For Quick Alerts
ALLOW NOTIFICATIONS  
For Daily Alerts

ಕೊರೊನಾ ಚಿಕಿತ್ಸೆ ನೀಡುವ ಆಸ್ಪತ್ರೆಗಳಿಗೆ ಆದಾಯ ತೆರಿಗೆ ವಿನಾಯಿತಿ

|

ಭಾರತದಲ್ಲಿ ದಾಖಲೆಯ ಪ್ರಮಾಣದಲ್ಲಿ ಕೋವಿಡ್-19 ಸೋಂಕು ಹೆಚ್ಚಾಗುತ್ತಿದ್ದು, ಕೊರೊನಾ ಚಿಕಿತ್ಸೆ ನೀಡುವ ಆಸ್ಪತ್ರೆಗಳಿಗೆ ಕೇಂದ್ರ ಸರ್ಕಾರ ಆದಾಯ ತೆರಿಗೆ ವಿನಾಯಿತಿ ಘೋಷಿಸಿದೆ. ಕೋವಿಡ್ ಚಿಕಿತ್ಸೆಗಾಗಿ ಆಸ್ಪತ್ರೆಗಳು ಪಡೆದ ಹಣಕ್ಕಾಗಿ ಆದಾಯ ತೆರಿಗೆ ಮಾನದಂಡಗಳನ್ನು ಸರಾಗಗೊಳಿಸಿದೆ.

 

ಕೋವಿಡ್ ಆಸ್ಪತ್ರೆಗಳು, ಮೆಡಿಕಲ್, ನರ್ಸಿಂಗ್ ಹೋಮ್ ಮತ್ತು ಕೋವಿಡ್ ಆರೈಕೆ ಕೇಂದ್ರಗಳಲ್ಲಿ ರೋಗಿಗಳಿಂದ 2 ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಸ್ವೀಕರಿಸಲು ಕೇಂದ್ರ ಸರ್ಕಾರವು ಈ ಸೌಲಭ್ಯಗಳನ್ನು ನೀಡಿದೆ.

 
ಕೊರೊನಾ ಚಿಕಿತ್ಸೆ ನೀಡುವ ಆಸ್ಪತ್ರೆಗಳಿಗೆ ಆದಾಯ ತೆರಿಗೆ ವಿನಾಯಿತಿ

ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 269 ಎಸ್‌ಟಿ ಯಲ್ಲಿ ಕೋವಿಡ್ ಕೇರ್ ಆಸ್ಪತ್ರೆಗಳಿಗೆ ವಿಶ್ರಾಂತಿ ನೀಡುವಂತೆ ಹಣಕಾಸು ಸಚಿವಾಲಯ ಶುಕ್ರವಾರ ಪ್ರಕಟಣೆ ಹೊರಡಿಸಿದೆ. ಆದರೆ, ನಗದು ಪಾವತಿ ರಶೀದಿಗೆ ವಿನಾಯಿತಿ 2021 ಏಪ್ರಿಲ್ 1 ರಿಂದ 2021 ಮೇ 31 ರವರೆಗೆ ಮಾತ್ರ ಅವಕಾಶವಿದೆ.

ಈ ಕುರಿತು ಆದಾಯ ತೆರಿಗೆ ಇಲಾಖೆ ಟ್ವೀಟ್ ಮಾಡಿದ್ದು '' ಕೋವಿಡ್-19 ಸಾಂಕ್ರಾಮಿಕದ ದೃಷ್ಟಿಯಿಂದ ಹೆಚ್ಚಿನ ಪರಿಹಾರವನ್ನು ನೀಡಲು, ಆದಾಯ ತೆರಿಗೆ ಕಾಯ್ದೆಯ 269ST, 1961 ರ ನಿಬಂಧನೆಗಳನ್ನು ಕೇಂದ್ರ ಸರ್ಕಾರವು ಸಡಿಲಿಸಿದೆ. ಆಸ್ಪತ್ರೆಗಳು ಅಥವಾ ವೈದ್ಯಕೀಯ ಸೌಲಭ್ಯಗಳನ್ನು ನೀಡುವ ರೋಗಿಗಳಿಗೆ 2 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ನಗದು ಪಾವತಿಗಳನ್ನು ಸ್ವೀಕರಿಸಲು ರೋಗಿಯ ಮತ್ತು ಹಣ ಪಾವತಿಸುವವರ ಪ್ಯಾನ್ ಅಥವಾ ಆಧಾರ್ ಪಡೆದ ನಂತರ, 01.04.2021 ರಿಂದ 31.05.2021 ರ ಅವಧಿಗೆ ತೆರಿಗೆ ವಿಶ್ರಾಂತಿ ನೀಡಲಾಗಿದೆ." ಎಂದು ಪ್ರಕಟಿಸಿದೆ.

English summary

Central Govt Eases Income Tax Norms For Hospitals Providing Covid Treatment

The central government has eased Income tax norms for the Covid hospitals, dispensaries, nursing home and Covid care centres
Story first published: Saturday, May 8, 2021, 9:59 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X