For Quick Alerts
ALLOW NOTIFICATIONS  
For Daily Alerts

ಜಿಎಸ್‌ಟಿ ಸಚಿವರ ಸಮಿತಿಯ ನೇತೃತ್ವ ಸಿಎಂ ಬೊಮ್ಮಾಯಿ, ಅಜಿತ್‌ಗೆ

|

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕೌನ್ಸಿಲ್‌ಗೆ ತೆರಿಗೆ ದರಗಳ ಬಗ್ಗೆ ಶಿಫಾರಸ್ಸು ಮಾಡುವ ರಾಜ್ಯ ಸಚಿವರ ಸಮಿತಿಯ ನೇತೃತ್ವವನ್ನು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಹಿಸಿಕೊಳ್ಳಲಿದ್ದಾರೆ. ಜಿಎಸ್‌ಟಿ ವ್ಯವಸ್ಥೆಯ ಸುಧಾರಣೆಗಳ ಕುರಿತಾಗಿ ಇರುವ ಸಚಿವರ ಸಮಿತಿಯನ್ನು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮುನ್ನಡೆಸಲಿದ್ದಾರೆ ಎಂದು ಎರಡು ಅಧಿಕೃತ ಆದೇಶದಲ್ಲಿ ತಿಳಿಸಲಾಗಿದೆ.

ತೆರಿಗೆ ದರಗಳ ಬಗ್ಗೆ ಸರಿಯಾದ ನಿರ್ಧಾರವನ್ನು ಕೈಗೊಳ್ಳಲು, ತೆರಿಗೆ ರಚನೆಯನ್ನು ಸರಳಗೊಳಿಸಲು, ಸರಕು ಮತ್ತು ಸೇವೆಗಳ ವರ್ಗೀಕರಣಕ್ಕೆ ಸಂಬಂಧಿಸಿದ ವಿವಾದಗಳ ಬಗ್ಗೆ ಸರಿಯಾದ ನಿರ್ಧಾರ ಕೈಗೊಳ್ಳಲು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆದಾಯ ಸಂಗ್ರಹವನ್ನು ಹೆಚ್ಚಿಸಲು ಬೇಕಾದ ಅಗತ್ಯ ಸಲಹೆಗಳನ್ನು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃ‌ತ್ವದ ರಾಜ್ಯ ಸಚಿವರ ಸಮಿತಿಯು ನೀಡಲಿದೆ.

ಆನ್‌ಲೈನ್‌ ಶಾಪಿಂಗ್‌ಗೆ ಯಾವ ಕ್ರೆಡಿಟ್‌ ಕಾರ್ಡ್ ಉತ್ತಮ?ಆನ್‌ಲೈನ್‌ ಶಾಪಿಂಗ್‌ಗೆ ಯಾವ ಕ್ರೆಡಿಟ್‌ ಕಾರ್ಡ್ ಉತ್ತಮ?

ಇನ್ನು ಬಸವರಾಜ ಬೊಮ್ಮಾಯಿ ನೇತೃ‌ತ್ವದ ರಾಜ್ಯ ಸಚಿವರ ಸಮಿತಿಯು ತಕ್ಷಣಕ್ಕೆ ಜಾರಿಗೆ ತರಬಹುದಾದದ ಬದಲಾವಣೆಗಳ ಬಗ್ಗೆಯೂ ಸಲಹೆಯನ್ನು ನೀಡಲಿದೆ. ಹಾಗೆಯೇ ಮುಂಬರುವ ದಿನಗಳಲ್ಲಿ ಜಿಎಸ್‌ಟಿ ವಿಚಾರದಲ್ಲಿ ತರಬಹುದಾದ ಬದಲಾವಣೆಗಳ ಬಗ್ಗೆ ಒಂದು ಕಣ್ಣೋಟವನ್ನು ಸಲಹೆಯಾಗಿ ನೀಡಲಿದೆ. ಆದೇಶದ ಪ್ರಕಾರ ಈ ಸಮಿತಿಯು ತನ್ನ ವರದಿಯನ್ನು ನೀಡಲು ಎರಡು ತಿಂಗಳುಗಳ ಸಮಯಾವಕಾಶವನ್ನು ನೀಡಲಾಗಿದೆ.

