For Quick Alerts
ALLOW NOTIFICATIONS  
For Daily Alerts

ಅಗ್ಗದ ಡೇಟಾ ದಿನಗಳು ಸದ್ಯದಲ್ಲೇ ಮುಗಿಯಲಿವೆ ಎಂದ ಏರ್ ಟೆಲ್ ಮುಖ್ಯಸ್ಥ ಮಿತ್ತಲ್

|

16 GB ಡೇಟಾದಿಂದ $ 2 (ಅಂದಾಜು 148 ರುಪಾಯಿ) ಗಳಿಸುವುದು 'ದುರಂತ'. ಇದು ಹೀಗೇ ಆದರೆ ಉಳಿದುಕೊಳ್ಳುವುದು ಸಾಧ್ಯವಿಲ್ಲ ಎಂದು ಭಾರ್ತಿ ಏರ್ ಟೆಲ್ ಮುಖ್ಯಸ್ಥ ಸುನೀಲ್ ಮಿತ್ತಲ್ ಸೋಮವಾರ ಹೇಳಿದ್ದಾರೆ. ಮೊಬೈಲ್ ಬಳಕೆ ದರ ಏರಿಕೆ ಮಾಡುವ ಅಗತ್ಯದ ಬಗ್ಗೆ ಅವರು ಮಾತನಾಡಿದ್ದಾರೆ.

 

ಆವರೇಜ್ ರೆವೆನ್ಯೂ ಪರ್ ಯೂಸರ್ (Arpu) ಮುಂದಿನ ಐದರಿಂದ ಆರು ತಿಂಗಳಲ್ಲಿ 200ರಿಂದ 250 ರುಪಾಯಿ ದಾಟಬೇಕು ಎಂದು ಏರ್ ಟೆಲ್ ನಿರೀಕ್ಷೆ ಮಾಡುತ್ತಿದೆ. ಪ್ರಸಕ್ತ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಏರ್ ಟೆಲ್ Arpu 157 ರುಪಾಯಿ ದಾಖಲಿಸಿದೆ. ಇದು ಟೆಲಿಕಾಂ ವಲಯದಲ್ಲೇ ಅತಿ ಹೆಚ್ಚು.

ಏರ್ ಟೆಲ್ Xstream ಫೈಬರ್ ಹೋಮ್ ಖರೀದಿಗೆ 1000 GB ಹೆಚ್ಚುವರಿ ಡೇಟಾ

ಪ್ರಮುಖ ಸುದ್ದಿ ವಾಹಿನಿಯೊಂದರ ಜತೆ ಮಾತನಾಡಿದ ಸುನೀಲ್, ಭಾರತದ ಟೆಲಿಕಾಂ ಆಪರೇಟರ್ ಗಳು ಒಬ್ಬ ಗ್ರಾಹಕರಿಂದ 50ರಿಂದ 60ರಿಂದ ಗಳಿಸಬೇಕು ಎಂದು ಬಯಸುವುದಿಲ್ಲ. ಯು.ಎಸ್. ನಲ್ಲಿ ಇರುವಂತೆಯೇ ಇಲ್ಲೂ Arpu 300 ರುಪಾಯಿ ಆಗಲಿಲ್ಲ ಎಂದಾದರೆ ಈ ಉದ್ಯಮದಲ್ಲಿ ಉಳಿಯುವುದು ಕಷ್ಟ ಎಂದಿದ್ದಾರೆ.

ಅಗ್ಗದ ಡೇಟಾ ದಿನಗಳು ಸದ್ಯದಲ್ಲೇ ಮುಗಿಯಲಿವೆ ಎಂದ ಏರ್ ಟೆಲ್ ಮುಖ್ಯಸ್ಥ

ಭವಿಷ್ಯದಲ್ಲಿ ಭಾರತದಲ್ಲಿ ಎರಡೇ ಟೆಲಿಕಾಂ ಆಪರೇಟರ್ ಗಳು ಇರಬಹುದು. ಮೂರನೇ ಆಪರೇಟರ್ ಹೊಸದಾಗಿ ಬಂಡವಾಳ ಹೂಡಿಕೆ ಮಾಡಲಿಲ್ಲ ಅಂದರೆ ಇಲ್ಲಿ ಆಪರೇಟರ್ ಉಳಿದುಕೊಳ್ಳುವುದು ಅನುಮಾನ ಎಂದು ಅವರು ಹೇಳಿದ್ದಾರೆ.

AGR ಬಾಕಿ ಪಾವತಿಸುವಂತೆ ಸುಪ್ರೀಂ ಕೋರ್ಟ್ ಹೇಳಿರುವುದರಿಂದ ವೊಡಾಫೋನ್ ಐಡಿಯಾ ಉಳಿಯುವುದು ಅನುಮಾನ ಇದೆ. ಕಂಪೆನಿಗಳಿಂದ ಎಜಿಆರ್ ಬಾಕಿ ವಸೂಲಿಗೆ ಹದಿನೈದರಿಂದ ಇಪ್ಪತ್ತು ವರ್ಷ ಸಮಯ ನೀಡುವಂತೆ ಪ್ರಸ್ತಾವ ಮುಂದಿಟ್ಟಿದೆ. ಈ ಕುರಿತಂತೆ ಆದೇಶವನ್ನು ಸುಪ್ರೀಂ ಕೋರ್ಟ್ ಕಾಯ್ದಿರಿಸಿದೆ.

ಟೆಲಿಕಾಂ ವಲಯ ಒಂದರಲ್ಲೇ ಎಲ್ಲ ಕಡೆಯೂ ವಕೀಲರನ್ನು ಕಾಣಬಹುದು ಎಂದಿರುವ ಸುನೀಲ್, ಈ ವ್ಯಾಜ್ಯಗಳು ಕಡಿಮೆ ಆಗಬೇಕು ಎಂಬ ಅಭಿಪ್ರಾಯ ಪಟ್ಟಿದ್ದಾರೆ. ಸರ್ಕಾರದ 'ವಿವಾದ್ ಸೇ ವಿಶ್ವಾಸ್' ಉತ್ತಮ ಕಾರ್ಯಕ್ರಮ ಎಂದು ಕರೆದಿದ್ದಾರೆ.

English summary

Cheap Data Days Will End Soon, Says Airtel Chief Sunil Mittal

Cheap data days will end soon. Otherwise telecom operators will not survive, says Bharti Airtel chief Sunil Mittal.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X