For Quick Alerts
ALLOW NOTIFICATIONS  
For Daily Alerts

ಕೊರೊನಾಯಿಂದ ನೆಲಕಚ್ಚಿದ ಲೋಹದ ಹಕ್ಕಿಗಳು, ವಿಶ್ವದಾದ್ಯಂತ ವಿಮಾನಯಾನ ಸಂಸ್ಥೆಗಳಿಗೆ ಭಾರೀ ನಷ್ಟ

|

ಕೊರೊನಾವೈರಸ್‌ನಿಂದಾಗಿ ವಿಶ್ವದಾದ್ಯಂತ ಎಲ್ಲಾ ಉದ್ಯಮಗಳು ಬಂದ್ ಆಗಿವೆ. ಇದರ ಜೊತೆಗೆ ಈಗಾಗಲೇ ಅಂತರರಾಷ್ಟ್ರೀಯ ವಿಮಾನ ಸಂಚಾರವು ರದ್ದಾಗಿದೆ. ಕೆಲವು ತುರ್ತು ವಿಮಾನಗಳ ಸಂಚಾರದ ಹೊರತು ಭಾರತವೂ ಕೂಡ ವಿಮಾನ ಸಂಚಾರ ರದ್ದು ಮಾಡಿದೆ. ಇದರಿಂದ ಜಾಗತಿಕವಾಗಿ ನಾಗರಿಕ ವಿಮಾನ ಯಾನ ಸಂಸ್ಥೆಗಳು ಕೋಟ್ಯಂತರ ರುಪಾಯಿ ನಷ್ಟವನ್ನು ಅನುಭವಿಸಿವೆ.

ಏರ್‌ಟ್ರಾಫಿಕ್‌ ಸಂಬಂಧಪಟ್ಟಂತೆ ಅಂತಾರಾಷ್ಟ್ರೀಯ ವಿಮಾನ ಪ್ರಯಾಣದಲ್ಲಿ 50 ಪರ್ಸೆಂಟ್‌ರಷ್ಟು ಕುಸಿತವಾಗಿದೆ. ಇನ್ನು ಫ್ಲೈಟ್‌ ರಾಡರ್‌ ಸಂಸ್ಥೆ ನೀಡಿರುವ ಅಂಕಿ -ಅಂಶದಲ್ಲಿ ಕೇವಲ ವಾಣಿಜ್ಯೇತರ ವಿಮಾನಯಾನ ಸಂಸ್ಥೆಗಳ ಮಾಹಿತಿ ಮಾತ್ರ ಉಲ್ಲೇಖವಾಗಿದ್ದು, ವಾಣಿಜ್ಯ ವಿಮಾನಗಳ ಕಾರ್ಯಾಚರಣೆ ಕುರಿತಾದ ಅಂಕಿ-ಅಂಶ ಇದರಲ್ಲಿ ಒಳಗೊಂಡಿಲ್ಲ. ಒಂದು ವೇಳೆ ಎಲ್ಲ ವಾಣಿಜ್ಯ ಸಂಸ್ಥೆಗಳ ಮಾಹಿತಿ ಸಿಕ್ಕಲ್ಲಿ ನಷ್ಟದ ಪ್ರಮಾಣ ಮತ್ತಷ್ಟು ಹೆಚ್ಚಲಿದೆ.

ಕೊರೊನಾಯಿಂದ ನೆಲಕಚ್ಚಿದ ಲೋಹದ ಹಕ್ಕಿಗಳು, ಸಂಸ್ಥೆಗಳಿಗೆ ಭಾರೀ ನಷ್ಟ

ಇನ್ನು ಲಾಕ್‌ಡೌನ್‌ ಜಾರಿಯಲ್ಲಿದ್ದು, ಪ್ರಯಾಣಿಕರು ಇಲ್ಲದಿದ್ದರೂ ಸಾವಿರಾರು ವಿಮಾನಗಳು ಹಾರಾಟ ನಡೆಸುತ್ತಿವೆ. ಅಂತಾರಾಷ್ಟ್ರೀಯ ಮಾರ್ಗವಾಗಿ ಹಾರಾಡುವ ಕೆಲ ವಿಮಾನಗಳು ಪರವಾನಗಿ ಉಳಿಸಿಕೊಳ್ಳಲು ನಿರ್ದಿಷ್ಟ ಪ್ರಮಾಣದಲ್ಲಿ ಹಾರಾಟ ನಡೆಸಬೇಕೆಂಬ ನಿಯಮವೇ ಇದಕ್ಕೆ ಕಾರಣ. ಈಗ ಯುರೋಪಿಯನ್‌ ಒಕ್ಕೂಟ ಪ್ರಾಂತ್ಯದಲ್ಲಿ ನಿಯಮವನ್ನು ಸಡಿಲಿಸಿದ್ದು, ಮಾರ್ಗಗಳನ್ನು ರದ್ದುಗೊಳಿಸಿದೆ. ಆದರೂ ಹಲವು ದೇಶಗಳಲ್ಲಿ ದೇಶಿ ವಿಮಾನ ಸಂಚಾರ ಸಂಪೂರ್ಣವಾಗಿ ರದ್ದುಗೊಳ್ಳದ ಕಾರಣ ಸಾವಿರರಾರು ವಿಮಾನಗಳು ಹಾರಾಡುತ್ತಿವೆ.

ವಿಮಾನಯಾನ ಸಂಚಾರ ರದ್ದಿನಿಂದ ಆರ್ಥಿಕತೆಯ ಮೇಲೆ ಪರಿಣಾಮ ಬೀರಿದರೂ ಪರಿಸರಕ್ಕೆ ಅನುಕೂಲವಾಗಿದೆ. ಏಕೆಂದರೆ, ವಿಮಾನ ಯಾನ ರದ್ದಿನಿಂದ ಹಸಿರು ಅನಿಲ ಉತ್ಪಾದನೆ ಪ್ರಮಾಣ ಬಹಳಷ್ಟು ಇಳಿಕೆಯಾಗಿದೆ. ಕೋವಿಡ್-19 ವೈರಸ್‌ ಆವರಿಸಿಕೊಳ್ಳುವ ಮೊದಲು ವಿಮಾನ ಸಂಚಾರದಿಂದ ವಾಯು ಮಾಲಿನ್ಯ ಮಟ್ಟ ನಿರಂತರವಾಗಿ ಏರಿಕೆಯಾಗುತ್ತಿತ್ತು. ಒಂದು ಅಂದಾಜಿನಲ್ಲಿ ಹೇಳುವುದಾದರೆ 1990 ರಿಂದ 2019 ರಷ್ಟೊತ್ತಿಗೆ ವಾಯು ಮಾಲಿನ್ಯ ಮಟ್ಟ ದ್ವಿಗುಣಗೊಂಡಿತ್ತು.

English summary

Corona Effect Big Loss For World's Airlines

Corona impact biggest loss facing world's airlines, because of international travel cancel around the world
Story first published: Thursday, April 9, 2020, 9:04 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X