For Quick Alerts
ALLOW NOTIFICATIONS  
For Daily Alerts

ಚಾರ್ ಧಾಮ್ ದರ್ಶನ ಮಾಡಿಸಲಿದೆ ರಿಲಯನ್ಸ್ ಜಿಯೋ

|

ಸದ್ಯದಲ್ಲೇ ಜಿಯೋದಿಂದ ಚಾರ್ ಧಾಮ್ ದರ್ಶನ ಮಾಡಿಸಲಾಗುತ್ತದೆ. ಆನ್ ಲೈನ್ ಮೂಲಕ ಎಲ್ಲರಿಗೂ ದರ್ಶನ ದೊರೆಯಲಿದೆ. ಉತ್ತರಾಖಂಡದ ಎಲ್ಲ ಪ್ರಮುಖ ಧಾರ್ಮಿಕ ಕ್ಷೇತ್ರಗಳಿಂದ ಆರತಿಯ ನೇರ ಪ್ರಸಾರವನ್ನು ರಿಲಯನ್ಸ್ ಜಿಯೋ ಮಾಡಿಸಲಿದೆ ಎಂದು ಉತ್ತರಾಖಂಡದ ಮಾಹಿತಿ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ತಿಳಿಸಲಾಗಿದೆ.

 

ಈ ಹಿಂದೆ ಉತ್ತರಾಖಂಡದ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರನ್ನು ಮುಕೇಶ್ ಅಂಬಾನಿ ಭೇಟಿಯಾಗಿ, ಡಿಜಿಟಲ್ ಉತ್ತರಾಖಂಡ್ ಭಾಗವಾಗಿ ಅಂತರ್ಜಾಲ ಸಂಪರ್ಕ ಒದಗಿಸುವ ಮಾತುಕತೆ ನಡೆಸಿದ್ದರು. ಈ ನಿಟ್ಟಿನಲ್ಲಿ ಕೆಲಸ ಮಾಡಿರುವ ಜಿಯೋ, ಫೈಬರ್ ಸಂಪರ್ಕ ಒದಗಿಸುವಲ್ಲಿ ಶೇಕಡಾ 89ರಷ್ಟು ಕೆಲಸವನ್ನು ಪೂರ್ಣಗೊಳಿಸಿದೆ.

 
ಚಾರ್ ಧಾಮ್ ದರ್ಶನ ಮಾಡಿಸಲಿದೆ ರಿಲಯನ್ಸ್ ಜಿಯೋ

ಜಿಯೋದ ಈ ಕಾರ್ಯಕ್ಕೆ ಧನ್ಯವಾದ ಹೇಳಿರುವ ಮುಖ್ಯಮಂತ್ರಿ ರಾವತ್, ಆನ್ ಲೈನ್ ದರ್ಶನದ ಮೂಲಕ ಉತ್ತರಾಖಂಡದ ಚಾರ್ ಧಾಮ್ ಮತ್ತು ಇತರ ಎಲ್ಲ ದೇವಸ್ಥಾನಗಳ ಪರಿಚಯ ಮಾಡಿಕೊಳ್ಳಬಹುದು. ಅನಾರೋಗ್ಯ ಅಥವಾ ಮತ್ತಿನ್ಯಾವ ಕಾರಣಕ್ಕೋ ದೇವರ ದರ್ಶನಕ್ಕೆ ಬರಲು ಸಾಧ್ಯವಿಲ್ಲದವರಿಗೆ ಇದರಿಂದ ಅನುಕೂಲವಾಗುತ್ತದೆ ಎಂದಿದ್ದಾರೆ.

English summary

Char Dham Darshan By Reliance Jio To Devotees

Char Dham darshan to devotees by Reliance Jio through it's online platform.
Story first published: Thursday, February 27, 2020, 11:35 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X