For Quick Alerts
ALLOW NOTIFICATIONS  
For Daily Alerts

ಲಾಕ್‌ಡೌನ್‌ ಹಿನ್ನೆಲೆ, ಹೊರರಾಜ್ಯಗಳಿಗೆ ನಂದಿನಿ ಹಾಲು ಪೂರೈಕೆ ಸ್ಥಗಿತ

|

ಕರ್ನಾಟಕದ ಜನಪ್ರಿಯ ಹಾಲು ಬ್ರಾಂಡ್ ನಂದಿಯ ಮಾಲೀಕತ್ವದ ಕೆಎಂಎಫ್‌ ಕೊರೊನಾವೈರಸ್ ಕಾರಣಕ್ಕೆ ಹೊರರಾಜ್ಯಗಳಿಗೆ ಹಾಲು ಪೂರೈಕೆಯನ್ನು ಸ್ಥಗಿತಗೊಳಿಸಿದೆ. ದೇಶಾದ್ಯಂತ ಲಾಕ್‌ಡೌನ್ ಆಗಿರುವ ಕಾರಣ ಅಗತ್ಯ ವಸ್ತುಗಳ ಹೊರತು ಬೇರೆಲ್ಲಾ ಉದ್ಯಮಗಳು ಸ್ಥಗಿತಗೊಂಡಿದೆ.

ದೇಶಾದ್ಯಂತ ಕೊರೊನಾವೈರಸ್ ಹಿನ್ನೆಲೆ ಏಪ್ರಿಲ್ 15ರ ವರೆಗೆ ಲಾಕ್‌ಡೌನ್‌ ಇರಲಿದೆ ಹೀಗಾಗಿ ಹೊರ ರಾಜ್ಯಗಳಿಗೆ ಹಾಲಿನ ಪೂರೈಕೆಗೂ ಸಹ ಸಮಸ್ಯೆಯಾಗಿದೆ. ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ಹೊರರಾಜ್ಯಗಳ ಗಡಿ ಲಾಕ್‌ಡೌನ್ ಆಗಿರುವುದರಿಂದ ನಂದಿನಿ ಹಾಲು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದು ಕೆಎಂಎಫ್ ಹೇಳಿದೆ.

ಲಾಕ್‌ಡೌನ್‌ ಹಿನ್ನೆಲೆ, ಹೊರರಾಜ್ಯಗಳಿಗೆ ನಂದಿನಿ ಹಾಲು ಪೂರೈಕೆ ಸ್ಥಗಿತ

ಇದರ ಜೊತೆಗೆ ಬಹುತೇಕ ಎಲ್ಲಾ ಹೋಟೆಲ್ ಉದ್ಯಮಗಳು ತಾತ್ಕಾಲಿಕವಾಗಿ ಮುಚ್ಚಿದ ಕಾರಣ ಹೊರರಾಜ್ಯಗಳಲ್ಲೂ ಬೇಡಿಕೆ ಕಡಿಮೆಯಾಗಿದ್ದು, ರಾಜ್ಯದಲ್ಲೂ ಕೂಡ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ದರ್ಶಿನಿಗಳು ತಮ್ಮ ವ್ಯವಹಾರವನ್ನು ತಾತ್ಕಾಲಿಕವಾಗಿ ನಿಲ್ಲಿಸಿದ ನಂತರ ಬೇಡಿಕೆ ಕಡಿಮೆಯಾಗಿದೆ.

ಮನೆಗಳಿಗೆ ಬೇಕಾದ ಹಾಲಿನ ಬೇಡಿಕೆಯಲ್ಲಿ ಯಾವುದೇ ವ್ಯತ್ಯಾಸವಾಗದೆ ಯಥಾ ಸ್ಥಿತಿಯಲ್ಲಿದೆ. ಆದರೆ ಹೊರರಾಜ್ಯಕ್ಕೆ ಕಳುಹಿಸಬೇಕಾದ ಎರಡೂವರೆ ಲಕ್ಷ ಲೀಟರ್ ಹಾಲು ಪೂರೈಕೆ ಸ್ಥಗಿತವಾಗಿದೆ. ಹೀಗೆ ಸರಬರಾಜು ಆಗದ ಹಾಲನ್ನು ಪೌಡರ್ ರೂಪಕ್ಕೆ ಮಾರ್ಪಡಿಸಾಗುತ್ತದೆ.

English summary

Corona Effect KMF Milk Supply Takes Hit

The Karnataka Cooperative Milk Federation (KMF), the owner of popular milk-brand Nandini, has scaled down export of milk to the neighbouring states after they sealed borders,
Story first published: Friday, March 27, 2020, 9:02 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X