For Quick Alerts
ALLOW NOTIFICATIONS  
For Daily Alerts

ಗ್ರಾಹಕರ ವಿಶ್ವಾಸ ಸೂಚ್ಯಂಕ ನವೆಂಬರ್ ನಲ್ಲಿ ಐದು ವರ್ಷದಲ್ಲೇ ಕನಿಷ್ಠ ಮಟ್ಟಕ್ಕೆ

|

ಭಾರತದಲ್ಲಿ ಗ್ರಾಹಕರ ವಿಶ್ವಾಸವು ಐದು ವರ್ಷಕ್ಕೆ ಹೋಲಿಸಿದರೆ ಕನಿಷ್ಠ ಮಟ್ಟಕ್ಕೆ ತಲುಪಿದೆ. ಅಂದ ಹಾಗೆ ಐದು ವರ್ಷದ ಹಿಂದೆ ಅಂದರೆ ಅದು ನರೇಂದ್ರ ಮೋದಿ ಅವರು ಮೊದಲನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾದ ವರ್ಷ. ಗ್ರಾಹಕರ ವಿಶ್ವಾಸ ಸೂಚ್ಯಂಕವು ಸೆಪ್ಟೆಂಬರ್ ನಲ್ಲಿ 89.4 ಇತ್ತು. ಅದು ನವೆಂಬರ್ ನಲ್ಲಿ 85.7ಕ್ಕೆ ಕುಸಿದಿದೆ.

ನೂರು ಎಂಬ ಸಂಖ್ಯೆಯು ಆಶಾವಾದ ಮತ್ತು ನಿರಾಶಾವಾದದ ಮಧ್ಯೆ ಗೆರೆ ಇದ್ದಂತೆ. ಏಷ್ಯಾದ ಮೂರನೇ ಅತಿ ದೊಡ್ಡ ಆರ್ಥಿಕತೆ ಭಾರತ. ಇಲ್ಲಿನ ಆರ್ಥಿಕ ಹಿಂಜರಿತದ ಸನ್ನಿವೇಶದಲ್ಲಿ ಗ್ರಾಹಕರ ವಿಶ್ವಾಸಾರ್ಹ ಸೂಚ್ಯಂಕದಲ್ಲೂ ಇಳಿಕೆಯಾಗಿದೆ. ಕಳೆದ ಕೆಲ ಸಮಯದಿಂದಲೇ ಈ ಸಮಸ್ಯೆ ಇದ್ದು, ಬ್ಯಾಂಕಿಂಗ್ ವಲಯದ ಮೇಲೆ ಬಿಕ್ಕಟ್ಟಿನ ಛಾಯೆ ಮೂಡಿಸಿದೆ. ಇದರಿಂದ ಸಾಲ ನೀಡುವುದು ಕೂಡ ಕಷ್ಟವಾಗಿದೆ.

ಗ್ರಾಹಕರ ಬಳಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಈ ರೀತಿ ಗ್ರಾಹಕ ಬಳಕೆಯೇ ದೇಶದ ಆರ್ಥಿಕತೆಯ 60% ಇದೆ. ಇವೆಲ್ಲ ಕಾರಣವೂ ಸೇರಿ ಜಿಡಿಪಿ ಬೆಳವಣಿಗೆ ದರವು ಸೆಪ್ಟೆಂಬರ್ ಅಂತ್ಯದ ತ್ರೈಮಾಸಿಕಕ್ಕೆ ಆರು ವರ್ಷದ ಕನಿಷ್ಠ ಮಟ್ಟಕ್ಕೆ ಕುಸಿದಿದೆ.

ಗ್ರಾಹಕರ ವಿಶ್ವಾಸ ಸೂಚ್ಯಂಕ ನವೆಂಬರ್ ನಲ್ಲಿ ಐದು ವರ್ಷದಲ್ಲೇ ಕನಿಷ್ಠ

ಇದೀಗ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ 13 ದೊಡ್ಡ ನಗರಗಳಲ್ಲಿ ಮತ್ತು 5,334 ಕುಟುಂಬಗಳ ಸಮೀಕ್ಷೆ ನಡೆಸಲಾಗಿತ್ತು. ಸಾಮಾನ್ಯ ಆರ್ಥಿಕ ಸನ್ನಿವೇಶದಲ್ಲಿ ಗ್ರಾಹಕರ ಮನಸ್ಥಿತಿ, ನಿರೀಕ್ಷೆ, ಉದ್ಯೋಗ, ಮತ್ತು ಆದಾಯ- ಖರ್ಚು ಹೊರತುಪಡಿಸಿ ಒಟ್ಟಾರೆ ದರದ ಪರಿಸ್ಥಿತಿ ಬಗ್ಗೆ ಸಮೀಕ್ಷೆ ಮಾಡಲಾಗಿದೆ.

ಕಳೆದ ವರ್ಷಕ್ಕಿಂತ ಈ ವರ್ಷ ದರ ಏರಿಕೆ ಆಗಿದೆ ಮತ್ತು ಮುಂದಿನ ವರ್ಷಗಳಲ್ಲೂ ಬೆಲೆ ಜಾಸ್ತಿ ಆಗಬಹುದು. ಭವಿಷ್ಯದಲ್ಲಿ ಹಣದುಬ್ಬರದ ಒತ್ತಡ ಕಾಡಬಹುದು ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡವರಲ್ಲಿ ಬಹಳ ಮಂದಿ ಹೇಳಿದ್ದಾರೆ.

English summary

Consumer Confidence Dropped To 5 Year Low

According to RBI survey, India consumer confidence dropped to 5 year low in November. Here is the complete details.
Story first published: Friday, December 6, 2019, 19:20 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X