For Quick Alerts
ALLOW NOTIFICATIONS  
For Daily Alerts

ಕ್ರಿಪ್ಟೋಕರೆನ್ಸಿ ಖರೀದಿ ಆಯ್ಕೆ ನಿಷ್ಕ್ರಿಯಗೊಳಿಸಿದ ಕಾಯಿನ್ ಸ್ವಿಚ್

|

ನವದೆಹಲಿ, ಏಪ್ರಿಲ್ 12: ಕ್ರಿಪ್ಟೋಕರೆನ್ಸಿ ವಿನಿಮಯದ ಕಾಯಿನ್ ಸ್ವಿಚ್ ಕುಬೆರ್ ಸಂಸ್ಥೆಯು ಬ್ಯಾಂಕ್ ವರ್ಗಾವಣೆ ಸೇರಿದಂತೆ ತನ್ನಲ್ಲಿ ಕ್ರಿಪ್ಟೋ ಕರೆನ್ಸಿಗಳ ಖರೀದಿ ಮತ್ತು ಎಲ್ಲ ರೀತಿಯ ಪಾವತಿ ವಿಧಾನವನ್ನು ನಿಷ್ಕ್ರಿಯಗೊಳಿಸಿದೆ.

ಕಾಯಿನ್ ಬೇಸ್ ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಅನ್ನು ನಿಷ್ಕ್ರಿಯಗೊಳಿಸಿದ ಎರಡು ದಿನಗಳ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅದು ತನ್ನ ಪ್ಲಾಟ್‌ಫಾರ್ಮ್‌ನಲ್ಲಿನ ಏಕೈಕ ಕ್ರಿಪ್ಟೋ ಖರೀದಿ ಆಯ್ಕೆಯಾಗಿದೆ.

Gold Rate Today: ಚಿನ್ನದ ಬೆಲೆ 400 ರೂ. ಏರಿಕೆ: ದೇಶದ ಪ್ರಮುಖ ನಗರಗಳಲ್ಲಿ ಏ.12ರ ದರ ಹೇಗಿದೆ?Gold Rate Today: ಚಿನ್ನದ ಬೆಲೆ 400 ರೂ. ಏರಿಕೆ: ದೇಶದ ಪ್ರಮುಖ ನಗರಗಳಲ್ಲಿ ಏ.12ರ ದರ ಹೇಗಿದೆ?

ಕಾಯಿನ್ ಸ್ವಿಚ್ ಅಪ್ಲಿಕೇಶನ್‌ನಲ್ಲಿಯೂ, UPI ಮೂಲಕ ಭಾರತೀಯ ರೂಪಾಯಿ (INR) ಠೇವಣಿಗಳನ್ನು ಮತ್ತು ಬ್ಯಾಂಕ್ ವರ್ಗಾವಣೆ ಸೇರಿದಂತೆ ಇತರ ವಿಧಾನಗಳನ್ನು ತಡೆ ಹಿಡಿಯಲಾಗಿದೆ(Pause). ಅಪ್ಲಿಕೇಶನ್‌ನ ವ್ಯಾಲೆಟ್ ಅನ್ನು ಲೋಡ್ ಮಾಡುವುದಕ್ಕೆ ಹಾಗೂ ಕ್ರಿಪ್ಟೋಕರೆನ್ಸಿಯನ್ನು ಖರೀದಿಸಲು ಸಾಧ್ಯವಾಗುವುದಿಲ್ಲ. ಇದು 2021 ರಲ್ಲಿ 14 ಮಿಲಿಯನ್ ಬಳಕೆದಾರರನ್ನು ಕಂಡ ವೇದಿಕೆಯಲ್ಲಿ ವ್ಯಾಪಾರದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ.

ಕ್ರಿಪ್ಟೋಕರೆನ್ಸಿ ಖರೀದಿ ಆಯ್ಕೆ ನಿಷ್ಕ್ರಿಯಗೊಳಿಸಿದ ಕಾಯಿನ್ ಸ್ವಿಚ್

ಕ್ರಿಪ್ಟೋಕರೆನ್ಸಿ ಮೇಲೆ ಶೇ.30ರಷ್ಟು ತೆರಿಗೆ:

ಭಾರತದಲ್ಲಿ ಕ್ರಿಪ್ಟೋ ಕರೆನ್ಸಿಗಳ ವಹಿವಾಟಿನ ಮೇಲೆ ಕೇಂದ್ರ ಸರ್ಕಾರವೇ ಹದ್ದಿನ ಕಣ್ಣಿಟ್ಟಿದೆ. ಏಪ್ರಿಲ್ 1ರ ನಂತರದಲ್ಲಿ ನಡೆಯುವ ಕ್ರಿಪ್ಟೋ ಕರೆನ್ಸಿ ವಹಿವಾಟಿನ ಮೇಲೆ ಶೇ.30ರಷ್ಟು ತೆರಿಗೆ ವಿಧಿಸುವುದಕ್ಕೆ ನಿರ್ಧರಿಸಿರುವುದಾಗಿ ಕೇಂದ್ರ ಸರ್ಕಾರ ಈಗಾಗಲೇ ಘೋಷಿಸಿದೆ.

ಅಲ್ಲಿಂದ ಈಚೆಗೆ ಕ್ರಿಪ್ಟೋಕರೆನ್ಸಿ ವಿನಿಯಮ ಪಾವತಿ ವಿಧಾನದ ಆಯ್ಕೆಗಳು ಕಡಿಮೆಯಾಗುತ್ತಿವೆ, ಬಹು ಪ್ಲಾಟ್‌ಫಾರ್ಮ್‌ಗಳಲ್ಲಿ ಏಕೈಕ ವ್ಯಾಲೆಟ್ ಆಗಿದ್ದ Mobikwik ಏಪ್ರಿಲ್ 1 ರಿಂದ ತನ್ನ ಸೇವೆಗಳನ್ನು ಹಿಂತೆಗೆದುಕೊಂಡಿದೆ.

