಫ್ತು ಮಾಡಿತ್ತು. 2020ರ ಏಪ್ರಿಲ್ ಹಾಗೂ ಜುಲೈ ಮಧ್ಯೆ ಬಾಂಗ್ಲಾದೇಶ್ ಗೆ ಈರುಳ್ಳಿ ರಫ್ತು 157.7 ಪರ್ಸೆಂಟ್ ಏರಿಕೆ ಆಗಿದೆ.

ಈ ಹಿಂದೆ 2019ರ ಸೆಪ್ಟೆಂಬರ್ 29ರಂದು ಸರ್ಕಾರವು ಈರುಳ್ಳಿ ರಫ್ತು ನಿಷೇಧಿಸಿತ್ತು. ಅದೇ ವರ್ಷ ಡಿಸೆಂಬರ್ ನಲ್ಲಿ ದೆಹಲಿಯಲ್ಲಿ ಈರುಳ್ಳಿ ಬೆಲೆ ಕೇಜಿಗೆ 80 ರುಪಾಯಿ ಮುಟ್ಟಿತ್ತು. ಈ ವರ್ಷ ಸೆಪ್ಟೆಂಬರ್ ನಲ್ಲಿ ಮತ್ತೆ ಈರುಳ್ಳಿ ರಫ್ತು ನಿಷೇಧ ಹೇರುವ ಮುನ್ನ, ಮಾರ್ಚ್ 15, 2020ರಲ್ಲಿ ನಿಷೇಧ ತೆರವುಗೊಳಿಸಿತ್ತು.

English summary

Central Government Will Lift Ban On Import Of Onion From January 1, 2021

Union government will lift ban on import of onion from January 1, 2021. After ease of onion supply.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X