For Quick Alerts
ALLOW NOTIFICATIONS  
For Daily Alerts

ಜಿಎಸ್ ಟಿ ಪರಿಹಾರ ರು. 19,950 ಕೋಟಿ ಕೇಂದ್ರದಿಂದ ಬಿಡುಗಡೆ

|

ಕೇಂದ್ರ ಸರ್ಕಾರವು ಕಳೆದ ಸೋಮವಾರ 19,950 ಕೋಟಿ ರುಪಾಯಿಯನ್ನು ಪಾವತಿಸಿದೆ. ಸರಕು ಮತ್ತು ಸೇವಾ ತೆರಿಗೆಯಲ್ಲಿ (ಜಿಎಸ್ ಟಿ) ರಾಜ್ಯಗಳಿಗೆ ಆದ ಆದಾಯ ಖೋತಾಕ್ಕೆ ಪರಿಹಾರ ರೂಪವಾಗಿ ಇದನ್ನು ನೀಡಲಾಗಿದೆ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ಇದರೊಂದಿಗೆ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಜಿಎಸ್ ಟಿ ಪರಿಹಾರ ರೂಪದಲ್ಲಿ 1.2 ಲಕ್ಷ ಕೋಟಿ ರುಪಾಯಿ ಪಾವತಿಸಿದಂತಾಯಿತು. ದುಬಾರಿ ವಸ್ತುಗಳು ಮತ್ತು ತಂಬಾಕು ಪದಾರ್ಥಗಳ ಮೇಲೆ ಈವರೆಗೆ ಸೆಸ್ ರೂಪದಲ್ಲಿ ಸಂಗ್ರಹಿಸಲಾದ 78,874 ಕೋಟಿ ರುಪಾಯಿಗಿಂತ ಹೆಚ್ಚಿನ ಮೊತ್ತವನ್ನು ಪರಿಹಾರ ರೂಪದಲ್ಲಿ ಪಾವತಿಸಲಾಗಿದೆ.

ಈ ವ್ಯತ್ಯಾಸದ ಮೊತ್ತಕ್ಕಾಗಿ ಕೇಂದ್ರವು ಈ ಹಿಂದಿನ ವರ್ಷ ಸಂಗ್ರಹಿಸಿದ್ದ ಹೆಚ್ಚುವರಿ ಸೆಸ್ ಅನ್ನು ಬಳಸಿಕೊಂಡಿದೆ. ಸಮಯಕ್ಕೆ ಸರಿಯಾಗಿ ಜಿಎಸ್ ಟಿ ಪರಿಹಾರ ಪಾವತಿ ಆಗುತ್ತಿಲ್ಲ ಎಂಬುದು ರಾಜ್ಯ ಸರ್ಕಾರಗಳು ಮತ್ತು ಕೇಂದ್ರದ ಮಧ್ಯೆ ತಿಕ್ಕಾಟಕ್ಕೆ ಕಾರಣವಾಗಿತ್ತು. ಏಕೆಂದರೆ, ಆರ್ಥಿಕ ಹಿಂಜರಿತದ ಕಾರಣಕ್ಕೆ ಆದಾಯ ಸಂಗ್ರಹದ ಮೇಲೆ ಪರಿಣಾಮ ಬೀರಿತ್ತು.

ಜಿಎಸ್ ಟಿ ಪರಿಹಾರ ರು. 19,950 ಕೋಟಿ ಕೇಂದ್ರದಿಂದ ಬಿಡುಗಡೆ

ತೆರಿಗೆ ಕದಿಯುವುದನ್ನು ತಡೆಯುವುದಕ್ಕೆ ಹಾಗೂ ನಿಯಮಗಳಿಗೆ ಜನರು ಬದ್ಧವಾಗಿರುವುದಕ್ಕೆ ಆ ಕಾರಣಕ್ಕೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಾಯಿತು. ಇನ್ನು ಪ್ರಸಕ್ತ ಆರ್ಥಿಕ ವರ್ಷದಲ್ಲಿ 1 ಲಕ್ಷ ಕೋಟಿ ರುಪಾಯಿ ಜಿಎಸ್ ಟಿ ಸೆಸ್ ಸಂಗ್ರಹದ ಗುರಿ ಇರಿಸಿಕೊಂಡಿದೆ ಕೇಂದ್ರ ಸರ್ಕಾರ.

English summary

Centre Paid 19,950 Crore GST Compensation To State Government

Central government paid 19,950 crore rupees as GST compensation on last Monday. Here is the complete details.
Story first published: Friday, February 21, 2020, 9:33 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X