For Quick Alerts
ALLOW NOTIFICATIONS  
For Daily Alerts

ತಲಾ 1 ಬಿಲಿಯನ್ USD ಮೌಲ್ಯದ ಭಾರತದ 11 ಸ್ಟಾರ್ಟ್ ಅಪ್ ನಲ್ಲಿ ಚೀನಾ ಹೂಡಿಕೆ

|

ಭಾರತದಲ್ಲಿ 21 ಸ್ಟಾರ್ಟ್ ಅಪ್ ಗಳು ತಲಾ 1 ಬಿಲಿಯನ್ USDಗೂ ಹೆಚ್ಚು ಮೌಲ್ಯವನ್ನು ಹೊಂದಿದ್ದು, ಮತ್ತು 40ಕ್ಕೂ ಹೆಚ್ಚು ಕಂಪೆನಿಗಳನ್ನು ಭಾರತದ ಮೂಲದ ವ್ಯಕ್ತಿಗಳು ವಿದೇಶಗಳಲ್ಲಿ ಸ್ಥಾಪನೆ ಮಾಡಿದ್ದಾರೆ ಎಂದು ಮಂಗಳವಾರ ವರದಿ ಬಂದಿದೆ. ಇನ್ನು ಅಧ್ಯಯನದಿಂದ ತಿಳಿದುಬಂದ ಸಂಗತಿ ಏನೆಂದರೆ, ಚೈನೀಸ್ ಹೂಡಿಕೆದಾರರು ಭಾರತದ 11 ಸ್ಟಾರ್ಟ್ ಅಪ್ ಗಳಿಗೆ ಬೆಂಬಲವಾಗಿ ನಿಂತಿದ್ದಾರೆ.

21 ಸ್ಟಾರ್ಟ್ ಅಪ್ ಗಳು ಸೇರಿ ಅವುಗಳ ಮೌಲ್ಯ 73.2 ಬಿಲಿಯನ್ ಅಮೆರಿಕನ್ ಡಾಲರ್ ಆಗುತ್ತದೆ. ಸ್ಟಾರ್ಟ್ ಅಪ್ ಗಳ ವಿಚಾರಕ್ಕೆ ಬಂದರೆ ಭಾರತವು ನಾಲ್ಕನೇ ಅತಿದೊಡ್ಡ ದೇಶ. ಮೊದಲ ಮೂರು ಸ್ಥಾನದಲ್ಲಿ ಯು.ಎಸ್., ಚೀನಾ ಮತ್ತು ಯುನೈಟೆಡ್ ಕಿಂಗ್ ಡಮ್ ಇದೆ. ಇದು ಹ್ಯುರಾನ್ ಗ್ಲೋಬಲ್ ಯುನಿಕಾರ್ನ್ ಪಟ್ಟಿಯಲ್ಲಿನ ಮಾಹಿತಿ.

ಚೀನಾವು ಹೊರದೇಶದಲ್ಲಿ ಆರಂಭಿಸಿದ ಉದ್ಯಮದ ಸಂಖ್ಯೆ 16

ಚೀನಾವು ಹೊರದೇಶದಲ್ಲಿ ಆರಂಭಿಸಿದ ಉದ್ಯಮದ ಸಂಖ್ಯೆ 16

ಚೀನಾದ 227ರ ಒಟ್ಟು ಸಂಖ್ಯೆಗೆ ಹೋಲಿಸಿದರೆ ಭಾರತದ ಸ್ಟಾರ್ಟ್ ಅಪ್ (ನವೋದ್ಯಮ) ಸಂಖ್ಯೆ ಹತ್ತನೇ ಒಂದು ಭಾಗದಷ್ಟು ಮಾತ್ರ. ಇನ್ನು ಚೀನಾವು ಆ ದೇಶದಲ್ಲಿ ಬಿಟ್ಟು ಹೊರದೇಶದಲ್ಲಿ ಆರಂಭಿಸಿದ ಉದ್ಯಮದ ಸಂಖ್ಯೆ 16. ವಿಶ್ವದಾದ್ಯಂತ ಇರುವ ಭಾರತೀಯರು ಹೊಂದಿರುವ ನವೋದ್ಯಮದ ಮೌಲ್ಯ 99.6 ಬಿಲಿಯನ್ ಅಮೆರಿಕನ್ ಡಾಲರ್. ಆ ಪೈಕಿ ಮುಂಚೂಣಿಯಲ್ಲಿ ಇರುವುದು 'ರಾಬಿನ್ ಹುಡ್'. ಅದರ ಬಂಡವಾಳ ಹೂಡಿಕೆ 850 ಕೋಟಿ ಅಮೆರಿಕನ್ ಡಾಲರ್ ಇದೆ. ಭಾರತೀಯರು ಆರಂಭಿಸಿರುವ 61 ಸ್ಟಾರ್ಟ್ ಅಪ್ ಗಳಲ್ಲಿ ಮೂರನೇ ಎರಡು ಭಾಗದಷ್ಟು ಭಾರತದ ಹೊರಗೆ ಇದೆ. ಆ ಪೈಕಿ ಬಹುತೇಕ ಯುಎಸ್ ಎದಲ್ಲಿನ ಸಿಲಿಕಾನ್ ವ್ಯಾಲಿಯಲ್ಲಿ ಇದ್ದರೆ, 21 ಮಾತ್ರ ಭಾರತದಲ್ಲಿ ಇದೆ ಎಂದು ಹ್ಯುರಾನ್ ವರದಿಯಲ್ಲಿ ಇದೆ. ಇನ್ನು ವಿಶ್ವದ 29 ದೇಶಗಳಲ್ಲಿ ಮತ್ತು 145 ನಗರದಲ್ಲಿ 586 ಸ್ಟಾರ್ಟ್ ಅಪ್ ಗಳಿವೆ.

