For Quick Alerts
ALLOW NOTIFICATIONS  
For Daily Alerts

ಸಿಎನ್‌ಜಿ ಬೆಲೆ ಮತ್ತೆ ಏರಿಕೆ, ಪ್ರಮುಖ ನಗರಗಳ ದರ ಪಟ್ಟಿ

|

ನವದೆಹಲಿ, ಮೇ 15: ಜಾಗತಿಕವಾಗಿ ಕಚ್ಚಾತೈಲ ಬೆಲೆ ಏರಿಳಿತದ ನಡುವೆ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸ್ಥಿರವಾಗಿದ್ದರೂ, ಸಂಕುಚಿತ ನೈಸರ್ಗಿಕ ಅನಿಲದ (ಸಿಎನ್‌ಜಿ) ಬೆಲೆ ಏರಿಕೆ ಕಾಣುತ್ತಿದೆ.

ಸಿಎನ್‌ಜಿ ಬೆಲೆಗಳನ್ನು ಏಳು ಬಾರಿ ಪರಿಷ್ಕರಿಸಲಾಗಿದೆ. ಏಪ್ರಿಲ್ 1ರಿಂದ ಕೆಜಿಗೆ 6.6 ರೂ., ಈ ವರ್ಷ ಸುಮಾರು 10 ರೂ. ಕೊನೆಯ ಹೆಚ್ಚಳವು ಏಪ್ರಿಲ್ 4 ರಂದು ಕೆಜಿಗೆ 2.50 ರೂ. ಆಗಿತ್ತು. ಏಪ್ರಿಲ್ 1 ರಂದು, ಸಿಎನ್‌ಜಿ ಚಿಲ್ಲರೆ ದರವು ಪ್ರತಿ ಕೆಜಿಗೆ 80 ಪೈಸೆಗಳಷ್ಟು ಹೆಚ್ಚಾಗಿದೆ. ಮೇ 15ರಂದು ಸಿಎನ್‌ಜಿ ಬೆಲೆ ಮತ್ತೊಮ್ಮೆ ಏರಿಕೆ ಕಂಡಿದೆ. ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ (ಐಜಿಎಲ್) ದೆಹಲಿ-ಎನ್‌ಸಿಆರ್‌ನಲ್ಲಿ Compressed Natural Gas (CNG) ಬೆಲೆಯನ್ನು ಪ್ರತಿ ಕೆಜಿಗೆ 2.50 ರೂ.ಗಳಷ್ಟು ಹೆಚ್ಚಿಸಲಾಗಿದೆ.

ಬೆಲೆ ಪರಿಷ್ಕರಣೆ ಬಳಿಕ ದೆಹಲಿಯಲ್ಲಿ CNG ಈಗ ಪ್ರತಿ ಕೆಜಿಗೆ 73.61 ರು, ಗಾಜಿಯಾಬಾದ್, ನೋಯ್ಡಾ(76.17 ರು) ಮತ್ತು ಗ್ರೇಟರ್ ನೋಯ್ಡಾದಲ್ಲಿ, ಸಿಎನ್‌ಜಿ ಬೆಲೆ ಕೆಜಿಗೆ 76.17 ರೂ.ಗೆ ಏರಿಕೆಯಾಗಿದ್ದು, ಗುರುಗ್ರಾಮದಲ್ಲಿ ಕೆಜಿಗೆ 81.94 ರೂ. ಇದೆ. ರೇವಾರಿಯಲ್ಲಿ, CNG ಪ್ರತಿ ಕೆಜಿಗೆ 84.07 ರೂ. ಕರ್ನಾಲ್ ಮತ್ತು ಕೈತಾಲ್‌ನಲ್ಲಿ ಕೆಜಿಗೆ 82.27 ರೂ; ಹೆಚ್ಚಳದ ನಂತರ ಕಾನ್ಪುರ, ಹಮೀರ್‌ಪುರ ಮತ್ತು ಫತೇಪುರ್‌ನಲ್ಲಿ 85.40 ಮತ್ತು ಅಜ್ಮೀರ್, ಪಾಲಿ ಮತ್ತು ರಾಜ್‌ಸಮಂದ್‌ನಲ್ಲಿ 83.88 ರೂ ಇದೆ.

ಸಿಎನ್‌ಜಿ ಬೆಲೆ ಮತ್ತೆ ಏರಿಕೆ, ಪ್ರಮುಖ ನಗರಗಳ ದರ ಪಟ್ಟಿ

ಕಳೆದ ವರ್ಷ ಅಕ್ಟೋಬರ್‌ನಿಂದ ದೇಶೀಯ ಮತ್ತು ಅಂತಾರಾಷ್ಟ್ರೀಯ ಅನಿಲ ಬೆಲೆಗಳು ಏರಲು ಪ್ರಾರಂಭಿಸಿದ ನಂತರ ನಗರ ಅನಿಲ ವಿತರಕರು ನಿಯತಕಾಲಿಕವಾಗಿ ಬೆಲೆಗಳನ್ನು ಹೆಚ್ಚಿಸುತ್ತಿದ್ದಾರೆ. ಅಕ್ಟೋಬರ್ 1ರಂದು ಸರ್ಕಾರವು ನೈಸರ್ಗಿಕ ಅನಿಲ ದರವನ್ನು ಶೇ 62ರಷ್ಟು ಏರಿಕೆ ಮಾಡಿತ್ತು. ದೇಶಿ ಅನಿಲ ಬೆಲೆ ಏರಿಕೆಯು 2.9 USD million British thermal units (mmBtu) ನಿಂದ 1.79 ಯುಎಸ್ ಡಾಲರ್ ತನಕ ಏರಿಕೆ ಕಂಡಿತ್ತು. ಈ ತಿಂಗಳಲ್ಲಿ ನಾಲ್ಕನೇ ಮತ್ತು ಮಾರ್ಚ್ 7 ರಿಂದ 12 ನೇ ಬೆಲೆ ಏರಿಕೆಯಾಗಿದೆ. ಹೆಚ್ಚಿನ ದರ ವಿವರ ತಿಳಿಯಲು ಕ್ಲಿಕ್ ಮಾಡಿ

English summary

CNG Rates Hiked In Delhi-NCR, Other Cities From Today: Check Details

With effect from May 15, 2022 (Sunday) at 6 am, the Indraprastha Gas Limited (IGL) has increased CNG rates by Rs. 2 per kg in Delhi-NCR. Check Details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X