 ಜಿಎಸ್‌ಟಿ ಸಚಿವರ ಸಮಿತಿಯ ನೇತೃತ್ವ ಸಿಎಂ ಬೊಮ್ಮಾಯಿ, ಅಜಿತ್‌ಗೆ

ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಈ ಸಮಿತಿಯಲ್ಲಿ ಬಿಹಾರ ಉಪಮುಖ್ಯಮಂತ್ರಿ ತಾರಕಿಶೋರ್‌ ಪ್ರಸಾದ್‌, ಕೇರಳ ಹಣಕಾಸು ಸಚಿವ ಕೆ ಎನ್‌ ಬಾಲಗೋಪಾಲ, ಪಶ್ಚಿಮ ಬಂಗಾಳ ಹಣಕಾಸು ಸಚಿವ ಅಮಿತ್‌ ಮಿತ್ರಾ, ಗೋವಾ ಸಂಚಾರ, ಪಂಚಾಯತ್‌ ರಾಜ್‌ ಹಾಗೂ ವಸತಿ ಸಚಿವ ಮೌವಿನ್ ಗೊಡಿನ್ಹೋ, ರಾಜಸ್ಥಾನ ನಗರ ಅಭಿವೃದ್ಧಿ ಹಾಗೂ ವಸತಿ ಸಚಿವ ಶಾಂತಿ ಕುಮಾರ್‌ ಧಾರಿವಾಲ ಹಾಗೂ ಉತ್ತರ ಪ್ರದೇಶ ಹಣಕಾಸು ಸಚಿವ ಸುರೇಶ್‌ ಕುಮಾರ್‌ ಖನ್ನಾ ಇರಲಿದ್ದಾರೆ ಎಂದು ಈ ಆದೇಶದಲ್ಲಿ ತಿಳಿಸಲಾಗಿದೆ.

ಈ ತಿಂಗಳ ಆರಂಭದಲ್ಲಿ ಜಿಎಸ್‌ಟಿ ಕೌನ್ಸಿಲ್‌ನ 45 ನೇ ಸಭೆಯಲ್ಲಿ ನಿರ್ಧರಿಸಿದಂತೆ ಎರಡು ಸಮಿತಿಗಳನ್ನು ಸ್ಥಾಪನೆ ಮಾಡಲಾಗಿದೆ. ಈ ಸಮಿತಿಯು "GST ಅಡಿಯಲ್ಲಿ ವಿನಾಯಿತಿ ಪಡೆದ ಸರಕು ಮತ್ತು ಸೇವೆಗಳ ಪೂರೈಕೆಯನ್ನು ಪರಿಶೀಲಿಸುತ್ತದೆ." ತೆರಿಗೆ ಆಧಾರವನ್ನು ವಿಸ್ತರಿಸಲು ಮತ್ತು ಇನ್ಪುಟ್ ತೆರಿಗೆ ಕ್ರೆಡಿಟ್ ಸರಪಳಿಯನ್ನು ಮುರಿಯುವುದನ್ನು ತೊಡೆದುಹಾಕಲು, ಆದೇಶವು ಉಲ್ಲೇಖ ಮಾಡಿದೆ.

ಎಸ್‌ಬಿಐ Vs ಅಂಚೆ ಕಚೇರಿ ಎಫ್‌ಡಿ: ಎಲ್ಲಿ ಹೂಡಿಕೆ ಮಾಡಿದರೆ ಸೂಕ್ತ?ಎಸ್‌ಬಿಐ Vs ಅಂಚೆ ಕಚೇರಿ ಎಫ್‌ಡಿ: ಎಲ್ಲಿ ಹೂಡಿಕೆ ಮಾಡಿದರೆ ಸೂಕ್ತ?

