For Quick Alerts
ALLOW NOTIFICATIONS  
For Daily Alerts

ಇಂಡೇನ್ ಗ್ಯಾಸ್ ಬುಕ್ಕಿಂಗ್ ಗೆ ದೇಶಾದ್ಯಂತ ಒಂದೇ ಫೋನ್ ಸಂಖ್ಯೆ

|

ಇಂಡೇನ್ ಗ್ಯಾಸ್ ಬುಕ್ಕಿಂಗ್ ನಂಬರ್ ನವೆಂಬರ್ 1ನೇ ತಾರೀಕಿನಿಂದ ಬದಲಾವಣೆ ಆಗಿದೆ. ಇಂಡೇನ್ ಎಲ್ ಪಿಜಿ ರೀಫಿಲ್ ಬುಕ್ಕಿಂಗ್ ಗೆ ದೇಶದಾದ್ಯಂತ ಒಂದೇ ಸಾಮಾನ್ಯ ಸಂಖ್ಯೆ ಇರಲಿದೆ. 24X7 ಇಡೀ ದೇಶದಲ್ಲಿ 77189 55555 ಸಂಖ್ಯೆಗೆ ಕರೆ ಮಾಡಿ, ಗ್ಯಾಸ್ ಸಿಲಿಂಡರ್ ಬುಕ್ ಮಾಡಬಹುದು.

 

ಎಸ್ಸೆಮ್ಮೆಸ್ ಮತ್ತು ಐವಿಆರ್ ಎಸ್ ಮೂಲಕ ಎಲ್ ಪಿಜಿ ರೀಫಿಲ್ ಬುಕ್ಕಿಂಗ್ ಮಾಡಬಹುದು. ಒಂದು ವೇಳೆ ಗ್ರಾಹಕರು ಟೆಲಿಕಾಂ ವೃತ್ತ ಬದಲಾವಣೆ ಮಾಡಿದರೂ ಮತ್ತೊಂದು ರಾಜ್ಯಕ್ಕೆ ಬದಲಾದರೂ ಇಂಡೇನ್ ರೀಫಿಲ್ ಬುಕ್ಕಿಂಗ್ ಮಾಡುವ ಸಂಖ್ಯೆಯಲ್ಲಿ ಮಾತ್ರ ಏನೂ ಬದಲಾವಣೆ ಆಗುವುದಿಲ್ಲ.

 

MCXನಲ್ಲಿ ನವೆಂಬರ್ 14ಕ್ಕೆ ವಿಶೇಷ ಮುಹೂರ್ತ ಟ್ರೇಡಿಂಗ್MCXನಲ್ಲಿ ನವೆಂಬರ್ 14ಕ್ಕೆ ವಿಶೇಷ ಮುಹೂರ್ತ ಟ್ರೇಡಿಂಗ್

ಆದರೆ, ಗ್ರಾಹಕರು ತಮ್ಮ ನೋಂದಾಯಿತ ಮೊಬೈಲ್ ನಂಬರ್ ನಿಂದ ಮಾತ್ರ ಸಿಲಿಂಡರ್ ಬುಕ್ ಮಾಡಬಹುದು. ಈಗಾಗಲೇ ಇಂಡೇನ್ ದಾಖಲೆಗಳಲ್ಲಿ ಮೊಬೈಲ್ ಸಂಖ್ಯೆ ಇದ್ದಲ್ಲಿ ಸಿಲಿಂಡರ್ ಬುಕ್ ಮಾಡುವ ವಿಧಾನ ಹೀಗಿದೆ:

* ಐವಿಆರ್ ಎಸ್ ನಿಂದ ಹದಿನಾರು ಅಂಕಿಯ ಗ್ರಾಹಕರ ಐ.ಡಿ. ಕಂಡುಬರುತ್ತದೆ

* ಇದೇ ಹದಿನಾರು ಅಂಕಿಯ ಗ್ರಾಹಕರ ಐ.ಡಿ. ಎಲ್ ಪಿಜಿ ಇನ್ ವಾಯ್ಸ್ ಗಳು/ ಕ್ಯಾಶ್ ಮೆಮೋ/ ಸಬ್ ಸ್ಕ್ರಿಪ್ಷನ್ ವೋಚರ್ ಗಳಲ್ಲೂ ಇರುತ್ತದೆ.

* ಗ್ರಾಹಕರಿಂದ ಖಾತ್ರಿಯಾದ ಮೇಲೆ ರೀಫಿಲ್ ಬುಕ್ಕಿಂಗ್ ತೆಗೆದುಕೊಳ್ಳುತ್ತದೆ.

ಇಂಡೇನ್ ಗ್ಯಾಸ್ ಬುಕ್ಕಿಂಗ್ ಗೆ ದೇಶಾದ್ಯಂತ ಒಂದೇ ಫೋನ್ ಸಂಖ್ಯೆ

ಇಂಡೇನ್ ದಾಖಲೆಗಳಲ್ಲಿ ಗ್ರಾಹಕರ ಮೊಬೈಲ್ ಸಂಖ್ಯೆ ಲಭ್ಯ ಇಲ್ಲದಿದ್ದಲ್ಲಿ ಅನುಸರಿಸಬೇಕಾದ ನಿಯಮ
* 7ರ ಅಂಕಿಯೊಂದಿಗೆ ಆರಂಭವಾಗುವ ಗ್ರಾಹಕರ 16 ಅಂಕಿಯ ಐಡಿ ನಮೂದಿಸಿ ಒಂದು ಸಲದ ತಮ್ಮ ಮೊಬೈಲ್ ಸಂಖ್ಯೆಯ ನೋಂದಣಿ ಮಾಡಿಸಬೇಕು.

* ಆ ನಂತರ ಅದೇ ಐವಿಆರ್ ಎಸ್ ಕಾಲ್ ನೊಂದಿಗೆ ಅಥೆಂಟಿಕೇಷನ್ ಆಗಬೇಕು.

* ಖಾತ್ರಿ ಆದ ಮೇಲೆ ಗ್ರಾಹಕರ ಮೊಬೈಲ್ ಸಂಖ್ಯೆ ನೋಂದಣಿ ಆಗುತ್ತದೆ ಮತ್ತು ಎಲ್ ಪಿಜಿ ಬುಕ್ಕಿಂಗ್ ರೀಫಿಲ್ ಸ್ವೀಕೃತವಾಗುತ್ತದೆ.

* ಈ ಹದಿನಾರು ಅಂಕಿಯ ಗ್ರಾಹಕರ ಐಡಿ ಇಂಡೇನ್ ಎಲ್ ಪಿಜಿ ಇನ್ ವಾಯ್ಸ್/ ಕ್ಯಾಶ್ ಮೆಮೋಗಳು/ಸಬ್ ಸ್ಕ್ರಿಪ್ಷನ್ ವೋಚರ್ ನಲ್ಲಿ ಇರುತ್ತದೆ.

English summary

Common Phone Number Throughout India For Indane LPG Refill Bookings From November 1

Common phone number for pan India for Indane LPG refill bookings from November 1, 2020.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X