For Quick Alerts
ALLOW NOTIFICATIONS  
For Daily Alerts

ದಸರಾ ಗಿಫ್ಟ್: ಬ್ಯಾಂಕ್‌ಗಳ ಸಾಲಗಳ ಮೇಲಿನ ಚಕ್ರಬಡ್ಡಿ ಮನ್ನಾ

|

ನವದೆಹಲಿ, ಅ.24: ನವರಾತ್ರಿ ಸಂದರ್ಭದಲ್ಲಿ ಸಾಲಗಾರರಿಗೆ ಕೇಂದ್ರ ಸರ್ಕಾರ ಶುಭ ಸುದ್ದಿ ನೀಡಿದೆ. ಮಾರ್ಚ್ 1ರಿಂದ ಆಗಸ್ಟ್ 31ರವರೆಗಿನ ಬ್ಯಾಂಕ್ ಸಾಲಗಳ ಮೇಲಿನ ಚಕ್ರಬಡ್ಡಿ ಮನ್ನಾ ಮಾಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ.

ಅಂದರೆ ಮೊರಾಟೋರಿಯಮ್ ಅವಧಿಯ ಸಾಲದ ಮೇಲಿನ ಚಕ್ರಬಡ್ಡಿ ಮೊತ್ತ 6,500 ಕೋಟಿ ರೂ ಹೊರೆಯನ್ನು ಸರ್ಕಾರವೇ ಹೊರಲಿದೆ.

ದಸರಾ ಗಿಫ್ಟ್: ಬ್ಯಾಂಕ್‌ಗಳ ಸಾಲಗಳ ಮೇಲಿನ ಚಕ್ರಬಡ್ಡಿ ಮನ್ನಾ

ಯಾರಿಗೆ ಅನ್ವಯ?:
ಬ್ಯಾಂಕ್, ಸಹಕಾರಿ ಬ್ಯಾಂಕ್ , ಹಣಕಾಸು ಸಂಸ್ಥೆ, ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದ ಪಡೆದ 2ಕೋಟಿ ರು ತನಕ ಸಾಲ ಪಡೆದವರಿಗೆ ಇದು ಅನ್ವಯವಾಗಲಿದೆ. 2020ರ ಮಾರ್ಚ್ 1 ರಿಂದ ಆಗಸ್ಟ್ 31 ರ ಅವಧಿಯ ಬಡ್ಡಿ ಮೇಲಿನ ಬಡ್ಡಿ ಮನ್ನಾ ಮಾಡುವ ಬಗ್ಗೆ ಸುಪ್ರೀಂಕೋರ್ಟ್ ನೀಡಿದ ಆದೇಶ(ಅಕ್ಟೋಬರ್ 14)ದ ಅನ್ವಯ ಸರ್ಕಾರ ಈ ವೆಚ್ಚವನ್ನು ಭರಿಸಲಿದೆ.

ಯಾವ ರೀತಿ ಸಾಲ?
ಗೃಹಸಾಲ, ವಾಹನ ಸಾಲ, ವೈಯಕ್ತಿಕ ಸಾಲ, ಅನುಭೋಗಿ ಸಾಲ, ಕ್ರೆಡಿಟ್ ಕಾರ್ಡ್ ಸಾಲ, ಶಿಕ್ಷಣ ಸಾಲ, ಗೃಹಪಯೋಗಿ ವಸ್ತುಗಳ ಮೇಲಿನ ಸಾಲ, ತುರ್ತು ಅಗತ್ಯ ಸಾಲ, ಎಂಎಸ್ಎಂಇ ಸಾಲ..ಇತ್ಯಾದಿಗೆ ಅನ್ವಯವಾಗಲಿದೆ. ಆದರೆ, ಸಾಲದ ಮೊತ್ತ 2 ಕೋಟಿ ರು ಮೀರಿದಿದ್ದರೆ ಈ ಲಾಭ ಸಿಗುವುದಿಲ್ಲ.ಜೊತೆಗೆ ಕೆಟ್ಟ ಸಾಲ(ಎನ್ ಪಿಎ)ಗೆ ಬಡ್ಡಿ ಮನ್ನಾ ಸಿಗಲ್ಲ. ಒಂದು ವೇಳೆ ಮೊರಟೋರಿಯಂ ಪೂರ್ಣ, ಭಾಗಶಃ ಪಡೆದಿರಲಿ, ಪಡೆಯದಿರಲಿ, ಬಡ್ಡಿ ಕಟ್ಟಿರಲಿ, ಕಟ್ಟಿರದೇ ಇರಲಿ ಎಕ್ಸ್ ಗ್ರೇಷಿಯ ಅನುಮತಿ ಇದ್ದು, ಬಡ್ಡಿಮನ್ನಾ ಪ್ರಯೋಜನ ಪಡೆಯಬಹುದು.

English summary

Centre Issues Guidelines for Implementation of Interest Waiver on Loan

Finance Ministry approved guidelines for a scheme for grant of ex-gratia payment of the difference between compound interest and simple interest for six months of loans up to Rs 2 crore.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X