For Quick Alerts
ALLOW NOTIFICATIONS  
For Daily Alerts

ಕೊರೊನಾ ಕಾರಣ: 1 ವರ್ಷ ದೇಶದ ಎಲ್ಲಾ ಸಂಸದರ 30 ಪರ್ಸೆಂಟ್ ವೇತನ ಕಟ್

|

ಕೊರೊನಾವೈರಸ್ ಕಾರಣ ದೇಶವು 21 ದಿನಗಳ ಲಾಕ್‌ಡೌನ್‌ಗೆ ಒಳಪಟ್ಟಿದ್ದು, ಭಾರೀ ಆರ್ಥಿಕ ನಷ್ಟ ಅನುಭವಿಸುತ್ತಿರುವುದರಿಂದ ಒಂದು ವರ್ಷ ದೇಶದ ಎಲ್ಲಾ ಸಂಸದರ 30 ಪರ್ಸೆಂಟ್ ವೇತನವನ್ನು ಪ್ರಧಾನಿ ಪರಿಹಾರ ನಿಧಿಗೆ ನೀಡುವ ತೀರ್ಮಾನ ಕೈಗೊಳ್ಳಲಾಗಿದೆ.

 

ದೇಶದ ಎಲ್ಲಾ ಸಂಸದರ ವೇತನವು ಏಪ್ರಿಲ್ 1ರಿಂದಲೇ 30 ರಷ್ಟು ಕಡಿತಗೊಳಿಸಲು ಕ್ಯಾಬಿನೆಟ್ ಅನುಮೋದನೆ ನೀಡಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ. ಪ್ರಧಾನಿ ವೇತನ ಸೇರಿದಂತೆ ಎಲ್ಲಾ ಸಚಿವರು, ಸಂಸದರ ಸಂಬಳವನ್ನು ಕಡಿತ ಮಾಡಲಾಗುತ್ತಿದೆ. ಮುಂದಿನ 2 ವರ್ಷ ಸಂಸದರ ನಿಧಿ ಸ್ಥಗಿತ ಮಾಡಲಾಗುವುದು ಎಂದು ಹೇಳಲಾಗಿದೆ.

ಕೊರೊನಾ ಕಾರಣ: 1 ವರ್ಷ ದೇಶದ ಎಲ್ಲಾ ಸಂಸದರ 30 ಪರ್ಸೆಂಟ್ ವೇತನ ಕಟ್

ಇದೇ ವೇಳೆ ಮಾತನಾಡಿ ರಾಷ್ಟ್ರಪತಿ, ಉಪರಾಷ್ಟ್ರಪತಿಯಿಂದಲೂ ದೇಣಿಗೆ ಸಂಗ್ರಹಿಸಲಾಗುತ್ತದೆ. ರಾಜ್ಯಪಾಲರು ಸಹ ಒಂದು ವರ್ಷದ ವೇತನದಲ್ಲಿ 30 ಪರ್ಸೆಂಟ್‌ರಷ್ಟು ಕಡಿತವನ್ನು ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ.

ಸಂಸತ್ತಿನ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆ(MPLDS) ನಿಧಿಯ ಸದಸ್ಯರ ರದ್ದತಿ ಬಗ್ಗೆಯೂ ಸಂಪುಟ ತೀರ್ಮಾನಿಸಿತು. 2020-21 ಮತ್ತು 2021-22ರ ಎರಡು ವರ್ಷಗಳ ಕಾಲ ಎಂಪಿಎಲ್‌ಡಿಎಸ್ ಅನ್ನು ಅಮಾನತುಗೊಳಿಸಲಾಗುವುದು. ಇದರಿಂದ ಒಟ್ಟಾರೆ 7,900 ಕೋಟಿ ರುಪಾಯಿ ಉಳಿತಾಯವಾಗುತ್ತದೆ ಎಂದು ಜಾವಡೇಕರ್ ಹೇಳಿದ್ದಾರೆ.

English summary

Corona Impact 30 Percent Pay Cut For All MPs

Cabinet has approved ordinance that seeks to cut members of parliament’s salary by 30 percent for a year.
Story first published: Monday, April 6, 2020, 17:37 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X