For Quick Alerts
ALLOW NOTIFICATIONS  
For Daily Alerts

ದಶಕಗಳಲ್ಲೇ ಮೊದಲ ಬಾರಿಗೆ ಚೀನಾದಿಂದ ಭಾರತದ ಅಕ್ಕಿ ಖರೀದಿ

|

ಕನಿಷ್ಠ ಮೂರು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಭಾರತದ ಅಕ್ಕಿಯನ್ನು ಚೀನಾ ಆಮದು ಮಾಡಿಕೊಳ್ಳಲು ಆರಂಭಿಸಿದೆ. ಪೂರೈಕೆಯಲ್ಲಿನ ಬಿಗಿ ಹಾಗೂ ಭಾರತದಿಂದ ಭಾರೀ ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿರುವುದರಿಂದ ಈ ಬೆಳವಣಿಗೆ ಆಗಿದೆ ಎಂದು ಭಾರತೀಯ ವಲಯದ ಅಧಿಕಾರಿಗಳು ರಾಯಿಟರ್ಸ್ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ.

ವಿಶ್ವದಲ್ಲೇ ಅತಿ ದೊಡ್ಡ ಅಕ್ಕಿ ರಫ್ತುದಾರ ದೇಶ ಭಾರತ ಹಾಗೂ ವಿಶ್ವದ ಅತಿ ದೊಡ್ಡ ಆಮದುದಾರ ದೇಶ ಚೀನಾ. ಪ್ರತಿ ವರ್ಷ 40 ಲಕ್ಷ ಟನ್ ಅಕ್ಕಿಯನ್ನು ಚೀನಾ ಆಮದು ಮಾಡಿಕೊಳ್ಳುತ್ತದೆ. ಆದರೆ ಗುಣಮಟ್ಟದ ಕಾರಣಕ್ಕೆ ಚೀನಾವು ಭಾರತದಿಂದ ಅಕ್ಕಿ ಖರೀದಿ ಮಾಡುತ್ತಿರಲಿಲ್ಲ.

Export- Import Business In India: ಭಾರತದಲ್ಲಿ ರಫ್ತು- ಆಮದು ವ್ಯವಹಾರ ಆರಂಭಿಸುವುದು ಹೇಗೆ?Export- Import Business In India: ಭಾರತದಲ್ಲಿ ರಫ್ತು- ಆಮದು ವ್ಯವಹಾರ ಆರಂಭಿಸುವುದು ಹೇಗೆ?

"ಇದೇ ಮೊದಲ ಬಾರಿಗೆ ಚೀನಾವು ಅಕ್ಕಿಯನ್ನು ಖರೀದಿ ಮಾಡಿದೆ. ಭಾರತದ ಬೆಳೆಯ ಗುಣಮಟ್ಟವನ್ನು ನೋಡಿದ ಮೇಲೆ ಮುಂದಿನ ವರ್ಷ ಖರೀದಿ ಹೆಚ್ಚು ಮಾಡಬಹುದು," ಎಂದು ಅಕ್ಕಿ ರಫ್ತುದಾರರ ಒಕ್ಕೂಟದ ಅಧ್ಯಕ್ಷ ಬಿ.ವಿ. ಕೃಷ್ಣರಾವ್ ಹೇಳಿದ್ದಾರೆ.

ದಶಕಗಳಲ್ಲೇ ಮೊದಲ ಬಾರಿಗೆ ಚೀನಾದಿಂದ ಭಾರತದ ಅಕ್ಕಿ ಖರೀದಿ

ಭಾರತೀಯ ವರ್ತಕರು ಡಿಸೆಂಬರ್ ನಿಂದ ಫೆಬ್ರವರಿ ಮಧ್ಯೆ 1,00,000 ಟನ್ ಅಕ್ಕಿ ರಫ್ತು ಮಾಡಲಿದ್ದು, ಪ್ರತಿ ಟನ್ ಗೆ 300 ಅಮೆರಿಕನ್ ಡಾಲರ್ ನಂತೆ(ಭಾರತದ ರುಪಾಯಿಯಲ್ಲಿ 2200ಕ್ಕೂ ಹೆಚ್ಚು) ಚೀನಾ ತಲುಪಲಿದೆ. ಚೀನಾದ ಸಾಂಪ್ರದಾಯಿಕ ಸರಬರಾಜುದಾರರಾದ ಥಾಯ್ಲೆಂಡ್, ವಿಯೆಟ್ನಾಂ, ಮ್ಯಾನ್ಮಾರ್, ಪಾಕಿಸ್ತಾನ ಬಳಿ ಸೀಮಿತವಾದ ಹೆಚ್ಚುವರಿ ದಾಸ್ತಾನು ಇದೆ.

ಇನ್ನು ಭಾರತಕ್ಕೆ ಹೋಲಿಸಿದಲ್ಲಿ ಅವರೆಲ್ಲ ಟನ್ ಗೆ ಕನಿಷ್ಠ 30 ಯುಎಸ್ ಡಿ ಹೆಚ್ಚು ದರ ಕೇಳುತ್ತಾರೆ ಎಂದು ಮೂಲಗಳು ತಿಳಿಸಿವೆ.

English summary

China Buys Rice From India First Time In Decades

World's biggest importer of rice China buys rice from India first in decades. Here is the details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X