For Quick Alerts
ALLOW NOTIFICATIONS  
For Daily Alerts

ಚೀನಾ- ಚೀನೀಯರನ್ನು ಹಾಡಿ ಹೊಗಳಿದ ಅಮೆರಿಕ ಶತಕೋಟ್ಯಧಿಪತಿ ಎಲಾನ್ ಮಸ್ಕ್

|

ಒಂದು ಕಡೆ ಚೀನಾ- ಅಮೆರಿಕ ಮಧ್ಯೆ ವಾಣಿಜ್ಯ ಸಮರ ಏರ್ಪಟ್ಟಿದೆ. ಅವಕಾಶ ಸಿಕ್ಕಿದ ಕಡೆಯಲ್ಲೆಲ್ಲ ಅಮೆರಿಕ ಸರ್ಕಾರವು ಚೀನಾ ವಿರುದ್ಧ ಬೆಂಕಿಯುಗುಳುತ್ತಿದೆ. ಇನ್ನೊಂದು ಕಡೆ ಟೆಸ್ಲಾ ಹಾಗೂ ಸ್ಪೇಸ್‍X ಸಿಇಒ ಎಲಾನ್ ಮಸ್ಕ್ ಚೀನೀಯರನ್ನು "ಪ್ರತಿಭಾವಂತರು" ಹಾಗೂ "ಕಠಿಣ ಪರಿಶ್ರಮ ಪಡುವ ಜನ" ಎಂದು ಹಾಡಿ ಹೊಗಳಿದ್ದಾರೆ.

 

7,000 ರುಪಾಯಿ ಗುಜರಿ ಕಾರಿಗೆ 7 ಕೋಟಿ ಕೊಟ್ಟು ಖರೀದಿಸಿದ್ದ ಎಲಾನ್ ಮಸ್ಕ್7,000 ರುಪಾಯಿ ಗುಜರಿ ಕಾರಿಗೆ 7 ಕೋಟಿ ಕೊಟ್ಟು ಖರೀದಿಸಿದ್ದ ಎಲಾನ್ ಮಸ್ಕ್

ನನ್ನ ಪ್ರಕಾರ ಚೀನಾವು ಅಮೋಘವಾಗಿ ಮುನ್ನಡೆಯುತ್ತಿದೆ. ಚೀನಾದ ಚೈತನ್ಯ ಅದ್ಭುತ. ಅಲ್ಲಿನ ಜನರು ಪ್ರತಿಭಾವಂತರು, ಕಠಿಣ ಪರಿಶ್ರಮಿಗಳು. ಅವರು ತೃಪ್ತರಾಗುವುದೇ ಇಲ್ಲ ಎಂದು ಆಟೋಮೋಟಿವ್ ನ್ಯೂಸ್ ಗೆ ಮಸ್ಕ್ ಹೇಳಿದ್ದಾರೆ. ಚೀನಾದ ಎಲೆಕ್ಟ್ರಿಕಲ್ ವಾಹನ ರಣತಂತ್ರದ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ ಈ ಮಾತುಗಳನ್ನು ಹೇಳಿದ್ದಾರೆ.

