For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿ 30,000 ಹೊಸ ಉದ್ಯೋಗಿಗಳನ್ನ ನೇಮಕ ಮಾಡಿಕೊಳ್ಳಲಿದೆ ಕಾಗ್ನಿಜೆಂಟ್

|

ಪ್ರಮುಖ ಐಟಿ ಕಂಪನಿಗಳಲ್ಲಿ ಒಂದಾದ ಕಾಗ್ನಿಜೆಂಟ್‌ ಈಗಾಗಲೇ ಲಕ್ಷಾಂತರ ಉದ್ಯೋಗಿಗಳನ್ನ ಹೊಂದಿದೆ. ಮುಂದಿನ ಬೇಡಿಕೆಗೆ ಅನುಸಾರವಾಗಿ ಈ ವರ್ಷ ಒಂದು ಲಕ್ಷ ಪರಿಣಿತರನ್ನು ನೇಮಕ ಮಾಡಿಕೊಳ್ಳಲು ಯೋಜನೆ ಮಾಡಿದೆ. ಇದರಲ್ಲಿ 30,000 ಹೊಸಬರನ್ನು ನೇಮಿಸಿಕೊಳ್ಳುತ್ತಿದೆ.

 

ಇತ್ತೀಚೆಗೆ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಭಾರಿ ನೇಮಕಾತಿಗಳು ನಡೆದಿವೆ. ಇತ್ತೀಚಿನ ಕಾರ್ಪೊರೇಟ್ ಬೇಡಿಕೆ ಗಣನೀಯವಾಗಿ ಬೆಳೆದಿದೆ. ಇದರೊಂದಿಗೆ ಐಟಿ ಕಂಪನಿಗಳು ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳುತ್ತಿವೆ. ಕಾಗ್ನಿಜೆಂಟ್ ಕೂಡ ಈ ವರ್ಷ ದೊಡ್ಡ ಪ್ರಮಾಣದ ನೇಮಕಾತಿಗಳನ್ನು ಮಾಡುತ್ತಿದೆ.

ಉದ್ಯೋಗಿಗಳ ಕೊರತೆ ಎದುರಿಸುತ್ತಿದೆ

ಉದ್ಯೋಗಿಗಳ ಕೊರತೆ ಎದುರಿಸುತ್ತಿದೆ

ಕಾಗ್ನಿಜೆಂಟ್ ಉದ್ಯೋಗಿಗಳ ಕೊರತೆಯನ್ನು ಎದುರಿಸುತ್ತಿದ್ದು, ಕಂಪನಿಯಿಂದ ಹೆಚ್ಚಿನ ಸಂಖ್ಯೆಯ ಉದ್ಯೋಗಿಗಳು ಬೇರೆ ಕಂಪನಿಗಳಿಗೆ ಸ್ಥಳಾಂತರಗೊಳ್ಳುತ್ತಿದ್ದಾರೆ. ಇದರೊಂದಿಗೆ ಹೆಚ್ಚಿನ ನೇಮಕಾತಿಗೆ ಕಂಪನಿಯು ಮುಂದಾಗಿದೆ. ನೌಕರರ ವಲಸೆಯ ಹಿನ್ನೆಲೆಯಲ್ಲಿ ಈ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಕಂಪನಿಯು ಈ ವರ್ಷ 1,00,000 ಜನರನ್ನು ನೇಮಿಸಿಕೊಳ್ಳುತ್ತಿದೆ. ಎಂದು ಗುರುವಾರ ಪ್ರಕಟಿಸಿದೆ. 2022 ರಲ್ಲಿ 45,000 ಹೊಸ ಪದವೀಧರರನ್ನು ಸೇರಿಸಲಾಗುವುದು ಎಂದು ಅದು ಬಹಿರಂಗಪಡಿಸಿದೆ.