ಸ್ಟಾರ್ಟ್ ಅಪ್ ಗಳ ರಾಜಧಾನಿ ಬೆಂಗಳೂರು
 

ಸ್ಟಾರ್ಟ್ ಅಪ್ ಗಳ ರಾಜಧಾನಿ ಬೆಂಗಳೂರು

ಭಾರತದ 21 ಸ್ಟಾರ್ಟ್ ಅಪ್ ಗಳ ಪೈಕಿ ಮೂರರಲ್ಲಿ ಪೇಟಿಎಂ, ಓಯೋ ರೂಮ್ಸ್, ಬೈಜೂಸ್ ಓಲಾ ಕ್ಯಾಬ್ಸ್ ಮುಂತಾದವು ಇ ಕಾಮರ್ಸ್ ವ್ಯವಹಾರಗಳಲ್ಲಿ ಇವೆ. ಇನ್ನು ಭಾರತದಲ್ಲಿನ ಸ್ಟಾರ್ಟ್ ಅಪ್ ಗಳ ರಾಜಧಾನಿ ಬೆಂಗಳೂರು. ಅಂಥ 8 ಸ್ಟಾರ್ಟ್ ಅಪ್ ಗಳು ಬೆಂಗಳೂರಿನಲ್ಲೇ ಇವೆ ಎಂದು ವರದಿ ಹೇಳಿದೆ. ಹೊಚ್ಚ ಹೊಸ ಭಾರತೀಯ ಸ್ಟಾರ್ಟ್ ಅಪ್ ಅಂದರೆ, 2017ರಲ್ಲಿ ಆರಂಭಿಸಲಾದ ಓಲಾ ಎಲೆಕ್ಟ್ರಿಕ್. ಆ ನಂತರದ ಸ್ಥಾನಗಳಲ್ಲಿ ಉಡಾನ್ ಮತ್ತು ಸ್ವಿಗ್ಗಿ ಇದೆ. ನವೋದ್ಯಮದ ಸ್ಥಾನ ಪಡೆಯಲು ಭಾರತದಲ್ಲಿ ಏಳು ವರ್ಷ, ಚೀನಾದಲ್ಲಿ 5.5 ಹಾಗೂ ಯು.ಎಸ್.ನಲ್ಲಿ 6.5 ವರ್ಷಗಳು ಬೇಕಾಗುತ್ತದೆ.

IIT ವ್ಯಾಸಂಗ ಮಾಡಿದವರು ಆರಂಬಿಸಿದ ಸ್ಟಾರ್ಟ್ ಅಪ್ ಹೆಚ್ಚಿವೆ

IIT ವ್ಯಾಸಂಗ ಮಾಡಿದವರು ಆರಂಬಿಸಿದ ಸ್ಟಾರ್ಟ್ ಅಪ್ ಹೆಚ್ಚಿವೆ

ಅಧ್ಯಯನಗಳ ಪ್ರಕಾರ, ಚೈನೀಸ್ ಹೂಡಿಕೆದಾರರಾದ ಅಲಿಬಾಬ (5), ಟೆನ್ಸೆಂಟ್ (3) ಹಾಗೂ ಡಿಎಸ್ ಟಿ ಗ್ಲೋಬಲ್ (3) ಈ ಮೂರೂ ಸೇರಿ ಭಾರತದ 11 ಸ್ಟಾರ್ಟ್ ಅಪ್ ಗಳಲ್ಲಿ ಹೂಡಿಕೆ ಮಾಡಿವೆ. ಜಪಾನೀ ಹೂಡಿಕೆದಾರರಾದ ಸಾಫ್ಟ್ ಬ್ಯಾಂಕ್ 9 ಹೂಡಿಕೆಯಲ್ಲಿ ಮುಂಚೂಣಿಯಲ್ಲಿದ್ದರೆ, ಯುಎಸ್ ಎನಲ್ಲಿನ ಟೈಗರ್ ಗ್ಲೋಬಲ್ ಇಂಥ 5 ಸ್ಟಾರ್ಟ್ ಅಪ್ ನಲ್ಲಿ ಹೂಡಿಕೆ ಮಾಡಿದೆ. ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ (IIT) ವ್ಯಾಸಂಗ ಮಾಡಿ ಹೊರಬಂದವರು ಸ್ಟಾರ್ಟ್ ಅಪ್ ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಶುರು ಮಾಡಿದ್ದಾರೆ. 36 ಮಂದಿ ಐಐಟಿಗಳಿಂದ ವ್ಯಾಸಂಗ ಮಾಡಿದವರು. ಅದರಲ್ಲೂ IIT ದೆಹಲಿಯದು ಸಿಂಹಪಾಲು. ಆದರೆ ಲಿಂಗಾನುಪಾತದ ದೃಷ್ಟಿಯಿಂದ ಮಹಿಳೆಯರ ಸಂಖ್ಯೆ ಬಹಳ ಕಡಿಮೆ ಇದೆ. 104 ಪುರುಷರು ಸ್ಟಾರ್ಟ್ ಅಪ್ ಗಳ ಸ್ಥಾಪಕರಿದ್ದರೆ, ಮಹಿಳೆಯರು 5 ಮಂದಿ ಮಾತ್ರ ಇದ್ದಾರೆ.

English summary

Chinese Investors Invested In 11 Start Ups Which Has More Than 1 Billion USD Valuation

Here is an interesting report that, Chinese 3 investors invested in 11 Indian startups which has more than 1 billion USD valuation.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X