ಟೆಸ್ಲಾ ಶಾಂಘೈ ಕಾರ್ಖಾನೆಗೆ $ 150 ಕೋಟಿ ಸಾಲ

ಟೆಸ್ಲಾ ಶಾಂಘೈ ಕಾರ್ಖಾನೆಗೆ $ 150 ಕೋಟಿ ಸಾಲ

ಇದೇ ವೇಳೆ, ಚೀನೀಯರಿಗೆ ಹೋಲಿಸಿದರೆ ಬೇ ಏರಿಯಾ, ಲಾಸ್ ಏಂಜಲೀಸ್ ಹಾಗೂ ನ್ಯೂಯಾರ್ಕ್ ನಂಥ ಕಡೆ ಹೆಚ್ಚು ತೃಪ್ತರು ಎಂದು ಹೇಳಿದ್ದಾರೆ. ಚೀನಾ ಸರ್ಕಾರದ ಬೆಂಬಲ ಉತ್ತಮವಾಗಿದೆ. ಆದರೆ ಟೆಸ್ಲಾಗೆ ಅಮೆರಿಕಾದಲ್ಲಿ ತೀರಾ ಕನಿಷ್ಠ ಮಟ್ಟದ ಬೆಂಬಲ ಇತ್ತು ಎಂದಿದ್ದಾರೆ. ಟೆಸ್ಲಾ ಶಾಂಘೈ ಕಾರ್ಖಾನೆಗೆ 150 ಕೋಟಿ ಅಮೆರಿಕನ್ ಡಾಲರ್ ಸಾಲ ಪಡೆಯಲು ಮಸ್ಕ್ ಗೆ ಚೀನಾ ಸಹಾಯ ಮಾಡಿತ್ತು.

ಭವಿಷ್ಯದ ಕಾರು ಮಾರಾಟದ ರೂಪುರೇಖೆ

ಭವಿಷ್ಯದ ಕಾರು ಮಾರಾಟದ ರೂಪುರೇಖೆ

ಇನ್ನು ಕೊರೊನಾ ಕಾರಣಕ್ಕೆ ತಾತ್ಕಾಲಿಕವಾಗಿ ನಿಂತು ಹೋಗಿದ್ದ ಉತ್ಪಾದನೆಯನ್ನು ಮತ್ತೆ ಮಾಮೂಲಿನಂತೆ ಆರಂಭಿಸಲು ಚೀನಾದ ಸ್ಥಳೀಯ ಸರ್ಕಾರವು ನೆರವು ನೀಡಿದೆ. ಶತಕೋಟ್ಯಧಿಪತಿ ಉದ್ಯಮಿ ಮಸ್ಕ್ ಭವಿಷ್ಯದ ಕಾರು ಮಾರಾಟದ ಬಗ್ಗೆ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಮಾರ್ಕೆಟಿಂಗ್ ಬದಲಿಗೆ ಉತ್ಪನ್ನಗಳ ಮೇಲೆ ಗಮನ ನೀಡಿ
 

ಮಾರ್ಕೆಟಿಂಗ್ ಬದಲಿಗೆ ಉತ್ಪನ್ನಗಳ ಮೇಲೆ ಗಮನ ನೀಡಿ

ಡೀಲರ್ ಶಿಪ್ ಅಥವಾ ಮಳಿಗೆಗಳ ಮೂಲಕ ಮಾರಾಟ ಆಗುವ ಬದಲಿಗೆ ಆನ್ ಲೈನ್ ನಲ್ಲಿ ಕಾರು ಮಾರಾಟ ಹಾಗೂ ಸೀದಾ ಗ್ರಾಹಕರಿಗೆ ಕಾರು ಡೆಲಿವರಿ ನೀಡುವ ಪ್ರಮಾಣ ಜಾಸ್ತಿ ಆಗಿರುವ ಕುರಿತು ಹೇಳಿದ್ದಾರೆ. ಮಾರ್ಕೆಟಿಂಗ್ ಹಾಗೂ ಪ್ರಸೆಂಟೇಷನ್ ಮೇಲೆ ಕಡಿಮೆ ಸಮಯ ಮೀಸಲಿಟ್ಟು, ಹೆಚ್ಚು ಸಮಯವನ್ನು ಉತ್ಪನ್ನಗಳಿಗಾಗಿ ಎತ್ತಿಡಬೇಕು. ಪ್ರಾಮಾಣಿಕವಾಗಿ, ಬಿಜಿನೆಸ್ ಸ್ಕೂಲ್ ಗಳಲ್ಲಿ ಹೇಳಿಕೊಡಬೇಕಾದ ಮೊದಲ ಪಾಠ ಇದು ಎಂದು ಎಲಾನ್ ಮಸ್ಕ್ ಹೇಳಿದ್ದಾರೆ.

English summary

China And Chinese Praised By America Billionaire Businessman Elon Musk

Tesla and SpaceX CEO Elon Musk praised China and Chinese amid trade war between America and China.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X