For Quick Alerts
ALLOW NOTIFICATIONS  
For Daily Alerts

ಕೊರೊನಾ ಎಫೆಕ್ಟ್: CarDekhoದಿಂದ 200 ಉದ್ಯೋಗಿಗಳಿಗೆ ಕೊಕ್

|

ಆನ್ ಲೈನ್ ವಾಹನಗಳ ಕ್ಲಾಸಿಫೈಡ್ ಪೋರ್ಟಲ್ CarDekhoದಿಂದ 200 ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲಾಗಿದೆ. ಇನ್ನು ಎಲ್ಲ ವಿಭಾಗಗಳ ಸಿಬ್ಬಂದಿಗೂ ವೇತನ ಕಡಿತ ಮಾಡಲಾಗಿದೆ. ಸ್ಟಾರ್ಟ್ ಅಪ್ ಗಳ ಪೈಕಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದ ಹಲವು ಕಂಪೆನಿಗಳು ಕೊರೊನಾದ ಕಾರಣಕ್ಕೆ ಉದ್ಯೋಗ ಕಡಿತ, ವೇತನ ಕಡಿತ ಮಾಡಿವೆ. ಅದರಲ್ಲಿ ಜೈಪುರ್ ಮೂಲದ CarDekho ಕೂಡ ಸೇರ್ಪಡೆಯಾಗಿದೆ.

ಈ ಬಗ್ಗೆ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ. ಉದ್ಯೋಗಿಗಳನ್ನು ತೆಗೆದಿರುವ ಹಾಗೂ ವೇತನ ಕಡಿತ ಮಾಡಿರುವ ಬಗ್ಗೆ CarDekho ವಕ್ತಾರರಿಂದ ಖಚಿತವಾಗಿದ್ದು, ನಿರ್ದಿಷ್ಟ ಪ್ರಶ್ನೆಗಳಿಗೆ ಯಾವುದೇ ಹೆಚ್ಚಿನ ಮಾಹಿತಿಯನ್ನು ನೀಡಿಲ್ಲ. CarDekhoದಲ್ಲಿ 5000 ಮಂದಿ ಕಾರ್ಯ ನಿರ್ವಹಿಸುತ್ತಿದ್ದು, ಆ ಪೈಕಿ 200 ಮಂದಿಯನ್ನು ಕೆಲಸದಿಂದ ತೆಗೆಯಲಾಗಿದೆ. ಈ ಸಂಖ್ಯೆ ಇನ್ನಷ್ಟು ಜಾಸ್ತಿ ಆಗಬಹುದು ಎನ್ನುತ್ತವೆ ಮೂಲಗಳು.

ಉಬರ್ ನಿಂದ ಭಾರತದಲ್ಲಿ ಶೇಕಡಾ 25ರಷ್ಟು ಸಿಬ್ಬಂದಿಗೆ ಪಿಂಕ್ ಸ್ಲಿಪ್ಉಬರ್ ನಿಂದ ಭಾರತದಲ್ಲಿ ಶೇಕಡಾ 25ರಷ್ಟು ಸಿಬ್ಬಂದಿಗೆ ಪಿಂಕ್ ಸ್ಲಿಪ್

ಇನ್ನು ವೇತನ ಕಡಿತದ ವಿಚಾರಕ್ಕೆ ಬಂದರೆ, ವಾರ್ಷಿಕ 2.5 ಲಕ್ಷದಿಂದ 5 ಲಕ್ಷ ವೇತನ ಪಡೆಯುವವರಿಗೆ 12 ಪರ್ಸೆಂಟ್ ವೇತನ ಕಡಿತ, 5 ಲಕ್ಷದಿಂದ 15 ಲಕ್ಷದ ತನಕ ಗಳಿಕೆ ಇರುವವರಿಗೆ 12 ಪರ್ಸೆಂಟ್ ಕಡಿತ, 5ರಿಂದ 15 ಲಕ್ಷದ ಆದಾಯಕ್ಕೆ 15 ಪರ್ಸೆಂಟ್, 15ರಿಂದ 40 ಲಕ್ಷ ಹಾಗೂ 40 ಲಕ್ಷದ ಮೇಲೆ ಆದಾಯ ಇರುವವರಿಗೆ ಕ್ರಮವಾಗಿ 20, 22.5 ಪರ್ಸೆಂಟ್ ವೇತನ ಕಡಿತ ಮಾಡಲಾಗುತ್ತಿದೆ.

ಕೊರೊನಾ ಎಫೆಕ್ಟ್: CarDekhoದಿಂದ 200 ಉದ್ಯೋಗಿಗಳಿಗೆ ಕೊಕ್

ಮೇ ತಿಂಗಳಿಂದ ಜುಲೈ ಮಧ್ಯ ಈ ವೇತನ ಕಡಿತ ಜಾರಿಯಲ್ಲಿ ಇದುತ್ತದೆ. CarDekhoಗೆ ಉತ್ತಮ ಹಣಕಾಸು ಹೂಡಿಕೆ ಬಂದಿತ್ತು. ಆದರೆ ಕೊರೊನಾ ವೈರಸ್ ಪರಿಣಾಮ ಅದರ ಮೇಲೆ ತೀವ್ರವಾಗಿ ಆಗಿದೆ. ಆ ಕಾರಣದಿಂದಲೇ ಉದ್ಯೋಗ ಹಾಗೂ ವೇತನ ಕಡಿತದಂಥ ತೀರ್ಮಾನಗಳನ್ನು ಕೈಗೊಂಡು, ಸಂಸ್ಥೆಯನ್ನು ಉಳಿಸುವ ಪ್ರಯತ್ನ ನಡೆದಿದೆ.

English summary

Corona Effect: CarDekho Lays Off 200 Employees

Lays off 200 employees and pay cut for others by Jaipur based CarDekho.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X