ಅಜಿತ್ ಪವಾರ್ ನೇತೃತ್ವದ ಜಿಎಸ್‌ಟಿ ವ್ಯವಸ್ಥೆಯ ಸುಧಾರಣೆಗಳ ಕುರಿತ ಎರಡನೇ ಸಮಿತಿಯು ಒಟ್ಟು ಏಳು ಸದಸ್ಯರನ್ನು ಹೊಂದಿದೆ. ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಹರಿಯಾಣ ಉಪಮುಖ್ಯಮಂತ್ರಿ ದುಶ್ಯಂತ್ ಚೌಟಾಲ, ಆಂಧ್ರಪ್ರದೇಶದ ಹಣಕಾಸು ಮತ್ತು ಯೋಜನಾ ಸಚಿವ ಬುಗ್ಗನಾ ರಾಜೇಂದ್ರನಾಥ್, ಅಸ್ಸಾಂ ಹಣಕಾಸು ಸಚಿವ ಅಜಂತ ನಿಯೋಗ್, ಛತ್ತೀಸ್‌ಗಢದ ವಾಣಿಜ್ಯ ತೆರಿಗೆ ಸಚಿವ ಟಿ.ಎಸ್. ಸಿಂಗ್ ದೇವ್, ಒಡಿಶಾ ಹಣಕಾಸು ಮತ್ತು ಅಬಕಾರಿ ಸಚಿವ ನಿರಂಜನ್ ಪುರಿ ಮತ್ತು ತಮಿಳುನಾಡು ಹಣಕಾಸು ಮತ್ತು ಮಾನವ ಸಂಪನ್ಮೂಲ ನಿರ್ವಹಣೆ ಸಚಿವ ಪಳನಿವೇಲ್ ತ್ಯಾಗ ರಾಜನ್ ಅಜಿತ್ ಪವಾರ್ ನೇತೃತ್ವದ ಸಮಿತಿಯಲ್ಲಿ ಇರಲಿದ್ದಾರೆ ಎಂದು ಆದೇಶವು ತಿಳಿಸಿದೆ.

ಈ ಸಮಿತಿಯು ತೆರಿಗೆ ವಂಚನೆಯ ಸಾಧ್ಯತೆಯ ಬಗ್ಗೆ ಪತ್ತೆ ಹಚ್ಚಲಿದೆ, ತೆರಿಗೆ ಸೋರಿಕೆಯನ್ನು ನಿವಾರಿಸಲು ವ್ಯಾಪಾರ ಪ್ರಕ್ರಿಯೆಗಳು, ಐಟಿ ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ಸೂಚನೆ ನೀಡುತ್ತದೆ. ಇದು ಕೇಂದ್ರ ಮತ್ತು ರಾಜ್ಯ ತೆರಿಗೆ ಆಡಳಿತಗಳ ನಡುವೆ ಉತ್ತಮ ಸಮನ್ವಯದ ಮಾರ್ಗಗಳನ್ನು ಸೂಚಿಸುತ್ತದೆ. "ಐಟಿ ವ್ಯವಸ್ಥೆಗಳು ಸ್ಥಿರಗೊಂಡಿವೆ ಎಂದು ಕೌನ್ಸಿಲ್ ಒಪ್ಪಿಕೊಂಡಿದೆ. ಜಿಎಸ್‌ಟಿ ಐಟಿ ವ್ಯವಸ್ಥೆಯಲ್ಲಿ ಐಟಿ ಆಧಾರಿತ ತಪಾಸಣೆ ಮತ್ತು ಸಮತೋಲನವನ್ನು ಪರಿಚಯಿಸುವ ಅವಶ್ಯಕತೆಯಿದೆ," ಎಂದು ಆದೇಶದಲ್ಲಿ ತಿಳಿಸಲಾಗಿದೆ.

English summary

CM Basavaraj Bommai, Ajit Pawar to lead GST ministerial panels

Karnataka chief minister Basavaraj Bommai and Maharashtra deputy chief minister Ajit Pawar to lead GST ministerial panels.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X