ಭಾರತದಲ್ಲಿ 2 ಲಕ್ಷ ಉದ್ಯೋಗಿಗಳು

ಭಾರತದಲ್ಲಿ 2 ಲಕ್ಷ ಉದ್ಯೋಗಿಗಳು

ಕಂಪನಿಯ ಸಿಇಒ ಬ್ರಿಯಾನ್ ಹ್ಯಾಂಪ್‌ಶೈರ್ ಜೂನ್ ತ್ರೈಮಾಸಿಕ ಫಲಿತಾಂಶದ ನಂತರ ನಡೆದ ಸಭೆಯಲ್ಲಿ ಮಾತನಾಡಿದ್ದು, ನೌಕರರ ವಲಸೆ ಒಂದು ಪ್ರಮುಖ ಕಾಳಜಿ ಎಂದು ಹೇಳಲಾಗುತ್ತದೆ. ಕಂಪನಿಯಿಂದ ವಲಸೆ ಹೋಗುವ ಪ್ರಮಾಣ ಜೂನ್ ತ್ರೈಮಾಸಿಕದಲ್ಲಿ ದಾಖಲೆಯ 31 ಪ್ರತಿಶತಕ್ಕೆ ಏರಿತು. ಕಂಪನಿಯು ಪ್ರಸ್ತುತ ವಿಶ್ವದಾದ್ಯಂತ 3 ಲಕ್ಷ ಉದ್ಯೋಗಿಗಳನ್ನು ಮತ್ತು ಭಾರತದಲ್ಲಿ 2 ಲಕ್ಷ ಉದ್ಯೋಗಿಗಳನ್ನು ಹೊಂದಿದೆ. ವಲಸೆ ಕಡಿಮೆ ಮಾಡಲು ವೇತನ ಹೆಚ್ಚಳ, ಬಡ್ತಿ, ಕೌಶಲ್ಯ ಅಭಿವೃದ್ಧಿ, ಮುಂತಾದ ಕ್ರಮಗಳನ್ನು ಜಾರಿಗೆ ತರಲಾಗುತ್ತಿದೆ.

ರೈಲ್ವೆ ಟಿಕೆಟ್ ಬುಕ್ ಮಾಡುವ ಮುನ್ನ ಇಲ್ಲಿ ಗಮನಿಸಿ: 1 ಲಕ್ಷ ರೂಪಾಯಿ ಗೆಲ್ಲುವ ಅವಕಾಶ!

ಕಂಪನಿಯ ನಿವ್ವಳ ಲಾಭ
 

ಕಂಪನಿಯ ನಿವ್ವಳ ಲಾಭ

ಏತನ್ಮಧ್ಯೆ, ಕಂಪನಿಯು ಜೂನ್ ತ್ರೈಮಾಸಿಕದಲ್ಲಿ 512 ಮಿಲಿಯನ್ ನಿವ್ವಳ ಲಾಭವನ್ನು ಗಳಿಸಿದೆ. ಇದು 2020 ರ ಇದೇ ತ್ರೈಮಾಸಿಕದಲ್ಲಿ ಗಳಿಸಿದ ನಿವ್ವಳ ಲಾಭ $ 361 ಮಿಲಿಯನ್‌ಗಿಂತ 41.8 ರಷ್ಟು ಹೆಚ್ಚಳವಾಗಿದೆ. ಕಂಪನಿಯ ಆದಾಯವು 400 ಬಿಲಿಯನ್‌ನಿಂದ ಶೇಕಡಾ 14.6ರಷ್ಟು ಏರಿಕೆಯಾಗಿ 460 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ.

40,000 ಉದ್ಯೋಗಿಗಳನ್ನ ನೇಮಿಸಿಕೊಳ್ಳಲಿದೆ ಟಿಸಿಎಸ್‌

40,000 ಉದ್ಯೋಗಿಗಳನ್ನ ನೇಮಿಸಿಕೊಳ್ಳಲಿದೆ ಟಿಸಿಎಸ್‌

ಇತ್ತೀಚೆಗಷ್ಟೇ 5 ಲಕ್ಷ ಉದ್ಯೋಗಿಗಳ ಗಡಿ ದಾಟಿದ ದೇಶದ ಅತಿದೊಡ್ಡ ಐಟಿ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಹಣಕಾಸು ವರ್ಷ 2022-23ರಲ್ಲಿ ಬರೋಬ್ಬರಿ 40,000 ಹೊಸ ಉದ್ಯೋಗಿಗಳನ್ನ ನೇಮಕ ಮಾಡಿಕೊಳ್ಳಲಿದೆ.

