For Quick Alerts
ALLOW NOTIFICATIONS  
For Daily Alerts

ಭಾರತದ ಹಣದುಬ್ಬರದ ಮೇಲೆ ಕೇಂದ್ರ ಸರ್ಕಾರದ ಕಣ್ಣು

|

ನವದೆಹಲಿ, ಡಿಸೆಂಬರ್ 22: ಭಾರತದಲ್ಲಿ ಇಂಧನ ಮತ್ತು ರಸಗೊಬ್ಬರ ಬೆಲೆಗಳಿಂದಾಗಿ ಇಂದಿನ ದಿನಗಳಲ್ಲಿ ಹಣದುಬ್ಬರದ ಮೇಲೆ ಕೇಂದ್ರ ಸರ್ಕಾರ ಕಣ್ಣಿಟ್ಟಿದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಬುಧವಾರ ಹೇಳಿದ್ದಾರೆ.

ರಾಜ್ಯಸಭೆಯಲ್ಲಿ ಅನುದಾನಕ್ಕೆ ಪೂರಕ ಬೇಡಿಕೆಗಳ ಮೇಲಿನ ಚರ್ಚೆಗೆ ಉತ್ತರಿಸಿದ ಸಚಿವರು, ಸಗಟು ಹಣದುಬ್ಬರವು 21 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದಿದೆ ಎಂದರು. ಈ ಅನುದಾನಕ್ಕಾಗಿ ಪೂರಕ ಬೇಡಿಕೆಗಳನ್ನು ಲೋಕಸಭೆಗೆ ಹಿಂದಿರುಗಿಸಿತು, ಹೀಗಾಗಿ 2022-23ರ ಆರ್ಥಿಕ ಸಾಲಿನಲ್ಲಿ ಹೆಚ್ಚುವರಿ 3.25 ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡಲು ಸರ್ಕಾರಕ್ಕೆ ಅಧಿಕಾರ ನೀಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿತು.

 ಫಿಫ್ಟಿ ಫಿಫ್ಟಿ FF 29: ಈ ಸಂಖ್ಯೆಗೆ 1 ಕೋಟಿ ರೂಪಾಯಿ ಬಹುಮಾನ ಫಿಫ್ಟಿ ಫಿಫ್ಟಿ FF 29: ಈ ಸಂಖ್ಯೆಗೆ 1 ಕೋಟಿ ರೂಪಾಯಿ ಬಹುಮಾನ

ದೇಶದಲ್ಲಿ ಗ್ರಾಹಕ ಬೆಲೆ ಸೂಚ್ಯಂಕವನ್ನು ಆಧರಿಸಿದ ಚಿಲ್ಲರೆ ಹಣದುಬ್ಬರವು ಈ ವರ್ಷದ ಜನವರಿಯಿಂದ ರಿಸರ್ವ್ ಬ್ಯಾಂಕ್‌ನ ಮಟ್ಟದಲ್ಲಿ ಶೇಕಡಾ 6ಕ್ಕಿಂತ ಹೆಚ್ಚಾಗಿದ್ದು, ನವೆಂಬರ್‌ನಲ್ಲಿ ಶೇಕಡಾ 5.88ಕ್ಕೆ ಇಳಿದಿದೆ.

ಭಾರತದ ಹಣದುಬ್ಬರದ ಮೇಲೆ ಕೇಂದ್ರ ಸರ್ಕಾರದ ಕಣ್ಣು

ಭಾರತೀಯ ಆರ್ಥಿಕತೆಗೆ ಬೆಂಬಲ:

ಪಿಎಲ್ಐನಂತಹ ಅನುಕೂಲಕರ ನೀತಿಗಳಿಂದಾಗಿ ಭಾರತದಲ್ಲಿ ಖಾಸಗಿ ಹೂಡಿಕೆಯ ಕ್ಯಾಪೆಕ್ಸ್ ನಡೆಯುತ್ತಿದೆ ಎಂದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೆಲವು ಉದಾಹರಣೆಗಳನ್ನು ಸಹ ಉಲ್ಲೇಖಿಸಿದ್ದಾರೆ. ಈ ಅನುದಾನಕ್ಕಾಗಿ ಪೂರಕ ಬೇಡಿಕೆಯು ಆಹಾರ ಭದ್ರತೆ, ರಸಗೊಬ್ಬರ ಅಗತ್ಯತೆಗಳು ಮತ್ತು ಭಾರತೀಯ ಆರ್ಥಿಕತೆಗೆ ಬೆಂಬಲವನ್ನು ಒದಗಿಸುವುದು ಎಂದು ಸಚಿವರು ಒತ್ತಿ ಹೇಳಿದರು.

ಲೋಕಸಭೆಯಲ್ಲಿ ಪೂರಕ ಬೇಡಿಕೆಗಳಿಗೆ ಅನುಮೋದನೆ:

ಈ ಅನುದಾನಕ್ಕಾಗಿ ಪೂರಕ ಬೇಡಿಕೆಗಳ ಮೂಲಕ ಹೆಚ್ಚುವರಿ ವೆಚ್ಚವನ್ನು ಪೂರೈಸಲು ತೆರಿಗೆ ಸಂಗ್ರಹದಲ್ಲಿ ಸರ್ಕಾರಕ್ಕೆ ಸಹಾಯವಾಗುತ್ತದೆ ಎಂದು ಅವರು ಹೇಳಿದರು. ಕಳೆದ 2022-23ರ ಆರ್ಥಿಕ ವರ್ಷದಲ್ಲಿ ಹೆಚ್ಚುವರಿ 3.25 ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡಲು ಸರ್ಕಾರಕ್ಕೆ ಅಧಿಕಾರ ನೀಡುವ ಅನುದಾನಕ್ಕಾಗಿ ಪೂರಕ ಬೇಡಿಕೆಗಳನ್ನು ಲೋಕಸಭೆ ಅನುಮೋದಿಸಿತು.

ಅದೇ ರೀತಿ ಕಳೆದ ಮಾರ್ಚ್ 2022ರಲ್ಲಿ ಬ್ಯಾಂಕ್‌ಗಳ ಒಟ್ಟು ಎನ್‌ಪಿಎಗಳು 6 ವರ್ಷಗಳ ಕನಿಷ್ಠ 5.9 ಪಿಸಿಗೆ ಕುಸಿದಿದೆ ಎಂದು ಹಣಕಾಸು ಸಚಿವರು ಸದನಕ್ಕೆ ತಿಳಿಸಿದರು. ಕೋವಿಡ್ ಪರಿಣಾಮವನ್ನು ಎದುರಿಸಲು ಸರ್ಕಾರದ ಉದ್ದೇಶಿತ ವಿಧಾನವು ಆರ್ಥಿಕ ಹಿಂಜರಿತಕ್ಕೆ ಹೋಗದೆ ಬೆಳವಣಿಗೆಯನ್ನು ಪುನರುಜ್ಜೀವನಗೊಳಿಸಲು ಭಾರತಕ್ಕೆ ಸಹಾಯ ಮಾಡಿದೆ ಎಂದು ಅವರು ಹೇಳಿದರು.

English summary

Central Govt Keeping Eye On Inflation, says Minister Nirmala Sitharaman In Rajya Sabha

Central Govt Keeping Eye On Inflation, says Minister Nirmala Sitharaman In Rajya Sabha.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X