ಇದರ ನಂತರ ಭಾರತದಲ್ಲಿ ಕಾಯಿನ್ ಬೇಸ್ ಸಂಸ್ಥೆಯು ಕ್ರಿಪ್ಟೋ ಟ್ರೇಡಿಂಗ್ ಸೇವೆಗಳನ್ನು ಪ್ರಾರಂಭಿಸಿತು. ಇದು ಮೆಗಾ ಈವೆಂಟ್‌ನಲ್ಲಿ ಘೋಷಿಸಿದ್ದು, ಅಲ್ಲಿ ಗ್ರಾಹಕರ ಖರೀದಿಗೆ UPI ಅನ್ನು ಬಳಸಲು ಅನುಮತಿಸಲಾಗುವುದು ಎಂದು ಹೇಳಲಾಗಿತ್ತು. ಆದಾಗ್ಯೂ, ಅದೇ ದಿನ ಯುಪಿಐ ಅನ್ನು ನಿರ್ವಹಿಸುವ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಯುಪಿಐ ಬಳಸುವ ಯಾವುದೇ ಕ್ರಿಪ್ಟೋ ಪ್ಲಾಟ್‌ಫಾರ್ಮ್ ಬಗ್ಗೆ ತನಗೆ ತಿಳಿದಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿತ್ತು.

ಯುಪಿಐ ಆಯ್ಕೆಯನ್ನು ನಿಷ್ಕ್ರಿಯಗೊಳಿಸಿದ ಕಾಯಿನ್ ಬೇಸ್:

ಯುಪಿಐ ಆಯ್ಕೆಯನ್ನು ಕಾಯಿನ್ ಬೇಸ್ ಶೀಘ್ರದಲ್ಲೇ ನಿಷ್ಕ್ರಿಯಗೊಳಿಸಿತು. ಅದರ ಜೊತೆ ತನ್ನ ವಹಿವಾಟಿನ ವೇದಿಕೆಯಲ್ಲಿ ಕ್ರಿಪ್ಟೋಕರೆನ್ಸಿಗಳನ್ನು ಖರೀದಿಸಲು ಯಾವುದೇ ಆಯ್ಕೆಯನ್ನು ಬಿಡಲಿಲ್ಲ. NASDAQ ಪಟ್ಟಿ ಮಾಡಲಾದ ಕಂಪನಿಯ ಹೂಡಿಕೆಯ ಅಂಗವಾದ ಕಾಯಿನ್ ಬೇಸ್ ಉದ್ಯಮಗಳು ಕಾಯಿನ್ ಸ್ವಿಚ್ ಮತ್ತು ಕಾಯಿನ್ ಡಿಸಿಎಕ್ಸ್ ನಲ್ಲಿ ಹೂಡಿಕೆ ಮಾಡಿದೆ. ಇವು ಭಾರತದಲ್ಲಿನ ಎರಡು ಯುನಿಕಾರ್ನ್ ಕ್ರಿಪ್ಟೋ ವಿನಿಮಯ ಕೇಂದ್ರಗಳಾಗಿವೆ.

ಡಿಜಿಟಲ್ ಆಸ್ತಿ ಮೇಲೆ ತೆರಿಗೆ:

ಕ್ರಿಪ್ಟೋಕರೆನ್ಸಿ ರೀತಿಯ ವರ್ಚುವಲ್ ಡಿಜಿಟಲ್ ಅಸೆಟ್​ ಮೇಲೂ ತೆರಿಗೆ ವಿಧಿಸಲಾಗುತ್ತದೆ. ಯಾವುದೇ ವರ್ಚುವಲ್ ಡಿಜಿಟಲ್ ಅಸೆಟ್ ವರ್ಗಾವಣೆಗೆ ಶೇ.30ರ ತೆರಿಗೆ ಕಡಿತಗೊಳ್ಳಲಿದೆ. ಇದರಲ್ಲಿ ಯಾವುದೇ ಡಿಡಕ್ಷನ್ ಇಲ್ಲ. ಆದಾಯ ಯಾವುದೇ ಹೊಂದಾಣಿಕೆಗೆ ಅವಕಾಶ ಇಲ್ಲ. ವರ್ಚುವಲ್ ಡಿಜಿಟಲ್ ಅಸೆಟ್​ (ಕ್ರಿಪ್ಟೋಕರೆನ್ಸಿಯಂಥದ್ದಕ್ಕೆ) ಕೊಡುಗೆ(ಗಿಫ್ಟ್ ಮಾಡಿದರೂ) ಪಡೆಯುವವರಿಗೆ ಕೂಡ ತೆರಿಗೆ ಆಗುತ್ತದೆ. ವರ್ಚುವಲ್ ಡಿಜಿಟಲ್ ಅಸೆಟ್​ (ಕ್ರಿಪ್ಟೋಕರೆನ್ಸಿಯಂಥದ್ದಕ್ಕೆ) ಶೇ.1ರಷ್ಟು ಟಿಡಿಎಸ್​ ಪ್ರಸ್ತಾವಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆಯ ವೇಳೆಯಲ್ಲಿಯೇ ಹೇಳಿದ್ದರು.

English summary

Coin Switch Disables All Crypto Purchase Options on App Including Bank Transfer

Coin Switch disables all crypto purchase options on app including bank transfer. Know More.
Story first published: Tuesday, April 12, 2022, 19:25 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X