For Quick Alerts
ALLOW NOTIFICATIONS  
For Daily Alerts

ಕಾಗ್ನಿಜೆಂಟ್ 12 ಸಾವಿರ ಉದ್ಯೋಗ ಕಡಿತ ಮಾಡಲಿದೆ

ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಪ್ರಮುಖ ಸಂಸ್ಥೆ ಕಾಗ್ನಿಜೆಂಟ್ "2020 ಫಿಟ್ ಫಾರ್ ಗ್ರೋತ್" ಯೋಜನೆಯ ಭಾಗವಾಗಿ ಉದ್ಯೋಗ ಕಡಿತ ಮುಂದುವರಿಸುವುದಾಗಿ ಬುಧವಾರ ಪ್ರಕಟಿಸಿದೆ.

|

ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಪ್ರಮುಖ ಸಂಸ್ಥೆ ಕಾಗ್ನಿಜೆಂಟ್ "2020 ಫಿಟ್ ಫಾರ್ ಗ್ರೋತ್" ಯೋಜನೆಯ ಭಾಗವಾಗಿ ಉದ್ಯೋಗ ಕಡಿತ ಮುಂದುವರಿಸುವುದಾಗಿ ಬುಧವಾರ ಪ್ರಕಟಿಸಿದೆ.
ಕಾಗ್ನಿಜೆಂಟ್ ಮುಂಬರುವ ತ್ರೈಮಾಸಿಕಗಳಲ್ಲಿ "ವಿಶ್ವಾದ್ಯಂತ ಸುಮಾರು 10 ರಿಂದ 12 ಸಾವಿರ ಉದ್ಯೋಗಿಗಳನ್ನು ಕಡಿತ ಮಾಡಲಿದೆ. ಇದು ಮಧ್ಯಮ ಹಂತದಿಂದ ಹಿರಿಯ ಮಟ್ಟದವರೆಗಿನ ಉದ್ಯೋಗಿಗಳನ್ನು ತೆಗೆದುಹಾಕುವ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ವರದಿ ಮಾಡಿದೆ.

ಕಾಗ್ನಿಜೆಂಟ್ 12 ಸಾವಿರ ಉದ್ಯೋಗ ಕಡಿತ ಮಾಡಲಿದೆ

12,000 ಉದ್ಯೋಗಿಗಳ ಕಡಿತ
ಕಂಪನಿಯು '2020 ಫಿಟ್ ಫಾರ್ ಗ್ರೋತ್ ಪ್ಲಾನ್' ಅಡಿಯಲ್ಲಿ ಎರಡು ವರ್ಷಗಳವರೆಗೆ ಕಾರ್ಯಾಚರಣೆ ನಡೆಯುವ ನಿರೀಕ್ಷೆಯಿದೆ. ಕಾಗ್ನಿಜೆಂಟ್ ಕಾರ್ಯನಿರ್ವಹಿಸುವ ವಿಧಾನವನ್ನು ಸರಳೀಕರಿಸಲು, ಅದರ ವೆಚ್ಚ ಕಡಿಮೆ ಮಾಡಲು ಮತ್ತು ಹೂಡಿಕೆ ಮಾಡಲು ಈ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ. ಈ ಯೋಜನೆಯ ಭಾಗವಾಗಿ, ಕಂಪನಿಯು 10,000 ರಿಂದ 12,000 ಮಧ್ಯಮದಿಂದ ಹಿರಿಯ ಮಟ್ಟದ ಉದ್ಯೋಗಿಗಳನ್ನು ತೆಗೆದುಹಾಕಲಿದೆ.

ಡಿಜಿಟಲ್ ಡ್ರೈವ್ ಎಫೆಕ್ಟ್
ಜಾಗತಿಕವಾಗಿ ಭವಿಷ್ಯದ ಬೆಳವಣಿಗೆ ಡಿಜಿಟಲ್‌ನಲ್ಲಿದೆ ಇದು ನಂಬಿರುವ ಕಂಪನಿಗಳು ಡೇಟಾ, ಡಿಜಿಟಲ್ ಎಂಜಿನಿಯರಿಂಗ್, ಕ್ಲೌಡ್ ಮತ್ತು ಇಂಟರ್ನೆಟ್ ಆಫ್ ಥಿಂಗ್ಸ್ (ಐಒಟಿ) ಎಂಬ ಪ್ರಮುಖ ಕ್ಷೇತ್ರಗಳಲ್ಲಿ ಸಾಮರ್ಥ್ಯ ಪಣಕ್ಕಿಟ್ಟಿವೆ. ಈ ನಾಲ್ಕು ಕ್ಷೇತ್ರಗಳು ಗ್ರಾಹಕರಿಗೆ ತಮ್ಮ ಡೇಟಾವನ್ನು ಕಾರ್ಯಾಚರಣೆಯ ಅಂತರಂಗದಲ್ಲಿ ಇರಿಸಲು, ತಮ್ಮ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಲು, ಹೊಸತನ ಸಾಧಿಸಲು, ಡೇಟಾ ಸಂರಕ್ಷಣೆ ಮತ್ತು ವೆಚ್ಚವನ್ನು ಕಡಿಮೆ ಮಾಡಲು ಅನುವು ಮಾಡಿಕೊಡುತ್ತದೆ. ಉದ್ಯಮದ ಕ್ಲೈಂಟ್‌ಗಳು ತಮ್ಮ ಡೇಟಾವನ್ನು ಸಂಗ್ರಹಿಸಲು, ನಿರ್ವಹಿಸಲು, ವರದಿ ಮಾಡಲು, ವಿಶ್ಲೇಷಿಸಲು ಮತ್ತು ಮರುಬಳಕೆ ಮಾಡಲು ತ್ವರಿತವಾಗಿ ಉತ್ತಮಗೊಳ್ಳಬೇಕು.

ಮಾರಾಟದಲ್ಲಿ ಹೂಡಿಕೆ
ಕಂಪನಿಯು ತನ್ನ ಆಂತರಿಕ ಕಲಿಕ ಸಂಸ್ಥೆಯಾದ ಕಾಗ್ನಿಜಂಟ್ ಅಕಾಡೆಮಿ ಮೇಲೆ ಹೂಡಿಕೆ ಮಾಡುತ್ತಿದೆ. ಕಂಪನಿಯ ಆಂತರಿಕ ಬೆಳವಣಿಗೆಗಾಗಿ, ಡಿಜಿಟಲ್ ತರಬೇತಿಯನ್ನು ಇಲ್ಲಿ ನೀಡಲಾಗುತ್ತದೆ. ಆಟೋಮೆಷನ್, ಮಾರ್ಕೆಟಿಂಗ್ ಹಾಗೂ ಬ್ರ್ಯಾಂಡಿಂಗ್ ಮೇಲೆ ಹೂಡಿಕೆ ಹೆಚ್ಚು ಮಾಡಲಾಗುತ್ತದೆ.

Read more about: layoffs jobs money
English summary

Cognizant to lay off 7,000 mid-to-senior employees

IT major Cognizant on Wednesday announced plans to continue job cuts at the organisation as part of its “2020 Fit for Growth” plan.
Story first published: Thursday, October 31, 2019, 15:28 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X