ಹೌದು ಟಿಸಿಎಸ್ 2021-22ರ ಆರ್ಥಿಕ ವರ್ಷದಲ್ಲಿ ಭಾರತದ ಕ್ಯಾಂಪಸ್‌ಗಳಿಂದ 40,000 ಕ್ಕೂ ಹೆಚ್ಚು ಫ್ರೆಶರ್‌ಗಳನ್ನು ನೇಮಿಸಿಕೊಳ್ಳಲಿದೆ. 2020ರಲ್ಲಿ 40,000 ಪದವೀಧರರನ್ನು ಕ್ಯಾಂಪಸ್‌ಗಳಿಂದ ನೇಮಕ ಮಾಡಿಕೊಂಡಿದ್ದ ಟಿಸಿಎಸ್, ಅಷ್ಟೇ ಪ್ರಮಾಣದಲ್ಲಿ ಉದ್ಯೋಗಗಳ ನೇಮಕಾತಿಗೆ ಮುಂದಾಗಿದೆ.

ಕೊರೊನಾವೈರಸ್ ಸಾಂಕ್ರಾಮಿಕ ನಿರ್ಬಂಧಗಳ ನಡುವೆ ನೇಮಕಾತಿಯಲ್ಲಿ ಯಾವುದೇ ತೊಂದರೆಗಳನ್ನುಂಟು ಮಾಡುವುದಿಲ್ಲ ಎಂದು ಕಂಪನಿಯ ಜಾಗತಿಕ ಮಾನವ ಸಂಪನ್ಮೂಲ ಮುಖ್ಯಸ್ಥ ಮಿಲಿಂದ್ ಲಕ್ಕಾಡ್ ಹೇಳಿದ್ದಾರೆ. ಕಳೆದ ವರ್ಷ 40,000 ನೇಮಕಾತಿಗೆ ಒಟ್ಟು 3.60 ಲಕ್ಷ ಫ್ರೆಶರ್‌ಗಳು ಪ್ರವೇಶ ಪರೀಕ್ಷೆಗೆ ಹಾಜರಾಗಿದ್ದರು.

500 ರಿಂದ 600 ಜನರನ್ನು ನೇಮಕ ಮಾಡಿಕೊಳ್ಳಲಿದೆ ಹ್ಯಾಪಿಯೆಸ್ಟ್ ಮೈಂಡ್

500 ರಿಂದ 600 ಜನರನ್ನು ನೇಮಕ ಮಾಡಿಕೊಳ್ಳಲಿದೆ ಹ್ಯಾಪಿಯೆಸ್ಟ್ ಮೈಂಡ್

ಬೆಂಗಳೂರು ಮೂಲದ ಐಟಿ ಸಂಸ್ಥೆ ಹ್ಯಾಪಿಯೆಸ್ಟ್ ಮೈಂಡ್ಸ್ ಮುಂದಿನ ತ್ರೈಮಾಸಿಕದಲ್ಲಿ 500 ರಿಂದ 600 ಜನರನ್ನು, ಫ್ರೆಶರ್ಸ್ ಮತ್ತು ಪರಿಣಿತರ ಮಿಶ್ರಣವನ್ನು ಕೂಡಿದ ಉದ್ಯೋಗಿಗಳನ್ನ ನೇಮಿಸಿಕೊಳ್ಳುತ್ತದೆ ಮತ್ತು 100 ಪ್ರತಿಶತ ವೇರಿಯಬಲ್ ವೇತನ ಮತ್ತು ಎರಡಂಕಿ ಹೈಕ್ ನೀಡಲು ಯೋಜಿಸಿದೆ.

English summary

Cognizant To Hire 1 Lakh New Employees and 30,000 Freshers in 2021

Cognizant expects to welcome around 30,000 new graduates this year and is planning to make 45,000 offers to freshers in India for 2022
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X