For Quick Alerts
ALLOW NOTIFICATIONS  
For Daily Alerts

ಕೊರೊನಾವೈರಸ್ ವಿರುದ್ಧ ಹೋರಾಟಕ್ಕೆ 500 ಕೋಟಿ ದೇಣಿಗೆ ನೀಡುತ್ತೇವೆ:ಪೇಟಿಎಂ

|

ದೇಶದಲ್ಲಿ ಕೊರೊನಾವೈರಸ್ ವಿರುದ್ಧ ಹೋರಾಟಕ್ಕೆ ಪೇಟಿಎಂ ಕೂಡ ಸಾಥ್ ನೀಡಿದ್ದು ಪ್ರಧಾನಿ ನಿಧಿಗೆ 500 ಕೋಟಿ ನೀಡುವುದಾಗಿ ಹೇಳಿಕೆ ನೀಡಿದೆ.

ಭಾರತದ ಖ್ಯಾತ ಡಿಜಿಟಲ್ ಪಾವತಿ ಸಂಸ್ಥೆಯಾದ ಪೇಟಿಎಂ ಸಂಸ್ಥೆಯು, ಭಾರತದಲ್ಲಿ ವ್ಯಾಪಕ ಭೀತಿ ಸೃಷ್ಟಿಸಿರುವ ಕೊರೋನಾ ವೈರಸ್ ನಿರ್ಮೂಲನೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ಮಾಡಿರುವ ಪಿಎಂ ಕೇರ್ಸ್ ಫಂಡ್ ಗೆ 500 ಕೋಟಿ ರುಪಾಯಿ ದೇಣಿಗೆ ನೀಡುವುದಾಗಿ ಭರವಸೆ ನೀಡಿದೆ.

ಕೊರೊನಾ ವಿರುದ್ಧ ಹೋರಾಟಕ್ಕೆ 500 ಕೋಟಿ ದೇಣಿಗೆ ನೀಡುತ್ತೇವೆ:ಪೇಟಿಎಂ

 

ದೇಶಾದ್ಯಂತ ವಿವಿಧ ಸಂಸ್ಥೆಗಳು ಮತ್ತು ಉದ್ಯಮಿಗಳು ಹಾಗೂ ಸೆಲೆಬ್ರೆಟಿಗಳಿಂದ ನೂರಾರು ಕೋಟಿ ರುಪಾಯಿಗಳ ದೇಣಿಗೆ ಸಂಗ್ರಹವಾಗುತ್ತಿದ್ದು, ಈ ಪಟ್ಟಿಗೆ ಇದೀಗ ಖ್ಯಾತ ಡಿಜಿಟಲ್ ಪೇಮೆಂಟ್ ಸಂಸ್ಥೆ ಪೇಟಿಎಂ ಕೂಡ ಸೇರ್ಪಡೆಯಾಗಿದೆ.

ಕೊರೊನಾ ವಿರುದ್ಧದ ಹೋರಾಟಕ್ಕೆ 500 ಕೋಟಿ ರುಪಾಯಿ ಘೋಷಿಸಿದ ಟಾಟಾ ಟ್ರಸ್ಟ್

ಸಂಸ್ಥೆಯ ಹೇಳಿಕೆಯಲ್ಲಿ ಪೇಟಿಎಂ (Paytm) ವ್ಯಾಲೆಟ್, ಯುಪಿಐ (UPI) ಹಾಗೂ ಪೇಟಿಎಂ ಡೆಬಿಟ್ ಕಾರ್ಡ್ ಗಳನ್ನು ಉಪಯೋಗಿಸಿ ಪೇಟಿಎಂ ಮಾಧ್ಯಮದಿಂದ ಮಾಡಲಾಗಿರುವ ಪ್ರತಿ ಹಣದ ವಹಿವಾಟಿನ ಮೇಲೆ ತಾನು ಪ್ರಧಾನಿ ನಿಧಿಗೆ 10 ರುಪಾಯಿ ಹೆಚ್ಚುವರಿ ಕೊಡುಗೆ ನೀಡುವುದಾಗಿ ಘೋಷಿಸಿದೆ. ಅಷ್ಟೇ ಅಲ್ಲದೆ ಪೇಟಿಎಂ ಆಪ್ ಹಾಗೂ ಅದರ ಇನ್ಸ್ಟ್ರುಮೆಂಟ್ಸ್ ಮಾಧ್ಯಮದ ಮೂಲಕ ಮಾಡಲಾಗುವ ಪ್ರತಿ ಹಣ ಪಾವತಿಗೆ 10 ರುಪಾಯಿ ಹೆಚ್ಚುವರಿ ಕೊಡುಗೆಯನ್ನು ತನ್ನ ಪರವಾಗಿ ನೀಡಲಿದೆ.

ಇವುಗಳ ಜೊತೆಗೆ ಕಂಪನಿ ಈ ವೈರಸ್ ವಿರುದ್ಧ ಹೋರಾಟ ನಡೆಸಲು ತಯಾರಿಸಲಾಗಿರುವ ಚಿಕಿತ್ಸೆಯ ಉಪಕರಣಗಳು ಹಾಗೂ ಔಷದಿ ತಯಾರಿಸುವಲ್ಲಿ ನಿರತರಾಗಿರುವ ತಜ್ಞರಿಗಾಗಿ 5 ಕೋಟಿ ರೂ. ಗಳ ನಿಧಿ ಸ್ಥಾಪಿಸಿದೆ. ಪಿಎಂ ಕೇರ್ಸ್ ಫಂಡ್‌ಗೆ ನೀಡಲಾಗುವ ಎಲ್ಲಾ ಕೊಡುಗೆಗಳು ಸಂಪೂರ್ಣ ತೆರಿಗೆ ವಿನಾಯ್ತಿ ನೀಡಲಾಗುತ್ತದೆ.

English summary

Corona Crisis Paytm Will Donate 500 Crore

Online payment platform Paytm has announced that it aims to contribute Rs 500 crore to Prime Minster's Citizen Assistance and Relief in Emergency Situations Fund (PM CARES)
Story first published: Monday, March 30, 2020, 9:02 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X