For Quick Alerts
ALLOW NOTIFICATIONS  
For Daily Alerts

ಚೀನಾ ಆ್ಯಪ್‌ಗಳ ಮಾರುಕಟ್ಟೆ ಪಾಲು ಶೇ. 29ಕ್ಕೆ ಕುಸಿತ

|

ಕೋವಿಡ್-19 ಸಾಂಕ್ರಾಮಿಕದ ಹರಡುವಿಕೆಗೆ ಪ್ರಮುಖ ಕಾರಣವಾಗಿ ಗುರುತಿಸಿಕೊಂಡಿರುವ ಡ್ರ್ಯಾಗನ್ ರಾಷ್ಟ್ರ ಚೀನಾವು ಈಗಾಗಲೇ ಭಾರತ ಸೇರಿದಂತೆ ಹಲವು ರಾಷ್ಟ್ರಗಳ ಪಾಲಿನ ವಿಲನ್ ಆಗಿದೆ. ಅದರಲ್ಲೂ ಭಾರತದೊಂದಿಗೆ ಗಡಿ ವಿವಾದದ ಜೊತೆಗೆ ಸಂಬಂಧವನ್ನು ಮತ್ತಷ್ಟು ಹಾಳು ಮಾಡಿಕೊಂಡಿದೆ.

 

ಇದರ ನಡುವೆ ಬದಲಾಗುತ್ತಿರುವ ಭೌಗೋಳಿಕ ರಾಜಕೀಯ ವಾತಾವರಣದಲ್ಲಿ ಚೀನಾದ ಅಪ್ಲಿಕೇಶನ್‌ಗಳು ತಮ್ಮ ಮಾರುಕಟ್ಟೆ ಪಾಲು ಕಳೆದುಕೊಳ್ಳುತ್ತಿದ್ದು, 2019 ರಲ್ಲಿ ಶೇಕಡಾ 38ರಿಂದ 2020 ರಲ್ಲಿ ಶೇಕಡಾ 29ಕ್ಕೆ ಕುಸಿದಿದೆ ಎಂದು ವಿಶ್ಲೇಷಣಾ ಸಂಸ್ಥೆ ಆಪ್‌ಸ್ಫ್ಲೈಯರ್ ವರದಿ ತಿಳಿಸಿದೆ.

 
ಚೀನಾ ಆ್ಯಪ್‌ಗಳ ಮಾರುಕಟ್ಟೆ ಪಾಲು ಶೇ. 29ಕ್ಕೆ ಕುಸಿತ

2020ರಲ್ಲಿ ಚೀನಾದ ಅಪ್ಲಿಕೇಷನ್ ಮಾರುಕಟ್ಟೆ ಪ್ರಮಾಣವು ಒಂದೆಡೆ ಕುಸಿದರೆ, ಅದೇ ಸಮಯದಲ್ಲಿ ಭಾರತೀಯ ಅಪ್ಲಿಕೇಶನ್‌ಗಳ ಮಾರುಕಟ್ಟೆ ಪ್ರಾಬಲ್ಯ ಹೆಚ್ಚಿದ್ದು ಶೇಕಡಾ 39ಕ್ಕೆ ಏರಿಕೆಯಾಗಿದೆ.

ಏತನ್ಮಧ್ಯೆ, ರಷ್ಯಾ, ಇಸ್ರೇಲ್, ಜರ್ಮನಿ ಮತ್ತು ಅಮೆರಿಕಾದಂತಹ ರಾಷ್ಟ್ರಗಳು ಎರಡನೇ ಸ್ಥಾನದಲ್ಲಿರುವ ಚೀನಾಕ್ಕೆ ಸವಾಲೊಡ್ಡಲು ಸಜ್ಜಾಗಿವೆ ಎಂದು ವರದಿ ತಿಳಿಸಿದೆ.

''ಹೌದು, ಆ್ಯಪ್‌ಗಳ ನಿಷೇಧದಿಂದಾಗಿ ಚೀನಾದ ಪಾಲು ಕುಸಿದಿದೆ. ಆದರೆ ಭಾರತೀಯ ಕಂಪನಿಗಳು ವರ್ಷದಿಂದ ವರ್ಷಕ್ಕೆ ಹೆಚ್ಚಿನ ಪಾಲನ್ನು ಪಡೆದುಕೊಳ್ಳುತ್ತಿರುವುದನ್ನು ನಾವು ಕಾಣಬಹುದು. 2018 ರಲ್ಲಿ, ಟಾಪ್ 200 ಆ್ಯಪ್‌ ಇನ್‌ಸ್ಟಾಲ್‌ಗಳಲ್ಲಿ ಭಾರತೀಯ ಕಂಪನಿಗಳ ಪಾಲು ಶೇಕಡಾ 37 ರಷ್ಟಿತ್ತು" ಎಂದು ಆಪ್ಸ್‌ಫ್ಲೈಯರ್ ಇಂಡಿಯಾದ ದೇಶೀಯ ಮ್ಯಾನೇಜರ್ ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.

ಸುಮಾರು 85 ಪ್ರತಿಶತದಷ್ಟು ಆ್ಯಪ್ ಇನ್‌ಸ್ಟಾಲ್‌ಗಳು ಭಾರತದ 2 ಮತ್ತು 3 ನೇ ಶ್ರೇಣಿ ನಗರಗಳಿಂದ ಬಂದಿದ್ದು, ಉಳಿದವುಗಳಲ್ಲಿ ಮಹಾನಗರಗಳು ಇವೆ ಎಂದು ವರದಿ ತಿಳಿಸಿದೆ.

English summary

Chinese Apps Market Fall To 29% : Indian Apps On The Rise

In the changing geopolitical climate, Chinese apps saw a setback as their market share plummeted to 29% in 2020 from 38% in 2019
Story first published: Wednesday, February 17, 2021, 19:56 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X